ತಿರುವರೂರು (ತಮಿಳುನಾಡು): ತಮಿಳುನಾಡಿನ ತಿರುವರೂರು ಜಿಲ್ಲೆಯ ಪೈಂಗನಾಡು ಗ್ರಾಮವು ಯುಎಸ್ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ತವರೂರಾಗಿದ್ದು, ಇಲ್ಲಿನ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆ- 2020ರಲ್ಲಿ ಡೆಮೋಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರನ್ನು ನಾಮನಿರ್ದೇಶನ ಮಾಡಿದ ನಂತರ ಈ ಗ್ರಾಮವು ಖ್ಯಾತಿಗೆ ಪಾತ್ರವಾಯಿತು.
ಹ್ಯಾರಿಸ್ ಅವರ ತಾಯಿಯ ಅಜ್ಜಿಯರು ಈ ಸ್ಥಳಕ್ಕೆ ಸೇರಿದವರು ಎಂದು ಬಹಿರಂಗವಾದ ನಂತರ ಅಪರಿಚಿತ ಗ್ರಾಮವು ಗಮನ ಸೆಳೆಯುತ್ತಿದೆ.
ಪೈಂಗನಾಡು ಎಂಬ ಗ್ರಾಮವು ತಿರುವರೂರು ಜಿಲ್ಲೆಯ ಮನ್ನಾರ್ಗುಡಿ ಬಳಿ ಇದೆ. ಈ ಗ್ರಾಮದಲ್ಲೀಗ ಕಮಲಾ ಹ್ಯಾರಿಸ್ ಅವರ ಡಿಜಿಟಲ್ ಬ್ಯಾನರ್‌ಗಳನ್ನ ಹಾಕಿ ಗ್ರಾಮವನ್ನ ಅಲಂಕರಿಸುವ ಮೂಲಕ ಅವರ ವಿಜಯವನ್ನು ಬಯಸುತ್ತಿದ್ದಾರೆ.