ಮಧುರೈ (ತಮಿಳುನಾಡು): ದಕ್ಷಿಣ ರೈಲ್ವೆ ವಿಭಾಗದ ರೈಲುಗಳ ಮೂಲಕ ತಮಿಳುನಾಡಿನ ಮಧುರೈ ಪಟ್ಟಣದಿಂದ ಬಾಂಗ್ಲಾದೇಶಕ್ಕೆ ಸ್ಥಳೀಯವಾಗಿ ಉತ್ಪಾದನೆ ಮಾಡಿದ ಸುಮಾರು 170ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳನ್ನು ರಫ್ತು ಮಾಡಲಾಗಿದೆ.
25 ರೈಲುಗಳಲ್ಲಿ 170 ಟ್ರ್ಯಾಕ್ಟರ್ಗಳನ್ನು ಒಂದೇ ಬಾರಿಗೆ ಸಾಗಿಸಿದ್ದು ಇದೇ ಮೊದಲಾಗಿದ್ದು, ಮಧುರೈನ ವಾಡಿಪಟ್ಟಿಯಲ್ಲಿರುವ ಟಫೆ ಕಾರ್ಖಾನೆಯಿಂದ ಬಾಂಗ್ಲಾದೇಶಕ್ಕೆ ದಕ್ಷಿಣ ರೈಲ್ವೆ ತನ್ನ ಸರಕು ಸಾಗಣೆ ರೈಲಿನಲ್ಲಿ ಟ್ರ್ಯಾಕ್ಟರ್ಗಳನ್ನು ಹೊತ್ತೊಯ್ದಿದೆ.
2019ರಲ್ಲಿ ಟಫೆ ಟ್ರ್ಯಾಕ್ಟರ್ ಉತ್ಪಾದನಾ ಕೈಗಾರಿಕೆಯು 12 ಸರಕು ಸಾಗಣೆ ರೈಲುಗಳಲ್ಲಿ ಟ್ರ್ಯಾಕ್ಟರ್ಗಳನ್ನು ಕಳುಹಿಸಲಾಗಿತ್ತು. 2020ಣೇ ವರ್ಷದಲ್ಲಿ 61 ಟ್ರ್ಯಾಕ್ಟರ್ಗಳ ರವಾನೆ ಮೂಲಕ 11.78 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ಮಾತುಕತೆ ವಿಫಲವಾದರೆ ಮಾಲ್, ಪೆಟ್ರೋಲ್ ಪಂಪ್ ಬಂದ್ ಎಚ್ಚರಿಕೆ!
ಈಗ ಕಳುಹಿಸಲಾಗಿರುವ ಟ್ರ್ಯಾಕ್ಟರ್ಗಳನ್ನು ವಾಡಿಪಟ್ಟಿಯಿಂದ ಬಾಂಗ್ಲಾದೇಶದ ಬೆನಾಪೋಲ್ ರೈಲ್ವೆ ನಿಲ್ದಾಣಕ್ಕೆ ಕಳುಹಿಸಲಾಗಿದೆ ಎಂದು ಕಾರ್ಖಾನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
-
A Tractor March With a Difference: Railways 🚆 loaded 25 wagons of tractors 🚜 from Vadiapatti in Tamil Nadu to Benapole in Bangladesh 🇧🇩
— Piyush Goyal (@PiyushGoyal) January 1, 2021 " class="align-text-top noRightClick twitterSection" data="
India with its superior & competitive agricultural technology and equipment is emerging as a key supplier to the world.#MoveItLikeRailways pic.twitter.com/Y86iTXT5uP
">A Tractor March With a Difference: Railways 🚆 loaded 25 wagons of tractors 🚜 from Vadiapatti in Tamil Nadu to Benapole in Bangladesh 🇧🇩
— Piyush Goyal (@PiyushGoyal) January 1, 2021
India with its superior & competitive agricultural technology and equipment is emerging as a key supplier to the world.#MoveItLikeRailways pic.twitter.com/Y86iTXT5uPA Tractor March With a Difference: Railways 🚆 loaded 25 wagons of tractors 🚜 from Vadiapatti in Tamil Nadu to Benapole in Bangladesh 🇧🇩
— Piyush Goyal (@PiyushGoyal) January 1, 2021
India with its superior & competitive agricultural technology and equipment is emerging as a key supplier to the world.#MoveItLikeRailways pic.twitter.com/Y86iTXT5uP
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ದಕ್ಷಿಣ ರೈಲ್ವೆಯನ್ನು ಶ್ಲಾಘಿಸಿರುವುದು ಮಾತ್ರವಲ್ಲದೇ ಭಾರತವು ಕೃಷಿ ತಂತ್ರಜ್ಞಾನ ಮತ್ತು ಕೃಷಿ ಸಲಕರಣೆಗಳ ವಲಯದಲ್ಲಿ ಜಾಗತಿಕ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದು, ಇದೊಂದು ಬದಲಾವಣೆಯೊಂದಿಗೆ ಟ್ರ್ಯಾಕ್ಟರ್ ಅಭಿಯಾನ ಎಂದು ಬಣ್ಣಿಸಿದ್ದಾರೆ.