ETV Bharat / bharat

ಪುರುಷರೊಂದಿಗೆ ಚರ್ಚಿಸಿ ಮತ ಚಲಾಯಿಸಿ ಎಂದ ಕೇಜ್ರಿವಾಲ್​ಗೆ ಚಾಟಿ ಬೀಸಿದ ಸಚಿವೆ - CM Arvind Kejriwal tweet

ಯಾರಿಗೆ ಮತ ಚಲಾಯಿಸಬೇಕು ಎಂದು ಸ್ವತಃ ನಿರ್ಧರಿಸುವಷ್ಟು ಸಮರ್ಥರು ಎಂದು ಮಹಿಳೆಯರನ್ನು ನೀವು ಪರಿಗಣಿಸುವುದಿಲ್ಲವೇ? ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ಗೆ ಸಚಿವೆ ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.

Smruthi Irani fires on Arvind Kejriwal
ಕೇಜ್ರಿವಾಲ್​ ವಿರುದ್ಧ ಸಚಿವೆ ಸ್ಮೃತಿ ಇರಾನಿ ಕಿಡಿ
author img

By

Published : Feb 8, 2020, 4:34 PM IST

ನವದೆಹಲಿ: ನಿಮ್ಮ ಮನೆಯ ಪುರುಷರೊಂದಿಗೆ ಚರ್ಚಿಸಿ ಮತ ಚಲಾಯಿಸಿ ಎಂದ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ವಿರುದ್ಧ ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಕಿಡಿಕಾರಿದ್ದಾರೆ.

ಇಂದು ದೆಹಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಮಹಿಳೆಯರು ತಪ್ಪದೇ ಮತದಾನ ಮಾಡುವಂತೆ ಅರವಿಂದ್​ ಕೇಜ್ರಿವಾಲ್ ಮನವಿ ಮಾಡಿದ್ದರು. ಮಹಿಳೆಯರು ಹೇಗೆ ಮನೆಯ ಜವಾಬ್ದಾರಿ ವಹಿಸಿಕೊಳ್ಳುತ್ತೀರೋ ಹಾಗೆಯೇ ದೇಶದ ಹಾಗೂ ದೆಹಲಿಯ ಜವಾಬ್ದಾರಿ ಕೂಡ ನಿಮ್ಮ ಹೆಗಲ ಮೇಲಿದೆ. ನೀವೆಲ್ಲರೂ ನಿಮ್ಮ ಮನೆಯ ಪುರುಷರನ್ನೂ ಕರೆದುಕೊಂಡು ಹೋಗಿ ಮತ ಚಲಾಯಿಸಬೇಕು. ಅಲ್ಲದೇ ಯಾರಿಗೆ ಮತದಾನ ಮಾಡಬೇಕೆಂಬುದನ್ನು ನಿಮ್ಮ ಮನೆಯ ಪುರುಷರೊಂದಿಗೆ ಚರ್ಚೆ ಮಾಡಿ ಎಂದು ಕೇಜ್ರಿವಾಲ್ ಟ್ವೀಟ್​ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವೆ ಸ್ಮೃತಿ ಇರಾನಿ, ಯಾರಿಗೆ ಮತ ಚಲಾಯಿಸಬೇಕು ಎಂದು ಸ್ವತಃ ನಿರ್ಧರಿಸುವಷ್ಟು ಸಮರ್ಥರು ಎಂದು ಮಹಿಳೆಯರನ್ನು ನೀವು ಪರಿಗಣಿಸುವುದಿಲ್ಲವೇ? ಎಂದು ಪ್ರಶ್ನಿಸಿ, 'ಮಹಿಳಾ ವಿರೋಧಿ ಕೇಜ್ರಿವಾಲ್'​ ಎಂದು ಟ್ವೀಟ್​​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.