ETV Bharat / bharat

ಭಾರತದಲ್ಲಿ ಆತ್ಮಹತ್ಯೆಯ ಪ್ರಮಾಣವೆಷ್ಟು ಗೊತ್ತಾ?

ದಿನಬೆಳಗಾದ್ರೆ ಪತ್ರಿಕೆ, ಟಿವಿ, ಇಂಟರ್​​ನೆಟ್​​ ಎಲ್ಲೇಡೆ ನೋಡಿದ್ರೂ `ಆತ್ಮಹತ್ಯೆ’ ಅನ್ನೋ ಒಂದು ಪದ ಕಣ್ಣಿಗೆ ಬಿದ್ದೇ ಬೀಳುತ್ತೆ. ಅದ್ಯಾರೋ ಚಿತ್ರ ತಾರೆ, ಖ್ಯಾತ ಉದ್ಯಮಿ, ಹದಿಹರೆಯದ ಯುವಕ, ರೋಗಗ್ರಸ್ತ ಮುದುಕ ಹೀಗೆ ಯಾರಾದ್ರೂ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇಲ್ಲಿ ವಯಸ್ಸಿನ ಭೇದವಿಲ್ಲ, ಅಂತಸ್ತಿನ ಲೆಕ್ಕವಿಲ್ಲ, ಬಡವನಿಗೆ ಬದುಕೇ ಭಾರ, ಸಿರಿವಂತನಿಗೆ ಬದುಕೇ ಬರಡು. ಇರುವುದೆಲ್ಲವ ಬಿಟ್ಟು ಇನ್ನೇನೋ ಹುಡುಕ ಹೊರಡುವುದು ಮಾನವನ ಸಹಜ ಗುಣ.

author img

By

Published : Sep 2, 2020, 8:27 PM IST

ಆತ್ಮಹತ್ಯೆ
ಆತ್ಮಹತ್ಯೆ

ನವದೆಹಲಿ: ಆತ್ಮಹತ್ಯೆ ಮಹಾಪಾಪ ಎನ್ನುತ್ತದೆ ಧರ್ಮ. ಆತ್ಮಹತ್ಯೆಗೆ ಶರಣಾದವರು ಇಲ್ಲಿ ಇರಲಾರದೆ, ಅಲ್ಲಿಗೆ ಹೋಗಲಾರದೆ ತ್ರಿಶಂಕು ಸ್ಥಿತಿಯಲ್ಲಿ ನರಳುತ್ತಿರುತಾನಂತೆ. ಆತ್ಮಹತ್ಯೆ ಅನ್ನೋದು ಹೇಡಿಗಳ ಅಂತಿಮ ಆಯ್ಕೆ ಎಂಬ ಮಾತೂ ಇದೆ. ಹೀಗೆ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 2019 ರಲ್ಲಿ 1,39,123. 2018ಕ್ಕೆ (1,34,516 ಆತ್ಮಹತ್ಯೆಗಳು) ಹೋಲಿಸಿದ್ರೆ ಆತ್ಮಹತ್ಯೆಗಳ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಖಿಲ ಭಾರತ ಆತ್ಮಹತ್ಯೆ ದರಕ್ಕೆ (ಶೇ. 10.4) ಹೋಲಿಸಿದರೆ, ನಗರಗಳಲ್ಲಿ ಆತ್ಮಹತ್ಯೆ ಪ್ರಮಾಣ (ಶೇ. 13.9)ರಷ್ಟು ಹೆಚ್ಚಾಗಿದೆ.

ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳಿಗೆ ಕೌಟುಂಬಿಕ ಸಮಸ್ಯೆಯೇ (ಶೇ.32.4) ಪ್ರಮುಖ ಕಾರಣವಾಗಿದೆ. ಮದುವೆ ಸಂಬಂಧಿತ ಕಾರಣಗಳಿಗೆ ಶೇ.5.5ರಷ್ಟು ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ.68.4 ಮಂದಿ ಪುರುಷರಾಗಿದ್ದರೆ, ಶೇ.62.5ರಷ್ಟುಮಂದಿ ಮಹಿಳೆಯರಾಗಿದ್ದಾರೆ. ಆತ್ಮಹತ್ಯೆಯ ವಿಧಾನದಲ್ಲಿ ನೇಣುಬಿಗಿದುಕೊಂಡು ಸಾವನ್ನಪ್ಪಿದವರ ಪ್ರಮಾಣ ಶೇ.53.6ರಷ್ಟಿದ್ದರೆ, ವಿಷ ಸೇವಿಸಿದವರ ಪ್ರಮಾಣ ಶೇ.25.8ರಷ್ಟಿದೆ. ಅನಾರೋಗ್ಯಕ್ಕೆ ತುತ್ತಾಗಿ ಶೇ.17.1 ರಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಒಟ್ಟಾರೆ ದೇಶದಲ್ಲಿ 2019ರಲ್ಲಿ ಆತ್ಮಹತ್ಯೆಗಳ ಪ್ರಮಾಣ ಶೇ. 55.0ನಷ್ಟಿದೆ.

ಆತ್ಮಹತ್ಯೆಗೆ ಬಲಿಯಾದ ಶೇ.12.6ರಷ್ಟು ಜನ ಅನಕ್ಷರಸ್ಥರು, 16.3ರಷ್ಟು ಪ್ರಾಥಮಿಕ ಹಂತದವರೆಗೆ ಶಿಕ್ಷಣ ಪಡೆದಿದ್ದಾರೆ,ಶೇ.19.6 ರಷ್ಟು ಮಧ್ಯಮ ಹಂತದವರೆಗೆ ಶಿಕ್ಷಣ ಪಡೆದಿದ್ದಾರೆ ಮತ್ತು ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ. 23.3ರಷ್ಟು ಮೆಟ್ರಿಕ್ ಹಂತದವರೆಗೆ ಶಿಕ್ಷಣ ಪಡೆದಿದ್ದಾರೆ. ಒಟ್ಟು ಆತ್ಮಹತ್ಯೆಗೆ ಒಳಗಾದವರಲ್ಲಿ ಕೇವಲ 3.7% ಮಾತ್ರ ಪದವೀಧರರು ಮತ್ತು ಮೇಲ್ಪಟ್ಟವರು ಇದ್ದಾರೆ.

ನೇಣು ಬಿಗಿದುಕೊಂಡು ಶೇ.53.6ರಷ್ಟು ಜನ, ವಿಷ ತೆಗೆದುಕೊಂಡು ಶೇ. 25.8ರಷ್ಟು, ನೀರಲ್ಲಿ ಮುಳುಗಿ ಶೇ.5.2ರಷ್ಟು, ಸ್ವಯಂ-ಪ್ರಚೋದನೆಯಿಂದ ಶೇ.3.8ರಷ್ಟು ಜನ ಈ ರೀತಿಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019 ರಲ್ಲಿ 116 ಕೈದಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲಿ ಉತ್ತರ ಪ್ರದೇಶದಲ್ಲಿ 20, ಪಂಜಾಬ್ 13 ಮತ್ತು ಪಶ್ಚಿಮ ಬಂಗಾಳ 11 ಇದೆ. 2019 ರಲ್ಲಿ 42,480 ರೈತರು ಮತ್ತು ದೈನಂದಿನ ಬಾಜಿ ಕಟ್ಟುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಹಿಂದಿನ ವರ್ಷಕ್ಕಿಂತ ಶೇ. 6 ರಷ್ಟು ಹೆಚ್ಚಾಗಿದೆ.

ಇನ್ನು ಯುನಿಯನ್​ ಟೆರಿಟರಿಯಾದ ದೆಹಲಿಯಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಅಂದರೇ 2,526 ವರದಿ ಮಾಡಿದೆ. ನಂತರ ಪುದುಚೇರಿ 493. ಒಟ್ಟಾರೆ ದೇಶದಲ್ಲಿ ಆತ್ಮಹತ್ಯೆಗಳ ಪ್ರಮಾಣ ಶೇ.2.2 ರಷ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.