ರಾಜಸ್ಥಾನ: ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕರಿಗೆ ದೇವರಿಗಿಂತಲೂ ಉನ್ನತ ಸ್ಥಾನಮಾನ ನೀಡಲಾಗಿದೆ. ಆದರೆ ಇಲ್ಲೊಬ್ಬ ಶಿಕ್ಷಕ ಸಮಾಜಘಾತುತ ಕೆಲಸ ಮಾಡಿ ಎಲ್ಲರಿಂದಲೂ ಛೀಮಾರಿ ಹಾಕಿಸಿಕೊಂಡಿದ್ದಾನೆ.
ರಾಜಸ್ಥಾನದ ಖೇತ್ರಿ ಎಂಬಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕ ಮಗನೋರ್ವ ವೃದ್ಧ ತಂದೆ-ತಾಯಿ ಮೇಲೆ ಕೋಲಿನಿಂದ ಕ್ರೂರವಾಗಿ ಹಲ್ಲೆ ಮಾಡಿದ್ದಾನೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಖೇತ್ರಿ ನಗರದ ಎಸ್ಎಸ್ಐ ಸುಬೇಸಿಂಹ್ ಯಾದವ್ ತಿಳಿಸಿರುವ ಪ್ರಕಾರ ಸೆಪ್ಟೆಂಬರ್ 3ರಂದು ಈ ಘಟನೆ ನಡೆದಿದ್ದು, ಸರ್ಕಾರಿ ಶಾಲೆಯಲ್ಲಿ ಪ್ರಾಂಶುಪಾಲನಾಗಿ ಕೆಲಸ ಮಾಡುತ್ತಿದ್ದ ಶಿಕ್ಷಕ ತನ್ನ ತಂದೆ-ತಾಯಿ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಸೆಪ್ಟೆಂಬರ್ 3ರಂದು ಶಿಕ್ಷಕನ ಜಮೀನಿನಲ್ಲಿದ್ದ ಬಾವಿಯಿಂದ ನೀರು ಹೊರತೆಗೆಯಲು ತನ್ನ ಇನ್ನೊಬ್ಬ ಮಗನಿಗೆ ಅವಕಾಶ ನೀಡುವಂತೆ ಪೋಷಕರು ಕೇಳಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಬಾಬುಲಾಲ್ ಸ್ವಂತ ಹೆತ್ತವರ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾನೆ.