ಮುಂಬೈ: ಕೇರಳ ಕಾಂಗ್ರೆಸ್ ಮುಖ್ಯಸ್ಥ ಮುಲ್ಲಪಲ್ಲಿ ರಾಮಚಂದ್ರನ್ ಇತ್ತೀಚೆಗೆ ಮಹಿಳೆಯರ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಗೆ ಗಾಯಕಿ ಸೋನಾ ಮೊಹಾಪಾತ್ರ ಪ್ರತಿಕ್ರಿಯಿಸಿದ್ದಾರೆ.
"ದೈನಂದಿನ ಜೀವನದಲ್ಲಿ ಲೈಂಗಿಕ ಬೆದರಿಕೆ ಮತ್ತು ಸಂಭವನೀಯ ಅತ್ಯಾಚಾರದ ಹಿಂಸಾಚಾರದಿಂದ ನಾವು ಮಹಿಳೆಯರು ವಾಸಿಸುತ್ತಿದ್ದೇವೆ. ನಾವು ಅದರೊಂದಿಗೆ ಬದುಕಲು ಕಲಿತಿದ್ದೇವೆ, ಅದರ ವಿರುದ್ಧ ಹೋರಾಡುತ್ತೇವೆ. ಸ್ವಾಭಿಮಾನದ ಕುರಿತು ನಿಮಗಿರುವ ಕಲ್ಪನೆಯನ್ನು ನಾನು ಖಂಡಿಸುತ್ತೆನೆ" ಎಂದು ಸೋನಾ ಟ್ವೀಟ್ ಮಾಡಿದ್ದಾರೆ.
ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೇನೆ ಎಂದು ಬಹಿರಂಗವಾಗಿ ಒಪ್ಪಿಕೊಳ್ಳುವುದಕ್ಕಿಂತ, ಸ್ವಾಭಿಮಾನಿ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದು ರಾಮಚಂದ್ರನ್ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.