ಲಖನೌ (ಉತ್ತರ ಪ್ರದೆಶ) : ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಕೋವಿಡ್ -19 ವಿರುದ್ಧದ ಹೋರಾಟವನ್ನು ದುರ್ಬಲಗೊಳಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಆರೋಪಿಸಿದ್ದಾರೆ.
"ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶವು ಮುಂದೆ ಸಾಗುತ್ತಿರುವಾಗ, ಈ ಪರಿಸ್ಥಿತಿಯಲ್ಲೂ ರಾಜಕೀಯವನ್ನು ಆಡುವ ಅನೇಕರು ಇದ್ದಾರೆ" ಎಂದು ಅವರು ಹೇಳಿದರು. "ಕೆಲವರು ತಮ್ಮ ರಾಜಕೀಯ ಹಿತಾಸಕ್ತಿಗಳಿಗಾಗಿ ಕೊರೊನಾ ವೈರಸ್ ವಿರುದ್ಧ ಭಾರತದ ಬಲವಾದ ಹೋರಾಟವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವುದು ಬೇಸರದ ಸಂಗತಿ" ಎಂದರು. "ಯಾವುದೇ ತಾರತಮ್ಯವಿಲ್ಲದೆ ಸರ್ಕಾರ ಎಲ್ಲರ ಪರವಾಗಿ ನಿಂತಿರುವಾಗ, ಕೆಲವು ಪಕ್ಷಗಳು 'ಅನಗತ್ಯ ರಾಜಕೀಯ' ಮಾಡುತ್ತಿವೆ" ಎಂದು ಅವರು ಹೇಳಿದರು.
"ತಾಳ್ಮೆಯಿಂದ ಸರ್ಕಾರವನ್ನು ಬೆಂಬಲಿಸುವಂತೆ ನಾನು ರಾಜ್ಯದ ಜನರಿಗೆ ಮನವಿ ಮಾಡುತ್ತೇನೆ" ಎಂದು ಆದಿತ್ಯನಾಥ್ ಹೇಳಿದರು.