ETV Bharat / bharat

ಕೋವಿಡ್​-19 ಪರಿಣಾಮ; ಟಿಬಿ ರೋಗಿಗಳ ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

ಕೊರೊನಾ ವೈರಸ್​ ಕಾರಣದಿಂದ ವಿಧಿಸಲಾಗಿರುವ ಲಾಕ್​ಡೌನ್​ ಹಾಗೂ ಎಲ್ಲ ಆರೋಗ್ಯ ಸಿಬ್ಬಂದಿಯನ್ನು ಕೊರೊನಾ ಸಂಬಂಧಿತ ಚಿಕಿತ್ಸೆಗಾಗಿ ನಿಯೋಜಿಸಿರುವುದರಿಂದ ಟಿಬಿ ರೋಗ (ಕ್ಷಯರೋಗ) ಪತ್ತೆ ಹಾಗೂ ಚಿಕಿತ್ಸೆಯ ಮೇಲೆ ಗಮನಾರ್ಹ ಪರಿಣಾಮವಾಗಲಿದೆ. ಪ್ರಸ್ತುತ ಮೂರು ತಿಂಗಳ ಅವಧಿಯಲ್ಲಿ ಟಿಬಿ ಪತ್ತೆ ಪರೀಕ್ಷೆಗಳು ಶೇ 25 ರಷ್ಟು ಕಡಿಮೆಯಾಗಬಹುದು. ಇದರಿಂದಾಗಿ ಹೆಚ್ಚುವರಿಯಾಗಿ 1,90,000 ಟಿಬಿ ಸಾವುಗಳು (ಶೇ 13 ರಷ್ಟು ಹೆಚ್ಚಳ) ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ.

TB Mortality may increase
TB Mortality may increase
author img

By

Published : May 7, 2020, 8:44 PM IST

ಕೋವಿಡ್​-19 ವೈರಸ್​ನಿಂದ ಜಾಗತಿಕವಾಗಿ ಹಲವಾರು ಇತರ ರೀತಿಯ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ಈಗ ಈ ಪಟ್ಟಿಗೆ ಟಿಬಿ ರೋಗವೂ ಸೇರಿಕೊಂಡಿದೆ. 2020ರಲ್ಲಿ ಟಿಬಿ ರೋಗದಿಂದ ಸಂಭವಿಸಬಹುದಾದ ಸಾವಿನ ಪ್ರಮಾಣದ ಮೇಲೆ ಕೋವಿಡ್​-19 ಬೀರಬಹುದಾದ ಪರಿಣಾಮಗಳ ಕುರಿತು ಮೇ 4 ರಂದು ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನ ವರದಿಯೊಂದನ್ನು ಬಿಡುಗಡೆ ಮಾಡಿದೆ. 2020ನೇ ಸಾಲಿನಲ್ಲಿ ಟಿಬಿ ರೋಗ ಪತ್ತೆ ಪ್ರಮಾಣದಲ್ಲಿ ಇಳಿಕೆ ಹಾಗೂ ಟಿಬಿ ಸಾವಿನ ಪ್ರಮಾಣದ ಮೇಲೆ ಈ ಅಧ್ಯಯನ ವರದಿ ಕೇಂದ್ರೀಕೃತವಾಗಿದೆ.

ಕೊರೊನಾ ವೈರಸ್​ ಕಾರಣದಿಂದ ವಿಧಿಸಲಾಗಿರುವ ಲಾಕ್​ಡೌನ್​ ಹಾಗೂ ಎಲ್ಲ ಆರೋಗ್ಯ ಸಿಬ್ಬಂದಿಯನ್ನು ಕೊರೊನಾ ಸಂಬಂಧಿತ ಚಿಕಿತ್ಸೆಗಾಗಿ ನಿಯೋಜಿಸಿರುವುದರಿಂದ ಟಿಬಿ ರೋಗ ಪತ್ತೆ ಹಾಗೂ ಚಿಕಿತ್ಸೆಯ ಮೇಲೆ ಗಮನಾರ್ಹ ಪರಿಣಾಮವಾಗಲಿದೆ. ಪ್ರಸ್ತುತ ಮೂರು ತಿಂಗಳ ಅವಧಿಯಲ್ಲಿ ಟಿಬಿ ಪತ್ತೆ ಪರೀಕ್ಷೆಗಳು ಶೇ.25ರಷ್ಟು ಕಡಿಮೆಯಾಗಬಹುದು. ಇದರಿಂದಾಗಿ ಹೆಚ್ಚುವರಿಯಾಗಿ 1,90,000 ಟಿಬಿ ಸಾವುಗಳು (ಶೇ.13ರಷ್ಟು ಹೆಚ್ಚಳ) ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ಅಲ್ಲಿಗೆ ಜಾಗತಿಕವಾಗಿ ಈ ವರ್ಷ 1.6 ಮಿಲಿಯನ್​ ಟಿಬಿ ಸಾವುಗಳಾಗುವ ಸಾಧ್ಯತೆಯನ್ನು ವರದಿಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಟಿಬಿ ರೋಗದಿಂದಾಗುವ ಸಾವಿನ ಪ್ರಮಾಣ : ಮಾರ್ಚ್​ 22ರ ನಂತರದ ವಾರದಲ್ಲಿ ಭಾರತದಲ್ಲಿ ಟಿಬಿ ಪತ್ತೆ ಪ್ರಕರಣಗಳು (ವಾರಕ್ಕೆ ಸರಾಸರಿ 11367 ಪ್ರಕರಣ) ಶೇ 75 ರಷ್ಟು ಕಡಿಮೆಯಾಗಿವೆ. ಲಾಕ್​ಡೌನ್​ ವಿಧಿಸುವ ಮುನ್ನ 2020ರಲ್ಲಿ ಈ ಪ್ರಮಾಣ ವಾರಕ್ಕೆ ಸರಾಸರಿ 45875 ರಷ್ಟಿತ್ತು. ಟಿಬಿ ಪತ್ತೆ ಪ್ರಕರಣಗಳ ಕುಸಿತಕ್ಕೆ ಹಲವಾರು ಕಾರಣಗಳನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಭಾರತದ ಟಿಬಿ ಪ್ರಕರಣಗಳ ಮೇಲೆ ನಿಗಾವಹಿಸುವ ನಿಕ್ಷಯ್-2 ಗೆ ಡೇಟಾ ಅಪ್ಲೋಡ್​ ಮಾಡುವಿಕೆಯ ವಿಳಂಬ, ಆರೋಗ್ಯ ಕಾರ್ಯಕರ್ತರ ಕೊರತೆ ಹಾಗೂ ಟಿಬಿ ಪತ್ತೆ ಪರೀಕ್ಷೆಗಳಲ್ಲಿ ಇಳಿಕೆಯ ಕಾರಣಗಳನ್ನು ನಮೂದಿಸಲಾಗಿದೆ.

ಕೋವಿಡ್​-19 ಬರುವುದಕ್ಕೂ ಮುಂಚಿನ ಮಾದರಿಯಲ್ಲೇ ಟಿಬಿ ಪತ್ತೆ ಪರೀಕ್ಷೆಗಳನ್ನು ಮುಂದುವರಿಸದಿದ್ದಲ್ಲಿ, ಟಿಬಿ ಸಾವಿನ ಸಂಖ್ಯೆಗಳು ಹೆಚ್ಚಾಗಬಹುದು. ಹೀಗಾಗಿ ಪ್ರತಿ ವಾರದ ಟಿಬಿ ಪತ್ತೆ ಪರೀಕ್ಷೆಗಳ ಮೇಲೆ ಹೆಚ್ಚು ನಿಗಾವಹಿಸುವುದು ತುರ್ತು ಅಗತ್ಯವಾಗಿದೆ ಎಂದು ವರದಿ ತಿಳಿಸಿದೆ.

ಕೋವಿಡ್​-19 ಸಮಯದಲ್ಲಿಯೂ ಟಿಬಿ ಪತ್ತೆ ಹಾಗೂ ಚಿಕಿತ್ಸೆಯನ್ನು ಅಗತ್ಯ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯ ಪಟ್ಟಿಗೆ ಸೇರಿಸಬೇಕಿದೆ. ಒಂದು ವೇಳೆ ಜಾಗತಿಕವಾಗಿ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಟಿಬಿ ಚಿಕಿತ್ಸೆಯಲ್ಲಿ ವಿಶ್ವ 5 ವರ್ಷ ಹಿಂದೆ ಸರಿಯುವ ಸಾಧ್ಯತೆಗಳಿವೆ. ಜಗತ್ತಿನಲ್ಲಿ ಅತಿ ಹೆಚ್ಚು ಟಿಬಿ ಪ್ರಕರಣಗಳು ಭಾರತದಲ್ಲೇ ವರದಿಯಾಗುತ್ತಿವೆ. ಹೀಗಾಗಿ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರಕದಿದ್ದಲ್ಲಿ ಭಾರತದ ಟಿಬಿ ರೋಗಿಗಳ ಮೇಲೆ ಅತಿ ಹೆಚ್ಚು ಪ್ರತಿಕೂಲ ಪರಿಣಾಮವಾಗಬಹುದು ಎಂದು ವರದಿಯಲ್ಲಿ ಒತ್ತಿ ಹೇಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.