ETV Bharat / bharat

'ಅಪ್ಪಾ ಎದ್ದೇಳು'... ಹುತಾತ್ಮ ಪೊಲೀಸ್​​​ ಅಂತ್ಯಕ್ರಿಯೆಯಲ್ಲಿ ಮನಕಲಕುವ ದೃಶ್ಯ - undefined

ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ನಲ್ಲಿ ಉಗ್ರನ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಭಾನುವಾರ ಆಸ್ಪತ್ರೆಯಲ್ಲಿ ಹುತಾತ್ಮರಾದ ಎಸ್​ಹೆಚ್​ಒ ಅರ್ಷದ್​ ಖಾನ್ ಅವರ ಮಗ ತಂದೆಯ ಪಾರ್ಥಿವ ಶರೀರವನ್ನೇ ನೋಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

SSP
author img

By

Published : Jun 18, 2019, 8:09 AM IST

ಅನಂತನಾಗ್​: ಪ್ರೀತಿಯ ತಂದೆ ಎದ್ದು ಬಂದು ಮುದ್ದು ಮಾಡುತ್ತಿಲ್ಲವೇಕೆ ಎಂದು ಆ ಮಗು ನೋಡುತ್ತಲೇ ಇತ್ತು. ಪುಟ್ಟ ಮಗುವಿನ ಕಣ್ಣುಗಳಲ್ಲಿ ಸಾವಿರ ಪ್ರಶ್ನೆಗಳಿದ್ದವು. ತಂದೆ ಬಾರದ ಲೋಕಕ್ಕೆ ತೆರಳಿದ್ದಾರೆ ಎಂಬುದನ್ನು ಊಹಿಸಲೂ ಆಗದ ವಯಸ್ಸದು. ಆದರೆ ಈ ದೃಶ್ಯವನ್ನು ಕಂಡವರ ಕಣ್ಣುಗಳು ತುಂಬಿಬಂದವು.

ಹೌದು, ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ನಲ್ಲಿ ಉಗ್ರನ ಪೈಶಾಚಿಕ ದಾಳಿಯಿಂದ ಹುತಾತ್ಮರಾದ ಪೊಲೀಸ್​ ಅಧಿಕಾರಿಗೆ ಅಂತಿಮ ನಮನ ಸಲ್ಲಿಸಿದ ಸಂದರ್ಭ ಕಲ್ಲೆದೆಯನ್ನೂ ಕರಗಿಸುವಂತಿತ್ತು ಈ ದೃಶ್ಯ. ಉಗ್ರನ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಭಾನುವಾರ ಆಸ್ಪತ್ರೆಯಲ್ಲಿ ಹುತಾತ್ಮರಾದ ಎಸ್​ಹೆಚ್​ಒ ಅರ್ಷದ್​ ಖಾನ್ ಅವರ ಮಗ ತಂದೆಯ ಪಾರ್ಥಿವ ಶರೀರವನ್ನೇ ನೋಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

'ಅಪ್ಪಾ ಎದ್ದೇಳು' ಎಂಬರ್ಥದಲ್ಲಿ ತಂದೆಯ ಪಾರ್ಥಿವ ಶರೀರವನ್ನೇ ನೋಡುತ್ತಿದ್ದ ಮಗುವನ್ನು ಶ್ರೀನಗರದ ಎಸ್​ಎಸ್​ಪಿ ಡಾ. ಎಂ.ಹಸೀಬ್​ ಮುಘಲ್​ ಎತ್ತಿಕೊಂಡು ಹೋದರು. ಆಗಲೂ ಮಗು ತಂದೆಯ ಶರೀರವನ್ನೇ ನೋಡುತ್ತಿತ್ತು.

ಜೂನ್ 12ರಂದು ಅನಂತನಾಗ್​ನಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ಉಗ್ರನೊಬ್ಬ ದಾಳಿ ನಡೆಸಿದ್ದ. ಸ್ಥಳದಲ್ಲೇ ಐವರು ಯೋಧರು ಹುತಾತ್ಮರಾಗಿದ್ದರು. ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್​ಹೆಚ್​ಒ ಅರ್ಷದ್​ ಖಾನ್​ ಚಿಕಿತ್ಸೆ ಫಲಿಸದೆ ಭಾನುವಾರ ಹುತಾತ್ಮರಾದರು. ನಿನ್ನೆ ಸೇನಾ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.