ಜೈಪುರ/ಹೈದರಾಬಾದ್: ಚೀನಾದಿಂದ ಭಾರತಕ್ಕೆ ಹಲವು ಮಂದಿ ಮರಳಿ ಬಂದಿದ್ದು, ರಾಜಸ್ಥಾನ, ಬಿಹಾರ್ ಹಾಗೂ ತೆಲಂಗಾಣದಲ್ಲಿ ಶಂಕಿತ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ.
ಚೀನಾದಲ್ಲಿ ಎಂಬಿಬಿಎಸ್ ಮುಗಿಸಿ ಭಾರತಕ್ಕೆ ಬಂದ ರಾಜಸ್ಥಾನ ಮೂಲದ ವ್ಯಕ್ತಿಯಲ್ಲಿ ಶಂಕಿತ ಕೊರೊನಾ ವೈರಸ್ ಕಂಡುಬಂದಿದ್ದು, ರೋಗಿಯನ್ನು ತಕ್ಷಣವೇ ಪ್ರತ್ಯೇಕ ಚಿಕಿತ್ಸಾ ಕೊಠಡಿಯಲ್ಲಿ ಇರಿಸುವಂತೆ ರಾಜ್ಯ ಆರೋಗ್ಯ ಸಚಿವ ರಘು ಶರ್ಮಾ, SMS ವೈದ್ಯಕೀಯ ಕಾಲೇಜು ಆಡಳಿತ ಮಂಡಳಿಗೆ ನಿರ್ದೇಶನ ನೀಡಿದ್ದಾರೆ.
-
Suspected case of coronavirus reported in Rajasthan
— ANI Digital (@ani_digital) January 26, 2020 " class="align-text-top noRightClick twitterSection" data="
Read @ANI Story | https://t.co/RAbMthSqAp pic.twitter.com/0VwCv3ZILw
">Suspected case of coronavirus reported in Rajasthan
— ANI Digital (@ani_digital) January 26, 2020
Read @ANI Story | https://t.co/RAbMthSqAp pic.twitter.com/0VwCv3ZILwSuspected case of coronavirus reported in Rajasthan
— ANI Digital (@ani_digital) January 26, 2020
Read @ANI Story | https://t.co/RAbMthSqAp pic.twitter.com/0VwCv3ZILw
ಅಲ್ಲದೇ ರೋಗಿಯ ಕುಟುಂಬ ಸದಸ್ಯರನ್ನೂ ತಪಾಸಣಾ ಪ್ರಕ್ರಿಯೆಗೆ ಒಳಪಡಿಸುವಂತೆ ಹಾಗೂ ರೋಗಿಯಿಂದ ಸಂಗ್ರಹಿಸಿದ ಸ್ಯಾಂಪಲ್ಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಸಚಿವರು ಸೂಚಿಸಿದ್ದಾರೆ. ಭಾನುವಾರ ಚೀನಾದಿಂದ ರಾಜಸ್ಥಾನದ ನಾಲ್ಕು ಜಿಲ್ಲೆಗಳ 18 ಮಂದಿ ದೇಶಕ್ಕೆ ಬಂದಿದ್ದು, ಅವರೆಲ್ಲರನ್ನೂ 28 ದಿನಗಳವರೆಗೆ ತಪಾಸಣೆಯಲ್ಲಿರಿಸುವಂತೆ ಆಯಾ ಜಿಲ್ಲೆಗಳ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶಿಸಿರುವುದಾಗಿ ಶರ್ಮಾ ತಿಳಿಸಿದ್ದಾರೆ.
ಇನ್ನು ಇದೇ ದಿನ ಚೀನಾದಿಂದ ತೆಲಂಗಾಣದ ಹೈದರಾಬಾದ್ ಮೂಲದ ನಾಲ್ವರು ಬಂದಿದ್ದು, ವಿಮಾನ ನಿಲ್ದಾಣದಲ್ಲಿ ಅವರನ್ನು ತಪಾಸಣಾ ಪ್ರಕ್ರಿಯೆಗೆ ಒಳಪಡಿಸಿದಾಗ ಅವರಲ್ಲಿ ಒಬ್ಬ ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿರುವುದಾಗಿ ತಿಳಿದುಬಂದಿದೆ. ನಾಲ್ವರನ್ನೂ ರಕ್ತ ಪರೀಕ್ಷೆಗೆ ಒಳಪಡಿಸಿ ಪ್ರಯೋಗಾಲಯಕ್ಕೆ ಸ್ಯಾಂಪಲ್ ಕಳುಹಿಸಲಾಗಿದ್ದು, ರೋಗಿಯನ್ನು ನಗರದ ಫೀವರ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸಾ ಕೊಠಡಿಯಲ್ಲಿ ಇರಿಸಲಾಗಿದೆ.
ಜನವರಿ 22ರಂದು ಚೀನಾದಿಂದ ಬಿಹಾರ್ಗೆ ಬಂದ ಚಪ್ರಾದ ಶಾಂತಿನಗರ ಮೂಲದ ವಿದ್ಯಾರ್ಥಿನಿಯೋರ್ವಳು ಕೂಡ ಶಂಕಿತ ಕೊರೊನಾ ವೈರಸ್ ಲಕ್ಷಣಗಳಿಗೆ ಹೋಲಿಕೆಯಾಗುವ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವುದಾಗಿ ವರದಿಯಾಗಿದ್ದು, ಆಕೆಯನ್ನು ಚಪ್ರಾದ ಸದರ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ದಾಖಲಿಸಲಾಗಿದೆ. ಈ ವಿಷಯದಲ್ಲಿ ಜಾಗರೂಕರಾಗಿರಿ ಎಂದು ಬಿಹಾರ ಆರೋಗ್ಯ ಸಚಿವರು ರಾಜ್ಯದ ಎಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಹಾಗೂ ಸರ್ಕಾರಿ ವೈದ್ಯರಿಗೆ ಸೂಚನೆ ನೀಡಿದ್ದಾರೆ.