ETV Bharat / bharat

ರಾಮ ಜನ್ಮಭೂಮಿ ಅಥವಾ ನೂತನ ರಾಮನ ದೇವಸ್ಥಾನ..?

ಆಗಸ್ಟ್​ 5 ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿದೆ. ರಾಮ ಮಂದಿರಕ್ಕೆ ಸಂಬಂಧಪಟ್ಟಂತೆ ಕೆಲ ಪೂರಕ ವಿಷಯಗಳು ಇಲ್ಲಿವೆ.

author img

By

Published : Aug 2, 2020, 9:03 AM IST

ram mandir
ರಾಮ ಜನ್ಮಭೂಮಿ

ಹೈದರಾಬಾದ್​:ಅಯೋಧ್ಯೆಯಲ್ಲಿ ತಲೆ ಎತ್ತಲಿರುವ ಹೊಸ ರಾಮನ ದೇವಸ್ಥಾನವು ಸಂಬಂಧಿತ ಪ್ರಶ್ನೆಯನ್ನು ಹುಟ್ಟುಹಾಕಿದೆ. ಇದನ್ನು ರಾಮ ಜನ್ಮಭೂಮಿ ದೇವಸ್ಥಾನ ಅಥವಾ ಹೊಸ ರಾಮನ ದೇವಸ್ಥಾನ ಎಂದು ಕರೆಯಲಾಗುವುದೇ?

ತಜ್ಞರು ಹೇಳುವ ಪ್ರಕಾರ, ಬಾಬರಿ ಮಸೀದಿಯ ಕಟ್ಟಡ ವಿನ್ಯಾಸದೊಂದಿಗೆ ಮೂಲ ರಾಮ ಜನ್ಮಭೂಮಿ ದೇವಾಲಯವನ್ನು ನೆಲದ ಮಟ್ಟದಿಂದ ಮೇಲೇರಿಸಲಾಯಿತು. ವಿಗ್ರಹವನ್ನು ಮರು ಸಂಪಾದಿಸಿ ಮತ್ತು ನಂತರ ಅದನ್ನು ಪ್ರಾರ್ಥನೆಗಾಗಿ ತಾತ್ಕಾಲಿಕ ಟೆಂಟ್ ದೇವಾಲಯದಲ್ಲಿ ಪ್ರತಿಸ್ಠಾಪಿಸಲಾಯಿತು. ಆದರೆ ಮೂಲ ಗರ್ಭಗುಡಿ (ಗರ್ಭಗೃಹ) ಮಣ್ಣು ಮತ್ತು ಭಗ್ನಾವಶೇಷದಲ್ಲಿ ಎಲ್ಲೋ ಹುದುಗಿಹೋಯಿತು. ಇದು ಡಿಸೆಂಬರ್ 6, 1992 ರ ಬಾಬ್ರಿ ಮಸೀದಿ ಕೆಡವಿದ ನಂತರ ಘಟಿಸಿದ್ದು.

ಹೊಸ ರಾಮನ ದೇವಸ್ಥಾನದ ಭೂಮಿ ಪೂಜೆ ಮತ್ತು ಅಡಿಪಾಯ ಹಾಕುವ ಕಾರ್ಯಕ್ರಮವು ಆಗಸ್ಟ್ 3 ರಿಂದ ನಡೆಯಲಿದೆ. ಭೂಮಿ ಪೂಜೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 5 ರಂದು ಐದು ಬೆಳ್ಳಿ ಬ್ಲಾಕ್ ಗಳನ್ನು ಹಾಕುವ ಮೂಲಕ ಅಡಿಪಾಯ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಆರಂಭದಲ್ಲಿ, ಸುಮಾರು 250 ಅತಿಥಿಗಳು ಈ ಕಾರ್ಯಕ್ರಮಕ್ಕೆ ಹಾಜರಾಗಬೇಕಿತ್ತು. ಆದರೆ ಈಗ ಪಟ್ಟಿಯನ್ನು 125 ಕ್ಕೆ ಇಳಿಸಲಾಗಿದೆ. ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ, ಎಂ.ಎಂ. ಜೋಶಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ರಾಮ ಜನ್ಮಭೂಮಿ ಆಂದೋಲನದ ರೂವಾರಿ ಮೊಹಂತ್ ನಿರ್ತ್ಯ ಗೋಪಾಲ್ ದಾಸ್ ಅವರು ಆಹ್ವಾನಿತರಾಗಿದ್ದಾರೆ. ಹೊಸ ಗರ್ಭಗುಡಿ ಇರುವ ಸ್ಥಳದಲ್ಲಿ 40 ಕೆಜಿ ಬೆಳ್ಳಿ ಚಪ್ಪಡಿಯ್ನು ಇಡಲಾಗುವುದು.

ಭಗವಾನ್ ರಾಮನ ಜನ್ಮಸ್ಥಳವೆಂದು ನಂಬಲಾದ ಮೂಲ ಗರ್ಭಗುಡಿಗೆ ಬದಲಾಗಿ ಈ ನೂತನ ಗರ್ಭಗುಡಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ ಎನ್ನುವುದು ಇದರ ನಿರ್ದಿಷ್ಟವಾದ ಸಾರಾಂಶ. ದೇಶದ ಎಲ್ಲಾ ಪವಿತ್ರ ನದಿಗಳಿಂದ ತಂದ ನೀರು ಮತ್ತು ಮಣ್ಣನ್ನು ಭೂಮಿ ಪೂಜೆ ಮತ್ತು ಅಡಿಪಾಯ ಹಾಕುವ ಸಂದರ್ಭದಲ್ಲಿ ಸುರಿಯಲಾಗುತ್ತದೆ.

ಹೊಸ ರಾಮನ ದೇವಾಲಯ ಸಂಕೀರ್ಣವು ಅದ್ಭುತವಾದ ವಿನ್ಯಾಸ ಆಗಿರುತ್ತದೆ. ಸುಮಾರು 120 ಎಕರೆ ಪ್ರದೇಶದಲ್ಲಿ ಹರಡಿರುವ ಇದು ವಿಶ್ವದ ಮೂರನೇ ಅತಿದೊಡ್ಡ ಹಿಂದೂ ದೇವಾಲಯವಾಗಲಿದೆ. ಮೊದಲನೆಯದು ಕಾಂಬೋಡಿಯಾದ ಅಂಕೋರ್ ವಾಟ್ ದೇವಾಲಯ ಸಂಕೀರ್ಣ ಮತ್ತು ತಮಿಳುನಾಡಿನ ತಿರುಚಿರಾಪಲ್ಲಿಯಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಾಲಯ. ಈ ಸಂಕೀರ್ಣದಲ್ಲಿ ಭಗವಾನ್ ರಾಮನ ದೇವಾಲಯವು ಮುಖ್ಯ ದೇವಾಲಯವಾಗಿ ಸೀತಾ, ಲಕ್ಷ್ಮಣ, ಭರತ ಮತ್ತು ಹನುಮಾನ್ ದೇವಾಲಯಗಳೂ ಒಳಗೊಂಡಿವೆ.

ಹೊಸ ರಾಮನ ದೇವಾಲಯದ ಮಾದರಿಯನ್ನು ನಾಗರಾಜ ಶೈಲಿಯ ವಾಸ್ತುಶಿಲ್ಪದಲ್ಲಿ ರೂಪಿಸಲಾಗಿದೆ. ಇದನ್ನು 76,000-84,000 ಚದರ್​ ಅಡಿ ಪ್ರದೇಶದಲ್ಲಿ ಇರಿಸಲಾಗುವುದು. ವಿನ್ಯಾಸವನ್ನು 1983 ರಲ್ಲಿ ಚಂದ್ರಕಾಂತ್ ಸೋಮಪುರ ಅವರು ಸಿದ್ಧಪಡಿಸಿದ್ದರು. ಸೋಮಪುರ ಕುಟುಂಬವು ಗುಜರಾತ್‌ನ ಸೋಮನಾಥ ದೇವಾಲಯವನ್ನು ವಿನ್ಯಾಸಗೊಳಿಸಿತ್ತು ಮತ್ತು ಹೊಸ ರಾಮನ ದೇವಸ್ಥಾನದ ಮಾದರಿಯನ್ನು ಸಿದ್ಧಪಡಿಸುವ, ಕಂಬಗಳು ಮತ್ತು ಗೋಡೆಗಳನ್ನು ಕೆತ್ತಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ಆರಂಭಿಕ ವಿನ್ಯಾಸವು 141 ಅಡಿ ಎತ್ತರವನ್ನು ಹೊಂದಿದ್ದು ಅದನ್ನು 161 ಅಡಿಗಳಿಗೆ ಹೆಚ್ಚಿಸಲಾಗಿದೆ. ಮೂಲತಃ ಸೊಂಪುರಾ ಎರಡು ಮಹಡಿಯ ವಿನ್ಯಾಸವನ್ನು ರೂಪಿಸಿದ್ದರು. ಆದರೆ ಈಗ ಏಕರೂಪತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಮೂರು ಮಹಡಿಗಳನ್ನು ವಿನ್ಯಾಸವನ್ನು ರೂಪಿಸಲಾಗಿದೆ. ದೇವಾಲಯವು ಒಂದು ಮುಖ್ಯ ದೊಡ್ಡ ಗೋಪುರ ಹೊಂದಿದ್ದರು ಮತ್ತು ನಾಲ್ಕು ಗೋಪುರಗಳನ್ನು ಹೊಂದಿದೆ.

ಈ ದೇವಾಲಯವು 300 ಅಡಿ ಉದ್ದ ಮತ್ತು 280 ಅಡಿ ಅಗಲ ಮತ್ತು ಐದು ಪ್ರಾಂಗಣಗಳನ್ನು ಹೊಂದಿರುತ್ತದೆ. ಗೂರ್ ಮಂಟಪ ಇದು ಮುಚ್ಚಿದ ಪ್ರಾಂಗಣವಾಗಿದ್ದು, ಗರ್ಭಗುಡಿ ಇರುವ ಸ್ಥಳವಾಗಿದೆ. ಇದನ್ನು ದೇವರ ಮೂರ್ತಿಯ ದರ್ಶನಕ್ಕೆ ಬಳಸಲಾಗುತ್ತದೆ. ಇದಲ್ಲದೆ ದೇವಸ್ಥಾನಕ್ಕೆ ಭೇಟಿ ನೀಡುವ ಜನಸಂದಣಿಯನ್ನು ನಿರ್ವಹಣೆಗೆ ಪ್ರಾರ್ಥನಾ ಮಂಟಪ, ಕೀರ್ತನ ಮಂಟಪ, ನೃತ್ಯ ಮಂಟಪ ಮತ್ತು ರಂಗ ಮಂಟಪ ಇರುತ್ತದೆ. ಯಾವುದೇ ಸಮಯದಲ್ಲಿ ಈ ಮಂಟಪಗಳು 5,000 ರಿಂದ 8,000ರ ಜನರಿಗೆ ದರ್ಶನ ಸೇವೆ ಒದಗಿಸಲು ಸಹಾಯಕವಾಗುತ್ತವೆ.

ಈ ದೇವಾಲಯವನ್ನು ಮುಖ್ಯವಾಗಿ ರಾಜಸ್ಥಾನದಲ್ಲಿರುವ ಬನ್ಸಿಪಾಂಡ್ ಮರಳುಗಲ್ಲಿನಿಂದ ನಿರ್ಮಿಸಲಾಗುವುದು. ದೇವಾಲಯ ನಿರ್ಮಿಸಲು ಕನಿಷ್ಠ 1.75 ಲಕ್ಷ ಘನ ಅಡಿ ಮರಳುಗಲ್ಲು ಅಗತ್ಯವಾಗಿರುತ್ತದೆ. ಈ ದೇವಾಲಯದಲ್ಲಿ 212 ವಿನ್ಯಾಸವಿಕ್ತ ಕೆತ್ತಿದ ಕಂಬಗಳಿವೆ. ಅದರಲ್ಲಿ 100 ಕ್ಕೂ ಹೆಚ್ಚು ಈಗಾಗಲೇ ವಿಹೆಚ್‌ಪಿಯ ಸಂಪೂರ್ಣ ಸುಸಜ್ಜಿತ ಕಾರ್ಯಾಗಾರದಲ್ಲಿ ಕಳೆದ 30 ವರ್ಷಗಳಿಂದ ಕೆತ್ತಲಾಗಿದೆ. ಈ ಸ್ತಂಭಗಳನ್ನು ಕೆತ್ತಿಸುವ ಕೆಲಸ ಅಯೋಧ್ಯೆಯ ಕಾರ್ಯಾಗಾರದಲ್ಲಿ ನಡೆಯುತ್ತಿದೆ. ಈ ಸ್ತಂಭಗಳನ್ನು ಎರಡು ಹಂತಗಳಲ್ಲಿ ಜೋಡಿಸಲಾಗುವುದು ಮತ್ತು ಹಿಂದೂ ದೇವತೆಗಳ ಕೆತ್ತನೆಗಳು ಮತ್ತು ಅಲಂಕಾರಿಕ ವಿನ್ಯಾಸಗಳನ್ನು ಇದು ಹೊಂದಿರುತ್ತದೆ. ದೇವಸ್ಥಾನ ನಿರ್ಮಾಣದ ಉಸ್ತುವಾರಿ ವಹಿಸಿರುವ ಆಶಿಶ್ ಸೊಂಪೂರ ಅವರ ಪ್ರಕಾರ, " ದೇವಸ್ಥಾನದ ಮುಖ್ಯ ದ್ವಾರವನ್ನು ಯಾವ ರೀತಿ ವಿನ್ಯಾಸಗೊಳಿಸಲಾಗಿದೆ ಎಂದರೆ ಭಕ್ತರು ಆ ದೂರದಿಂದಲೂ ನಿಂತು ದೇವರ ದರ್ಶನ ಮಾಡಬಹುದು." ಸುಮಾರು 3.5 ವರ್ಷಗಳಲ್ಲಿ ಭಗವಾನ್ ರಾಮ ದೇವಾಲಯ ಪೂರ್ಣಗೊಳ್ಳಲಿದೆ ಎಂದು ಸೊಂಪುರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಮ್ ಲಲ್ಲಾ ಸಹಜವಾಗಿ ಭೂಮಿಪೂಜೆ ಸಂದರ್ಭದಲ್ಲಿ ಆಕರ್ಷಕವಾಗಿ ಕಂಗೊಳಿಸಲಿದ್ದಾರೆ. ಭೂಮಿ ಪೂಜೆಯ ದಿನದಂದು 9 ಅಮೂಲ್ಯ ಆಭರಣಗಳನ್ನು ಹೊದಿಸಿದ ಉಡುಪನ್ನು ರಾಮ ಧರಿಸುತ್ತಾನೆ. ಈ ಉಡುಪನ್ನು ದರ್ಜಿ ಭಗವತ್ ಪಹಾರಿ ಸಿದ್ಧಪಡಿಸಿದ್ದಾರೆ ಮತ್ತು ಇದು "ನವಗ್ರಹ" ವನ್ನು ಪ್ರತಿನಿಧಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.