ವಯನಾಡು: ಮಲೇಷ್ಯಾದಲ್ಲಿರುವ "ಮ್ಯಾಕ್ಸಿ" ಎಂಬ ನಾಯಿಗೆ ಕೇರಳದಿಂದ ಟೆಲಿಗೈಡೆನ್ಸ್ ಮಾಡುವ ಮೂಲಕ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಮಲೇಷಿಯಾದ ಪೆನಾಂಗ್ನಲ್ಲಿ ಹೃದಯ ಸಂಬಂಧಿ ಸಮಸ್ಯೆಯಿಂದ ಜನಿಸಿದ್ದ, ಪಿನ್ಷರ್ ತಳಿಯ "ಮ್ಯಾಕ್ಸಿ" ನಾಯಿಗೆ ಪುಕ್ಕೋಡ್ ಪಶುವೈದ್ಯಕೀಯ ವಿಶ್ವವಿದ್ಯಾನಿಯದ ಪಶುವೈದ್ಯ ಡಾ.ಸೂರ್ಯದಾಸ್ ಅವರ ಮಾರ್ಗದರ್ಶನದಲ್ಲಿ ಟೆಲೆಗೈಡೆನ್ಸ್ ಮೂಲಕ ಮಲೇಷಿಯಾದಲ್ಲಿ ವೆಟ್ಸ್ ತಂಡವು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದೆ.
ಪಶುವೈದ್ಯಕೀಯ ಲೋಕದಲ್ಲೇ ಇದೇ ಮೊದಲ ಬಾರಿಗೆ ಟೆಲಿಗೈಡೆಡ್ ಮೂಲಕ ನಾಯಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಸಾಮಾನ್ಯವಾಗಿ ಮನುಷ್ಯರಿಗೆ ಶಸ್ತ್ರಚಿಕಿತ್ಸೆಯ ಮಧ್ಯಸ್ಥಿಕೆಗಾಗಿ ಟೆಲಿಗೈಡೆನ್ಸ್ ಸೌಲಭ್ಯವನ್ನು ಬಳಸೋದು ಕಾಮನ್. ಆದರೆ, ನಾಯಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಇದೇ ಮೊದಲಬಾರಿಗೆ ಟೆಲಿಗೈಡೆನ್ಸ್ ಬಳಸಲಾಗಿದೆ.
ಹೃದಯ ಶಸ್ತ್ರಚಿಕಿತ್ಸೆಯ ನಂತರ ಮ್ಯಾಕ್ಸಿ ಆರೋಗ್ಯವಾಗಿದ್ದು, ವಿಶ್ರಾಂತಿ ಪಡೆಯುತ್ತಿದೆ.