ETV Bharat / bharat

ಬೆಂಗಳೂರಿನ ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಶಂಕಿತ ಉಗ್ರ ಸೆರೆ!

ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಶಂಕಿತ ಉಗ್ರನನ್ನು ಬಸವನಗುಡಿಯಲ್ಲಿ ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ.

author img

By

Published : Aug 18, 2020, 5:54 PM IST

Updated : Aug 19, 2020, 11:32 AM IST

ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಶಂಕಿತ ಉಗ್ರ ಸೆರೆ

ಬೆಂಗಳೂರು: ನಗರದ ಎಂ.ಎಸ್​.ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ತಜ್ಞನಾಗಿ ಕೆಲಸ ಮಾಡುತ್ತಿದ್ದ ಶಂಕಿತ ಉಗ್ರನೋರ್ವನನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ, ಬಸವನಗುಡಿಯಲ್ಲಿ ಬಂಧಿಸಿದ್ದಾರೆ.

ಅಬ್ದುಲ್‌ ರೆಹಮಾನ್ ಬಂಧಿತ ಶಂಕಿತ ಉಗ್ರ. ಈತ ಇಸ್ಲಾಮಿಕ್‌ ಸ್ಟೇಟ್ ಆಫ್‌ ಖೊರೋಸನ್ ಪ್ರಾವಿನ್ಸ್-ಐಎಸ್​ಕೆಪಿ (Islamic State of Khorasan Province-ISKP) ಸಂಘಟನೆ ಸೇರಿದ್ದ ಎಂದು ಮೂಲಗಳು ತಿಳಿಸಿವೆ.

ಕೆಲಸ ಮಾಡುತ್ತಲೇ ಐಸಿಸ್​ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಈತ ಬಾಂಗ್ಲಾ ಮೂಲದ ನಿಷೇಧಿತ ಐಎಸ್​ಕೆಪಿ ಸಂಘಟನೆ ಸದಸ್ಯನಾಗಿದ್ದ. ಇದರ ಜೊತೆಗೆ ತಿಹಾರ್ ಜೈಲಿನಲ್ಲಿರುವ ಅಬ್ದುಲ್ ಬಸೀತ್ ಎಂಬ ಉಗ್ರನ ಜೊತೆ ಈತನಿಗೆ ನಂಟಿದ್ದು, ಪುಣೆ ಮೂಲದ ಸಾದಿಯಾ ಅನ್ವರ್, ನಬೀಲ್ ಸಿದ್ಧಿಕಿ ಖತ್ರಿ ಜೊತೆಗೂ ಕೂಡಾ ಸಂಪರ್ಕ ಹೊಂದಿರುವುದು ಗೊತ್ತಾಗಿದೆ.

ಭಾರತ ಮತ್ತು ಇತರ ದೇಶಗಳಲ್ಲಿ ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಗಲಭೆಗೆ ಸಂಚು ರೂಪಿಸಿದ್ದ ವಿಚಾರ ಗೊತ್ತಾಗಿದೆ. ಈ ಮೊದಲು ಐಸಿಸ್ ಕ್ಯಾಂಪ್​ನಲ್ಲಿ ಗಾಯಗೊಂಡ ಉಗ್ರರಿಗೆ ಚಿಕಿತ್ಸೆ ನೀಡುವ ಕೆಲಸ‌ವನ್ನೂ ಅಬ್ದುಲ್ ರೆಹಮಾನ್‌ ಮಾಡುತ್ತಿದ್ದನಂತೆ.

2014ರಲ್ಲಿ ಸಿರಿಯಾದ ಐಸಿಸ್ ಕ್ಯಾಂಪ್​ಗೆ ಭೇಟಿ ನೀಡಿದ್ದು, ಹಾಗೆಯೇ ಕಳೆದ 10 ದಿನಗಳ ಕಾಲ ಸಿರಿಯಾದ ಐಸಿಸ್ ಕ್ಯಾಂಪ್​​ನಿಂದ ವಾಪಸ್ ಬಂದು ಕೆಲಸದಲ್ಲಿ ನಿರತನಾಗಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಸದ್ಯ ಈತನಿಂದ ಲ್ಯಾಪ್​​ಟಾಪ್, ಮೊಬೈಲ್ ಸೇರಿ ಡಿಜಿಟಲ್ ಸಾಕ್ಷ್ಯ ಕಲೆ ಹಾಕಿದ ಎನ್ಐಎ ಅಧಿಕಾರಿಗಳು, ಎನ್​ಐಎ ಕೋರ್ಟ್​ಗೆ ಹಾಜರುಪಡಿಸಿ ಮತ್ತೆ ವಶಕ್ಕೆ ಪಡೆದಿದೆ.

Last Updated : Aug 19, 2020, 11:32 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.