ನವದೆಹಲಿ: ಕಾಡು ಪ್ರಾಣಿಗಳ ಹತ್ಯೆಗೆ ಉತ್ತೇಜನ ನೀಡುವುದರ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಬಿಹಾರ, ಹಿಮಾಚಲ ಪ್ರದೇಶ, ಕೇರಳ ಸೇರಿದಂತೆ ಎಲ್ಲ ರಾಜ್ಯಗಳಿಗೆ ನೋಟಿಸ್ ನೀಡಿದೆ.
ಬೆಳೆಗಳ ನಾಶ ತಡೆಯಲು ಕಾಡು ಪ್ರಾಣಿಗಳನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಲು ಆರ್ಥಿಕ ಕುಮ್ಮಕ್ಕು ನೀಡಿದ ರಾಜ್ಯಗಳ ವಿರುದ್ಧ ಕ್ರಮ ಕೈಗೊಳ್ಳಲು ಕೋರಿ ಒಡಿಶಾ ಸಂಸದ ಅನುಭವ್ ಮೊಹಂತಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕೇರಳದ ಆನೆ ಹತ್ಯೆ ಪ್ರಕರಣವೂ ಸೇರಿದಂತೆ ವಿವಿಧೆಡೆ ಹಲವು ಪ್ರಾಣಿಗಳ ಹತ್ಯೆಯ ವರದಿಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠವು ಅರಣ್ಯ ಅಧಿಕಾರಿಗಳ ವ್ಯಾಪ್ತಿ, ವಿನಾಶ, ಪ್ರಾಣಿಗಳಿಗೆ ಹಾನಿಯಾಗದಂತೆ ರಬ್ಬರ್ ಗುಂಡುಗಳ ಬಳಕೆ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ನೋಟಿಸ್ ನೀಡಿದೆ. ಅಲ್ಲದೇ ಕೇರಳದ ಆನೆ ಹತ್ಯೆ ಪ್ರಕರಣ ಸಂಬಂಧ, ಸಂಭವನೀಯ ಪರಿಹಾರವನ್ನು ಕಂಡುಕೊಳ್ಳುವಂತೆ ಸೂಚಿಸಿದೆ.