ETV Bharat / bharat

ಸಾಲು ಸಾಲು ಹಬ್ಬಗಳ ನಡುವೆ, ಕೋವಿಡ್ ಬಗ್ಗೆ ಮುನ್ನೆಚ್ಚರಿಕೆ ಮರೆಯದಿರಿ!

ಕಳೆದ ಏಳೆಂಟು ತಿಂಗಳಿಂದ ಭಾರತ ಸೇರಿದಂತೆ ಕೊರೊನಾ ವಿಶ್ವದಾದ್ಯಂತ ಕೊರೊನಾ ರಣಕೇಕೆ ಹಾಕುತ್ತಲೇ ಇದೆ. ಇದಕ್ಕೆ ಈವರೆಗೆ ವ್ಯಾಕ್ಸಿನ್​ ಕಂಡುಹಿಡಿಯದ ಹಿನ್ನೆಲೆ ಕೋವಿಡ್ ಸಂಪೂರ್ಣ​ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ದೇಶದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ ಜನರು ಮಹಾಮಾರಿ ಸೋಂಕಿನಿಂದ ತಪ್ಪಿಸಿಕೊಳ್ಳಲು ಮುನ್ನೆಚ್ಚರಿಕೆ ವಹಿಸುವುದೊಂದೇ ದಾರಿಯಾಗಿದೆ.

Corona and festive season
ಕೊರೊನಾ​ ಮತ್ತು ಹಬ್ಬಗಳ ಸಂದರ್ಭ
author img

By

Published : Oct 7, 2020, 6:18 PM IST

ಹೈದರಾಬಾದ್​: ಜಗತ್ತು, ಕಳೆದ ಕೆಲ ತಿಂಗಳಿನಿಂದ ಅದೃಶ್ಯ ಶತ್ರುವೊಂದರ ವಿರುದ್ಧ ಹೋರಾಡುತ್ತಲೇ ಇದೆ. ಕೋವಿಡ್ ೧೯ ವಿಶ್ವವ್ಯಾಪ್ತಿಯಾಗಿ ಈವರೆಗೆ, 10 ಲಕ್ಷ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಜೊತೆಗೆ ಜಾಗತಿಕವಾಗಿ, ಸೋಂಕಿತರ ಸಂಖ್ಯೆ 3.5 ಕೋಟಿ ಮೀರಿದೆ. ಭಾರತದಲ್ಲಿ ಈವರೆಗೆ 66 ಲಕ್ಷ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಒಂದು ಲಕ್ಷಕ್ಕಿಂತ ಹೆಚ್ಚು ಮಂದಿ ಇದರಿಂದಾಗಿ ಸಾವನ್ನಪ್ಪಿದ್ದಾರೆ. ದಿನಗಳಂದಂತೆ, ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಇತ್ತೀಚೆಗೆ, ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಹೊಸ ಎಚ್ಚರಿಕೆಯನ್ನು ನೀಡಿದೆ.

ಈ ತಿಂಗಳು, ದೇಶಾದ್ಯಂತ, ಹಬ್ಬಗಳ ಸಾಲು. ಎಲ್ಲೆಡೆ ಜನ ಸಂದಣಿ, ಹಬ್ಬದಾಚರಣೆಯ ಸಂಭ್ರಮ. ಈ ಹಬ್ಬದ ಅವಧಿಯಲ್ಲಿ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ, ಕೇಂದ್ರ ರಾಜ್ಯ ಸರಕಾರಗಳಿಗೆ ಎಚ್ಚರಿಕೆ ನೀಡಿದೆ. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಹಬ್ಬದ ಆಚರಣೆ ಎಂದರೆ, ದೊಡ್ಡ ಜನಸಂದಣಿ, ಸಮುದಾಯ ಆಚರಣೆಗಳು ಎಂದರೆ ತಪ್ಪಾಗಲಾರದು. ಎಲ್ಲೆಡೆ ಜನ ಗುಂಪಾಗಿ ಕಲೆತು, ಹಬ್ಬ ಆಚರಿಸುತ್ತಾರೆ. ಆದರೆ, ಈ ಕೋವಿಡ್ ಸಂದರ್ಭದಲ್ಲಿ ಅದ್ಧೂರಿ ಹಬ್ಬದಾಚರಣೆಗಳನ್ನು ತಡೆಯಲು ನಾವು ಪಾಲಿಸಬೇಕಾದ ಏಕೈಕ ನಿಯಮ ಸಾಮಾಜಿಕ ಅಂತರ ಕಾಪಾಡುಕೊಳ್ಳುವಿಕೆ. ಕೊರೋನಾ ವೈರಸ್ ಒಬ್ಬರಿಂದ, ಇನ್ನೊಬ್ಬರಿಗೆ ಹರಡದಂತೆ ನಿಯಂತ್ರಿಸಲು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯವಶ್ಯಕ. ಸಾಮಾಜಿಕ ಅಂತರ ಎನ್ನುವುದು ಈಗ ಹೊಸ ಸಾಮಾನ್ಯ ವ್ಯವಸ್ಥೆಯಾಗಿದೆ. ಈ ಹಿನ್ನೆಲೆಯಲ್ಲಿ, ನಾವು ಹಬ್ಬಗಳ ಆಚರಣೆಗೆ ಹೆಚ್ಚಿನ ಮಹತ್ವ ನೀಡದೆ, ರೋಗ ಹರಡುವುದನ್ನು ತಡೆಯಬೇಕಿದೆ.

ಇದರ ಪ್ರಾಮುಖ್ಯತೆ ಅರಿವಾಗಬೇಕಾದರೆ, ನಾವು 2020ರ ಓಣಂ ಸಂಭ್ರಮಾಚರಣೆಯನ್ನು ಗಮನಿಸಬೇಕು. ಈ ಹಬ್ಬದ ಆಚರಣೆಗೆ, ವಿಶ್ವದ ನಾನಾ ಭಾಗಗಳಿಂದ ಕೇರಳಿಗರು ತಮ್ಮ ತವರು ರಾಜ್ಯಕ್ಕೆ ಮರಳಿದ್ದರು. ದುರದೃಷ್ಟವಶಾತ್, ಹಬ್ಬದ ಬಳಿಕ ಕೋವಿಡ್​​19 ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ನೀಡಲಾಗಿದ್ದ, ನೀತಿ ನಿಯಮ ಅನುಸರಿಸದ ಪರಿಣಾಮ, ಮಲಪ್ಪುರಂ, ಇಡುಕ್ಕಿ, ಕೊಲ್ಲಂ ಮತ್ತು ಪಥಮಿತ್ತಂಗಳಲ್ಲಿ ಈಗ ಕೋವಿಡ್ 19 ದೊಡ್ಡ ಮಟ್ಟದಲ್ಲಿ ಹರಡಿದೆ. ಪರಿಣಾಮ ಇದೀಗ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಕ್ಟೋಬರ್ 31ರವರೆಗೆ ರಾಜ್ಯಾದ್ಯಂತ ಸೆಕ್ಷನ್ 144ಅನ್ವಯ ನಿಷೇಧಾಜ್ಞೆ ವಿಧಿಸಿದ್ದಾರೆ. ಇನ್ನು ದುರ್ಗಾ ಪೂಜೆಗೆ ಹೆಸರುವಾಸಿಯಾಗಿರುವ, ಪಶ್ಚಿಮ ಬಂಗಾಳದಲ್ಲಿ ಇದೇ ರೀತಿಯ ಪರಿಣಾಮಗಳ ಬಗ್ಗೆ ಸಾರ್ವಜನಿಕ ಆರೋಗ್ಯ ಕ್ಷೇತ್ರದ ತಜ್ಞರು ಎಚ್ಚರಿಸಿದ್ದಾರೆ. ನವರಾತ್ರಿ ಎಂದರೆ, ಬಂಗಾಳದಲ್ಲಿ ದುರ್ಗಾ ಪೂಜಾ. ಈ ಹಬ್ಬ ಆಚರಣೆಗೆ ರಾಜ್ಯವು ಹೆಸರುವಾಸಿಯಾಗಿದೆ.

ನವರಾತ್ರಿ ಸಮಯದಲ್ಲಿ ಮಹಾರಾಷ್ಟ್ರ ಸರ್ಕಾರ ಈಗಾಗಲೇ ಗರ್ಬಾ ಮತ್ತು ದಾಂಡಿಯಾ ನೃತ್ಯಗಳನ್ನು ನಿಷೇಧಿಸಿದೆ. ಉತ್ತರ ಪ್ರದೇಶ, ದೆಹಲಿ ಮತ್ತು ತೆಲಂಗಾಣ ಸರ್ಕಾರಗಳು ಇಂತಹ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಅಗತ್ಯವಾದ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿವೆ. ಸರಕಾರದ ಜೊತೆಗೆ, ಜನರು ಕೂಡ ಸಮಾನ ಜವಾಬ್ದಾರಿಯನ್ನು ತೆಗೆದುಕೊಂಡು, ಕೋವಿಡ್19 ನಿಯಂತ್ರಣಕ್ಕೆ ಸಹಕರಿಸಬೇಕಿದೆ. ತೆಲಂಗಾಣದ ಪ್ರಸಿದ್ಧ ಆಚರಣೆ ಬತುಕಮ್ಮ, ದಸರಾ (ನವರಾತ್ರಿ) ಮತ್ತು ದೀಪಾವಳಿ ಸಂಭ್ರಮಾಚರಣೆ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಜನರು ಸ್ವಯಂಪ್ರೇರಣೆಯಿಂದ ಪಾಲಿಸಬೇಕು.

ವಿಶ್ವ ಅರೋಗ್ಯ ಸಂಸ್ಥೆ, ಕೋವಿಡ್-19 ಸಾಂಕ್ರಾಮಿಕ ರೋಗದ ಆರಂಭದಲ್ಲಿ, ಈ ವೈರಸ್ ಸೋಂಕಿತರು ಸೀನುವಾಗ ಅಥವಾ ಕೂಗಿದಾಗ ಮಾತ್ರ ದೊಡ್ಡ ಹನಿಗಳ ಮೂಲಕ ವೈರಸ್ ಹರಡುತ್ತದೆ ಎಂದು ಘೋಷಿಸಿತ್ತು. ನಂತರ, ನಮ್ಮ ಉಸಿರಾಟದ ಜೊತೆಗಿನ ಸಣ್ಣ ಹನಿಗಳ ಮೂಲಕ ಕೂಡ, ಈ ವೈರಸ್ ಹರಡುತ್ತದೆ ಎಂಬುದು ದೃಢಪಟ್ಟಿತು. ಆ ಬಳಿಕ ಈ ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸುವ ಸಲುವಾಗಿ, ಭಾರತ ತನ್ನ ಮೊದಲ ಲಾಕ್ ಡೌನ್ ಅನ್ನು ಘೋಷಿಸಿತು. ಹಂತ ಹಂತವಾಗಿ ದೇಶ ಅನ್​ಲಾಕ್ ನತ್ತ ಹೆಜ್ಜೆ ಇಟ್ಟಿತು. ದುರಂತವೆಂದರೆ, ಈ ಸಂದರ್ಭದಲ್ಲಿ, ಸಾರ್ವಜನಿಕರು ವೈರಸ್ ಅನ್ನು ಲಘುವಾಗಿ ಪರಿಗಣಿಸಿದರು. ಸರಕಾರದ ಸೂಚನೆಗಳನ್ನು ನಿರ್ಲಕ್ಷಿಸಿದರು.

ಕಡ್ಡಾಯ ಮುಖಗವಸು(ಮಾಸ್ಕ್​) ಧಾರಣೆ, ಸಾಮಾಜಿಕ ಅಂತರ ಕಾಪಾಡುಕೊಳ್ಳುವಿಕೆ ಬಗ್ಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಸ್ಪಷ್ಟ ನಿರ್ದೇಶನಗಳನ್ನು ನೀಡಿವೆ. ಆದರೆ ಕೆಲವು ರಾಜ್ಯಗಳು ಮುಖಗವಸು ಧರಿಸದಿರುವುದಕ್ಕೆ ದಂಡ ಅಥವಾ ಜೈಲು ಶಿಕ್ಷೆಯ ಎಚ್ಚರಿಕೆ ನೀಡುತ್ತಿಲ್ಲ. ಪರಿಣಾಮ ಹೆಚ್ಚು ಹೆಚ್ಚು ಜನರು ಮಾಸ್ಕ್​ ಇಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿದ್ದಾರೆ. ತಾವು ಅಪಾಯದಲ್ಲಿ ಸಿಲುಕಿಕೊಳ್ಳುವ ಜೊತೆಗೆ ಅವರು, ಇತರರನ್ನು ಕೂಡ ಅಪಾಯಕ್ಕೆ ತಳ್ಳುತ್ತಿದ್ದಾರೆ. ಆರಂಭದಲ್ಲಿ ಕೇವಲ ನಗರಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಈ ಕೋವಿಡ್-19 ಈಗ ಈಗ ಸಣ್ಣ ಪಟ್ಟಣ ಮತ್ತು ಹಳ್ಳಿಗಳಲ್ಲೂ ಸಹ ಉಲ್ಬಣಗೊಳ್ಳುತ್ತಿದೆ.

ಚಳಿಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚು ವರದಿಯಾಗುತ್ತದೆ. ಈ ಸಮಯದಲ್ಲಿ ಜನರು ಹಬ್ಬದಾಚರಣೆ, ಉತ್ಸವಗಳಲ್ಲಿ ಭಾಗವಹಿಸಿದರೆ, ಈ ರೋಗ ನಿಯಂತ್ರಣ ಯಾವುದೇ ಸರ್ಕಾರಕ್ಕೆ ಅಸಾಧ್ಯ. ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಜೆಟ್ ಮತ್ತು ವಾಸ್ತವ ಮೂಲಸೌಕರ್ಯದ ಮಿತಿಗಳನ್ನು ನಾವು ಅರ್ಥಮಾಡಿಕೊಳ್ಳಬೇಕು ಮತ್ತು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಓಣಂ ಹಬ್ಬದಾಚರಣೆಯ ದುರಂತದಿಂದ ನಾವು ಪಾಠ ಕಲಿಯಬೇಕು. ಹೀಗೆ ಹಬ್ಬ ಆಚರಿಸುವ ಬದಲು ಮಾಸ್ಕ್​​ ಧರಿಸಿ ಜನಸಂದಣಿ ಮತ್ತು ಗುಂಪುಗಳಿಂದ ದೂರ ಉಳಿಯುವುದರ ಮೂಲಕ ನಾವು ಹೆಚ್ಚು ಜವಾಬ್ದಾರಿಯುತವಾಗಿ ವರ್ತಿಸೋಣ.

ಕೋವಿಡ್-19ಗೆ ಸೂಕ್ತ ಲಸಿಕೆಯ ಬಗ್ಗೆ ಇನ್ನೂ ಖಚಿತವಾದ ಯಾವುದೇ ಭರವಸೆ ಇಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಮುಂದಿರುವ ಭರವಸೆ, ವೈಯಕ್ತಿಕ ಮುನ್ನೆಚ್ಚರಿಕೆ ಮಾತ್ರ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.