ETV Bharat / bharat

ವಿಶೇಷ ಅಂಕಣ: ಭಾರತದ ವಿರುದ್ಧ ಪಾಕಿಸ್ತಾನ ಅನುಸರಿಸುವ ಶೀತಲ ತಂತ್ರ ಭಯೋತ್ಪಾದನೆ - ಪಾಕಿಸ್ತಾನದ ಹಣಕಾಸು ಕ್ರಿಯಾ ಪಡೆ

ಭಾರತವನ್ನು ಅಭದ್ರತೆಯ ನೆಲೆಯಾಗಿಸಲು ಬಯಸುವ ಇಸ್ಲಾಮಾಬಾದ್ ಹಲವು ದಶಕಗಳಿಂದಲೇ ಭಯೋತ್ಪಾದಕ ಮಿಲಿಶಿಯಾಗಳಿಗೆ ನೆಲೆ ನೀಡಿ ಬೆಳೆಸುತ್ತಿದೆ.

Terrorists' haven
ಉಗ್ರರ ಪಾಲಿನ ಸ್ವರ್ಗ
author img

By

Published : Aug 27, 2020, 10:06 PM IST

ಹೈದರಾಬಾದ್: ಭಾರತದ ವಿರುದ್ಧ ಜನಾಂಗೀಯವಾದಿ ದ್ವೇಷವನ್ನು ಮುಂದುವರೆಸಲು ಪಾಕಿಸ್ತಾನ ಅನುಸರಿಸುವ ಶೀತಲ ತಂತ್ರವೇ ಭಯೋತ್ಪಾದನೆ. ವಾಸ್ತವವೇನೆಂದರೆ ಭಾರತವನ್ನು ಅಭದ್ರತೆಯ ನೆಲೆಯಾಗಿಸಲು ಬಯಸುವ ಇಸ್ಲಾಮಾಬಾದ್ ಹಲವು ದಶಕಗಳಿಂದಲೇ ಭಯೋತ್ಪಾದಕ ಮಿಲಿಶಿಯಾಗಳಿಗೆ ನೆಲೆ ನೀಡಿ ಬೆಳೆಸುತ್ತಿದೆ.

ಪಾಕಿಸ್ತಾನವು ಹಣಕಾಸು ಕ್ರಿಯಾ ಪಡೆ (FATF) ವಿಧಿಸಬಹುದಾದ ಕಠಿಣ ದಿಗ್ಭಂಧನಗಳಿಗೆ ಹೆದರಿಕೊಂಡು ಇತ್ತೀಚೆಗೆ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿರುವುದು ಎಲ್ಲರಿಗೂ ತಿಳಿದ ವಿಷಯ. ಈ ಹಣಕಾಸು ಕ್ರಿಯಾಪಡೆಯು ಭಯೋತ್ಪಾದಕರಿಗೆ ಹಣ ಒದಗಿಸುವಿಕೆಯ ಮೇಲೆ ನಿಗಾವಹಿಸಿ ನಿಯಂತ್ರಿಸುವ ಅಂತರರಾಷ್ಟ್ರೀಯ ಸಂಘಟನೆಯಾಗಿದೆ. ಅದರ ಬಳಿ 88 ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಮತ್ತು ಅವುಗಳ ನಾಯಕರ ವಿವರಗಳಿವೆ.

1993ರ ಮುಂಬೈ ಬಾಂಬ್‍ ಸ್ಪೋಟಗಳ ರೂವಾರಿ ದಾವೂದ್ ಇಬ್ರಾಹಿಂ ಹೆಸರೂ ಸಹ ಅದರಲ್ಲಿ ಸೇರಿದೆ. ದಾವೂದ್ ಇಬ್ರಾಹಿಂ ಮತ್ತು ಇನ್ನಿತರ ಮಾರಕ ಉಗ್ರರಾದ ಹಫೀಜ್ ಸಯೀದ್ ಹಾಗೂ ಮಸೂದ್ ಅಜರ್ ಮೊದಲಾದವರಿಗೆ ಸೇರಿದ ಆಸ್ತಿಪಾಸ್ತಿಗಳನ್ನು ತಾನು ಮುಟ್ಟುಗೋಲು ಹಾಕಿಕೊಂಡು ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗಿಳಿಸಿರುವುದಾಗಿ ಘೋಷಿಸಿಕೊಂಡ ಕೆಲವೇ ದಿನಗಳಲ್ಲಿ ಪಾಕಿಸ್ತಾನ ಮಾತು ಬದಲಿಸಿಕೊಂಡು ಅದೊಂದು ‘ಮಾಮೂಲಿನ’ ಹೇಳಿಕೆಯಾಗಿತ್ತೆಂದೂ ತಾನು ಯಾವತ್ತೂ ಯಾವುದೇ ಉಗ್ರರಿಗೆ ನೆಲೆ ಒದಗಿಸಲಿಲ್ಲವೆಂದೂ ಹೇಳಿಕೆ ನೀಡಿತು. ಇ

ಮ್ರಾನ್ ಸರ್ಕಾರದ ಈ ತಿರುಗು ಮುರುಗು ಪ್ರವೃತ್ತಿಯನ್ನು “ತಾನು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುತ್ತಾ ಜಗತ್ತು ತನ್ನನ್ನು ನೋಡುತ್ತಿಲ್ಲ ಎಂದು ಭಾವಿಸುವ ಕಳ್ಳ ಬೆಕ್ಕಿನ ಪ್ರವೃತ್ತಿಗೆ ಹೋಲಿಸಬಹುದು. ಉಗ್ರರನ್ನು ರಕ್ಷಿಸುವ ಅದರ ಧೋರಣೆಯ ವಿರುದ್ಧ ದಿಗ್ಬಂಧನ ಜಾರಿಯಾಗುವ ಸೂಚನೆ ದೊರೆತ ಕೂಡಲೇ ಅದು ಕೆಲವು ಉಗ್ರರ ಮೇಲೆ ಕೇಸುಗಳನ್ನು ದಾಖಲಿಸುವ ನಾಟಕ ಮಾಡುತ್ತದೆ, ಆದರೆ ಅದು ಒಳಗೊಳಗೇ ಅವರೊಂದಿಗೆ ಕೈ ಜೋಡಿಸಿಕೊಂಡು ಉಗ್ರರ ಹಿತವನ್ನು ಬೆಂಬಲಿಸುತ್ತಿರುತ್ತದೆ.

ಜಮಾತ್ –ಉದ್ ದಾವಾ, ಲಶ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್, ಹಕ್ಕನಿ ನೆಟ್ವರ್ಕ್ ಮತ್ತು ತಾಲಿಬಾನ್ ನೇತೃತ್ವದ ಮಿಲಿಟಂಟ್ ಸಂಘಟನೆಗಳಿಗೆ ಪಾಕಿಸ್ತಾನ ಸುರಕ್ಷಿತ ತಾಣವಾಗಿದ್ದು ಜಗತ್ತಿನೆದುರು ಮಾತ್ರ ತಾನು ಮುಗ್ಧನೆಂದು ತೋರ್ಪಡಿಸಿಕೊಳ್ಳುವ ನಾಟಕವಾಡುತ್ತದೆ. ಅದರ ಹೆಸರು ಪಾಕಿಸ್ತಾನವೇನೋ ನಿಜ. ಅಂದರೆ ಪರಿಶುದ್ಧ ಭೂಮಿ ಎಂದರ್ಥ. ವಾಸ್ತವದಲ್ಲಿ ಮಾತ್ರ ಅದು ಭಯೋತ್ಪಾದನೆಯ ಪರವಾಗಿದ್ದು, ಭಾರತದ ವಿರುದ್ಧ ಹಿಂಸೆಯನ್ನು ಪ್ರಚೋದಿಸುತ್ತಾ ಉಪಖಂಡದ ಪಾಲಿಗೆ ದೊಡ್ಡ ಅಪಾಯವೇ ಆಗಿದೆ. ಕೆಲವೊಮ್ಮೆ ಅದು ತನ್ನ ವಿರುದ್ಧ ತಾನೇ ಮಾತನಾಡಲು ಹಣಕಾಸು ಕ್ರಿಯಾ ಪಡೆಯ ದಿಗ್ಬಂಧನಗಳ ಭಯವೇ ಕಾರಣ.

ಜಾಗತಿಕ ಕಾಳದಂದೆಯಾಗಿರುವ ಮನಿ ಲಾಂಡ್ರಿಂಗ್ ವಿರುದ್ಧ 2001ರಲ್ಲಿ ಜಿ7 ರಾಷ್ಟ್ರಗಳು ಪ್ಯಾರಿಸ್ಸಿನಲ್ಲಿ ನಡೆಸಿದ ವಿಶೇಷ ಸಭೆಯಲ್ಲಿ ಉಗ್ರರಿಗೆ ಹಣಕಾಸು ಬೆಂಬಲ ಒದಗಿಸುವ ವಿಷಯ ಪ್ರಸ್ತಾಪಕ್ಕೆ ಬಂದಿತ್ತು. ಒಂದು ದಶಕದ ನಂತರ ‘ಬೂದು ಪಟ್ಟಿ’ಯಲ್ಲಿ ಸ್ಥಾನ ಪಡೆದ ಪಾಕಿಸ್ತಾನ ಅದಕ್ಕೆ ಮೊದಲು ಮತ್ತು ನಂತರದಲ್ಲಿ ಅನೇಕ ಸಲ ತನ್ನ ನಿಲುವುಗಳನ್ನು ತಿರುಗಾ ಮುರುಗಾ ಬದಲಿಸುತ್ತಲೇ ಬಂದಿದೆ.

ಇಮ್ರಾನ್ ಸರ್ಕಾರವು ತಮ್ಮ ನೆಲದಲ್ಲಿ 30-40 ಸಾವಿರ ಉಗ್ರರು ಇರುವುದಾಗಿ ತಾನೇ ಒಪ್ಪಿಕೊಂಡಿತ್ತು. ಪ್ರಧಾನಿ ಇಮ್ರಾನ್ ಖಾನ್ ಅಂತರರಾಷ್ಟ್ರೀಯ ಉಗ್ರ ಹಫೀಸ್ ಸಯೀದ್‍ನನ್ನು ‘ಸಯೀದ್ ಸರ್’ ಎಂದು ಸಂಬೋಧಿಸಿದ್ದ ಮರುಗಳಿಗೆಯಲ್ಲೇ ವಿಶ್ವಸಂಸ್ಥೆ ಪಟ್ಟಿ ಮಾಡಿದ ಮಿಲಿಟಂಟ್ ಗುಂಪನ್ನು ಹಿಡಿಯುವುದು ಬಹಳ “ಕಷ್ಟದ ಕೆಲಸ” ಎಂದು ಹೇಳಿದ್ದನ್ನು ಗಮನಿಸಬಹುದು. ಹಲವಾರು ವರ್ಷಗಳಿಂದಲೂ ಭಾರತದ ಗಡಿಯುದ್ದಕ್ಕೂ ಡ್ರೋಣ್‍ಗಳನ್ನು ಬಳಸಿಕೊಂಡು ಯುದ್ಧಾಸ್ತ್ರಗಳನ್ನು ಬಿಸುಡುತ್ತಿರುವ ಕೆಲಸವನ್ನು ಪಾಕಿಸ್ತಾನ ಮಾಡುತ್ತಿದೆ.

ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಈ ನೆರೆಯ ದೇಶವು ಭಯೋತ್ಪಾದಕ ದಾಳಿ ನಡೆಸಲು ರೂಪಿಸಿದ್ದ ಸಂಚೊಂದು ಬಯಲಾಗಿ ದೊಡ್ಡ ಅನಾಹುತ ತಪ್ಪಿತು. ಚೀನಾ, ಟರ್ಕಿ ಮತ್ತು ಮಲೇಶಿಯಾಗಳ ಬೆಂಬಲದೊಂದಿದೆ ಪಾಕಿಸ್ತಾನವು ಹಣಕಾಸು ಕ್ರಿಯಾಪಡೆಯ ಶಿಸ್ತು ಕ್ರಮದಿಂದ ಬಚಾವಾಗುತ್ತಾ ಬರುತ್ತಿದೆ. ಆದರೆ ಅದರ ನಿಜ ಬಣ್ಣ ಮತ್ತೆ ಮತ್ತೆ ಬಯಲಾಗುತ್ತಲೇ ಇದೆ. ಕಾರ್ಯಪಡೆ ಪ್ರಾಧಿಕಾರವು ಇಸ್ಲಾಮಾಬಾದ್‍ ಕಡೆಗೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ಕಾದು ನೋಡಬೇಕಿದೆ. ಚೀನಾ ತನ್ನ ಬೆಂಬಲಕ್ಕೆ ನಿಲ್ಲುವವರೆಗೂ ತನಗೇನೂ ಆಗದು ಎಂಬ ವಿಶ್ವಾಸದಲ್ಲಿ ಪಾಕಿಸ್ತಾನವಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮೂರು ವಾರಗಳ ಹಿಂದೆ ಭಾರತವು ಪಾಕಿಸ್ತಾನ ಬೆಂಬಲಿತ ಮಿಲಿಟಂಟ್‍ಗಳ ವಿರುದ್ಧ ಒಂದು ಜಂಟಿ ಸಮರ ತಂತ್ರ ರೂಪಿಸುವುದರಿಂದ ಮಾತ್ರ ಮನುಕುಲವನ್ನು ಅವಗಢಗಳಿಂದ ತಪ್ಪಿಸಲು ಸಾಧ್ಯ ಎಂದು ಸ್ಪಷ್ಟಪಡಿಸಿದೆ. ಅಂತರರಾಷ್ಟ್ರೀಯ ಮಟ್ಟದ ಪ್ರಯತ್ನದಿಂದ ಮಾತ್ರ ಭಯೋತ್ಪಾದನಾ ಪಡೆಗಳನ್ನು ಉಕ್ಕಿನ ಕೈಗಳಿಂದ ತಡೆಯಲು ಸಾಧ್ಯವಿದೆಯಲ್ಲದೇ ಪಾಕಿಸ್ತಾನದ ರಾಜಕೀಯ ಮೂಗುತೂರಿಸುವಿಕೆಗೆ ಮತ್ತು ತನ್ನದೇ ನೆಲದಲ್ಲಿ ಭಯೋತ್ಪಾದನಾ ಗುಂಪುಗಳಿಗೆ ಅದು ನೀಡುವ ಬೆಂಬಲಕ್ಕೆ ತಕ್ಕ ಪಾಠ ಕಲಿಸಲು ಸಾಧ್ಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.