ETV Bharat / bharat

ಕಣಿವೆನಾಡಲ್ಲಿ ಗುಂಡಿನ ಚಕಮಕಿ: ಉಗ್ರನ ಹತ್ಯೆ, ಯೋಧ ಹುತಾತ್ಮ - ಜಮ್ಮು ಪೊಲೀಸ್

ಕಣಿವೆನಾಡಿನಲ್ಲಿ ಉಗ್ರರ ಉಪಟಳ ಮುಂದುವರಿದಿದೆ. ಪುಲ್ವಾಮಾ ಬಳಿ ಉಗ್ರರು ಹಾಗೂ ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಯೋಧ ಹುತಾತ್ಮನಾಗಿದ್ದಾನೆ.

search operation
ಉಗ್ರರಿಗಾಗಿ ಶೋಧ
author img

By

Published : Aug 12, 2020, 11:23 AM IST

ಪುಲ್ವಾಮಾ (ಜಮ್ಮು ಕಾಶ್ಮೀರ): ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಮತ್ತು ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದ್ದು, ದುರಾದೃಷ್ಟವಶಾತ್ ಓರ್ವ ಸೈನಿಕ ಸಹ ಹುತಾತ್ಮನಾಗಿದ್ದಾನೆ.

ಪುಲ್ವಾಮಾ ಜಿಲ್ಲೆಯ ಕಮ್ರಾಜಿಪೋರಾ ಎಂಬಲ್ಲಿ ನಿಖರ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆ ನಡೆದಿದ್ದು, ಈ ವೇಳೆ ಭಯೋತ್ಪಾದಕರಿಂದ ಬಂದೂಕುಗಳು, ಗ್ರೆನೇಡ್​ಗಳು ಹಾಗೂ ಎಕೆ- 47 ರೈಫಲ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಂಗಳವಾರ ಸಂಜೆಯಿಂದ ಕಾರ್ಯಾಚರಣೆ ನಡೆದಿದ್ದು, ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಸೇನೆ ಜಂಟಿಯಾಗಿ ಉಗ್ರರಿಗಾಗಿ ಶೋಧ ನಡೆಸಿದ್ದವು ಎಂದು ಭಾರತೀಯ ಸೇನೆಯ ಚೀನಾರ್ ಕಾರ್ಪ್ಸ್​​​ ಟ್ವೀಟ್ ಮಾಡಿದೆ.

ಬದ್ಗಾಂ ಬಳಿ ಉಗ್ರರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.