ಶ್ರೀನಗರ: ಇಂದಿನಿಂದ ಪವಿತ್ರ ಅಮರನಾಥನ ಯಾತ್ರೆ ಆರಂಭಗೊಂಡಿದೆ. ಜಮ್ಮುವಿನ ಭಗವತಿ ನಗರಯಾತ್ರಿ ವಿವಾಸ್ ನಿಂದ ಹೊರಟ ಮೊದಲ ಬ್ಯಾಚ್ ಅನ್ನ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಬೀಳ್ಕೊಟ್ಟರು. ಭಕ್ತಾಧಿಗಳು ಬಹಳ ಉತ್ಸುಕರಾಗಿದ್ದು, ಶಾಂತಿಯುತ ಯಾತ್ರೆಗಾಗಿ ಬಿಗಿಭದ್ರತೆ ಕೈಗೊಳ್ಳಲಾಗಿದೆ.
-
Udhampur: District administration and locals welcomed the first batch of devotees for #AmarnathYatra, at Tikri. #JammuAndKashmir pic.twitter.com/5xasrLxUY9
— ANI (@ANI) June 30, 2019 " class="align-text-top noRightClick twitterSection" data="
">Udhampur: District administration and locals welcomed the first batch of devotees for #AmarnathYatra, at Tikri. #JammuAndKashmir pic.twitter.com/5xasrLxUY9
— ANI (@ANI) June 30, 2019Udhampur: District administration and locals welcomed the first batch of devotees for #AmarnathYatra, at Tikri. #JammuAndKashmir pic.twitter.com/5xasrLxUY9
— ANI (@ANI) June 30, 2019
ಈಶ್ವರನ ಘೋಷಣೆಯೊಂದಿಗೆ ಸುಮಾರು 2.000 ಭಕ್ತಾದಿಗಳು ಕಾಶ್ಮೀರ ಕಣಿವೆಗೆ ತೆರಳಿದರು. ಈ ಮೊದಲ ಬ್ಯಾಚ್ ಬೇಸ್ ಕ್ಯಾಂಪ್ ತಲುಪಿದ ನಂತರ, ಸೋಮವಾರದಿಂದ 46 ದಿನದ ಈ ಯಾತ್ರೆ ಅಧಿಕೃತವಾಗಿ ಆರಂಭಗೊಳ್ಳಲಿದೆ. ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಮ್ ಅಥವಾ ಮಧ್ಯ ಕಾಶ್ಮೀರದ ಗ್ಯಾಂಡರ್‌ಬಲ್ ಜಿಲ್ಲೆಯ ಬಾಲ್ಟಾಲ್ ಮಾರ್ಗ ಮೂಲಕವಾಗಿ ಯಾತ್ರಿಕರು ಶಿವನ ಪವಿತ್ರ ಗುಹೆಗೆ ತೆರಳಲಿದ್ದಾರೆ.
ಇದೇ ವೇಳೆ ಮಾತನಾಡಿದ ಯಾತ್ರಿಕರೊಬ್ಬರು, ನಮಗೆ ಭಯೋತ್ಪಾದಕರ ಭಯವಿಲ್ಲ, ಪವಿತ್ರ ಯಾತ್ರೆಯ ಉತ್ಸಾಹದಲ್ಲಿದ್ದೇವೆ ಜೊತೆಗೆ ನಮ್ಮ ಸೇನೆಯ ಮೇಲೆ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮಗೆ ಬಾಬಾ ಅಮರನಾಥನ ದರ್ಶನವಾಗಬೇಕು. ಶಿವನ ಆಶೀರ್ವಾದ ಇರುವವರೆಗೂ ಯಾವುದೇ ಭಯೋತ್ಪಾದಕ ಶಕ್ತಿ ನಮ್ಮನ್ನು ತೊಂದರೆಗೀಡು ಮಾಡಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಹೇಳಿದ್ದಾರೆ.
ಶಾಂತಿಯುತ ಯಾತ್ರೆಗಾಗಿ 40,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭದ್ರತಾ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ. ಎರಡು ಯಾತ್ರಾ ಮಾರ್ಗಗಳು, ಬೇಸ್ ಕ್ಯಾಂಪ್‌ಗಳು, ವಸತಿಗೃಹಗಳು ಮತ್ತು ಸಮುದಾಯ ಅಡಿಗೆ ತಾಣಗಳಲ್ಲಿ ಸಿಆರ್‌ಪಿಎಫ್, ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. ಜೊತೆಗೆ ಕೆಲವು ಸೂಕ್ಷ್ಮ ಸ್ಥಳಗಳಲ್ಲಿ ಡ್ರೋನ್‌ಗಳನ್ನು ನಿಯೋಜಿಸಲಾಗಿದೆ.
46 ದಿನದ ಈ ಸುದೀರ್ಘ ಯಾತ್ರೆ ಶ್ರಾವಣ ಪೂರ್ಣಿಮ ದಿನವಾದ ಆಗಸ್ಟ್ 15ರಂದು ಮುಕ್ತಾಯಗೊಳ್ಳಲಿದೆ.