ETV Bharat / bharat

ವಿಶ್ವದ ಅತೀ ದೊಡ್ಡ ಲೋಗೋ ರಚಿಸಿ ವಿಶ್ವ ದಾಖಲೆ ಮಾಡಿದ ಚೆನ್ನೈ ವಿದ್ಯಾರ್ಥಿಗಳು.. - ಜಾಗೃತಿ

ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಆವಡಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳು 'ಬೇಟಿ ಬಚಾವೊ, ಬೇಟಿ ಪಡಾವೊ' ಯೋಜನೆಯ ಲೋಗೋವನ್ನು 12,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ.

school
author img

By

Published : Jul 12, 2019, 9:12 PM IST

ಚೆನ್ನೈ: ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದಲೇ 12,000 ಚದರ ಅಡಿ ವಿಸ್ತೀರ್ಣದಲ್ಲಿ 'ಬೇಟಿ ಬಚಾವೊ, ಬೇಟಿ ಪಡಾವೊ' ಯೋಜನೆಯ ಲೋಗೋ ರಚಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ.

ಜಾಗೃತಿ ಕಾರ್ಯಕ್ರಮದ ಅಂಗವಾಗಿ 2000 ವಿದ್ಯಾರ್ಥಿಗಳ ಸಹಾಯದಿಂದ ಆವಡಿ ಸರ್ಕಾರಿ ಶಾಲೆಯು ಈ ಲೋಗೋ ರಚಿಸಿ ಗಮನಸೆಳೆದಿದೆ. ಕಾರ್ಯಕ್ರಮದ ಮುಖ್ಯ ಅತಿಥಿ ತಿರುವಳ್ಳೂರು ಜಿಲ್ಲಾಧಿಕಾರಿ ಮಹೇಶ್ವರಿ ರವಿಕುಮಾರ್, ಶಾಲಾ ಮುಖ್ಯೋಪಾಧ್ಯಾಯರಿಗೆ ವಿಶ್ವದಾಖಲೆಯ ಪ್ರಮಾಣಪತ್ರ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರವಿಕುಮಾರ್, ಜಿಲ್ಲೆಯಲ್ಲಿ ಮಹಿಳಾ ಲಿಂಗಾನುಪಾತ ಕಡಿಮೆಯಿದೆ. ಇಂತಹ ಕಾರ್ಯಕ್ರಮಗಳು ಜನಜಾಗೃತಿ ಮೂಡಿಸುವಲ್ಲಿ ಸಹಕಾರಿ ಎಂದು ಹೇಳಿದರು.

ಹೆಣ್ಣು ಭ್ರೂಣ ಹತ್ಯೆ ಹಾಗೂ ಬಾಲ್ಯವಿವಾಹ ತಡೆಯಬೇಕೆಂದು. ಸರ್ಕಾರದ 'ಬೇಟಿ ಬಚಾವೊ, ಬೇಟಿ ಪಡಾವೊ' ಯೋಜನೆಯು ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿ ಆರಂಭಗೊಂಡಿದ್ದು, ಆ ಕುರಿತು ಜಾಗೃತಿ ಮೂಡಿಸುವ ಗುರಿ ಹೊಂದಿದೆ ಎಂದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.