ಚೆನ್ನೈ: ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಚೆನ್ನೈನ ಎಂಜಿಎಂ ಹೆಲ್ತ್ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್ಪಿಬಿ ಆರೋಗ್ಯ, ಇನ್ನಷ್ಟು ವಿಷಮಗೊಂಡಿದ್ದು, ಅವರನ್ನು ವೈದ್ಯರು ICUಗೆ ದಾಖಲಿಸಿದ್ದಾರೆ.
ಎಂಜಿಎಂ ಆಸ್ಪತ್ರೆಯ ವೈದ್ಯರು ಎಸ್ಪಿಬಿಯವರಿಗೆ, ಜೀವರ ರಕ್ಷಕ ಸಾಧನ ಅಳವಡಿಸಿದ್ದು, ನುರಿತ ವೈದ್ಯರ ತಂಡದಿಂದ ಚಿಕಿತ್ಸೆ ನಡೆದಿದೆ.