ಹೈದರಾಬಾದ್ (ತೆಲಂಗಾಣ): ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಯುವಕನೊಬ್ಬ ನೀರಿನ ಟ್ಯಾಂಕ್ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರದಿಯಾಗಿದೆ.
ಸಿದ್ದಿಪೇಟೆಯ ಕದಾವರಗು ಗ್ರಾಮದ ನಿವಾಸಿ ಕೋಮುಲಾ ಯದಾಗಿರಿ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ ಯುವಕ.
ಯುವಕನ ಕುಟುಂಬಸ್ಥರು ಮಾತನಾಡಿ, ಯುವಕನ ಪತ್ನಿ ಕೆಲ ತಿಂಗಳಿಂದ ಆತನಿಂದ ದೂರವಿದ್ದು ಜೀವನ ನಡೆಸುತ್ತಿದ್ದಾಳೆ. ಆಕೆ ಮನೆಗೆ ಬರುತ್ತಿರಲಿಲ್ಲ. ಇದರಿಂದ ಮನನೊಂದ ಯದಾಗಿರಿ ಸಾಯುವ ನಿರ್ಧಾರ ಕೈಗೊಂಡಿದ್ದಾನೆ ಎಂದಿದ್ದಾರೆ.
ಸದ್ಯ ಯದಾಗಿರಿ ಪರಿಸ್ಥಿತಿ ಗಂಭೀರವಾಗಿದ್ದು, ಹೈದರಾಬಾದ್ನ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.