ನವದೆಹಲಿ: ಕೇಂದ್ರ ಸರ್ಕಾರವು ಯಾವುದೇ ಕ್ರೀಡೆಯನ್ನು ದೇಶದ 'ರಾಷ್ಟ್ರೀಯ ಆಟ' ಎಂದು ಘೋಷಿಸಿಲ್ಲ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ ಸ್ಪಷ್ಟಪಡಿಸಿದೆ.
ಮಹಾರಾಷ್ಟ್ರದ ಧುಲೆ ಜಿಲ್ಲೆಯ ಶಾಲಾ ಶಿಕ್ಷಕರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರವಾಗಿ ಕ್ರೀಡಾ ಸಚಿವಾಲಯ ಈ ವಿಷಯವನ್ನು ತಿಳಿಸಿದೆ. ಭಾರತದಲ್ಲಿ ಹಾಕಿ ರಾಷ್ಟ್ರೀಯ ಕ್ರೀಡೆ ಎಂಬ ಜನಪ್ರಿಯತೆ ಗಳಿಸಿದೆ. ಆದ್ರೆ, ದೇಶದಲ್ಲಿ ಯಾವುದೇ ಆಟ ಅಥವಾ ಕ್ರೀಡೆಯನ್ನು ರಾಷ್ಟ್ರೀಯ ಕ್ರೀಡೆಯೆಂದು ಘೋಷಿಸಿಲ್ಲ ಎಂದು ಉತ್ತರಿಸಿದೆ.
ಮಹಾರಾಷ್ಟ್ರದ ಧುಲೆ ಜಿಲ್ಲೆಯ ಶಿಕ್ಷಕರೊಬ್ಬರಿಗೆ ವಿದ್ಯಾರ್ಥಿಗಳು ಯಾವಾಗ ಹಾಕಿಯನ್ನು ರಾಷ್ಟ್ರೀಯ ಕ್ರೀಡೆ ಎಂದು ಘೋಷಿಸಲಾಗಿದೆ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಉತ್ತರಕ್ಕಾಗಿ ಆರ್ಟಿಐ ಶಿಕ್ಷಕ ಮಯೂರ್ ಅಗರ್ವಾಲ್ ಆರ್ಟಿಐ ಮೊರೆ ಹೋಗಿದ್ದರು.
ಎಲ್ಲಾ ಜನಪ್ರೀಯ ಕ್ರೀಡಾ ವಿಭಾಗಗಳನ್ನು ಪ್ರೋತ್ಸಾಹಿಸುವುದು, ಉತ್ತೇಜಿಸುವುದು ಸರ್ಕಾರದ ಉದ್ದೇಶವಾಗಿದೆ" ಆದ್ದರಿಂದ ಸರ್ಕಾರ ಯಾವ ಕ್ರೀಡೆಯನ್ನು ರಾಷ್ಟ್ರೀಯ ಆಟವೆಂದು ಹೇಳಿಲ್ಲ ಎಂದು ಸಚಿವಾಲಯದ ಉತ್ತರ ನೀಡಿದೆ.