ಸಾಕಷ್ಟು ಎದೆಹಾಲು ಸ್ರವಿಸುವುದಿಲ್ಲ ಎಂದು ತಾಯಿಯು ಮಗುವಿಗೆ ಅನೇಕ ಬಾರಿ ಫಾರ್ಮುಲಾ ಹಾಲನ್ನು ಕುಡಿಸುತ್ತಾಳೆ. ಆದ್ರೆ ಇದು ತಪ್ಪು. ನವಜಾತ ಶಿಶುಗಳಿಗೆ ತಾಯಿಯ ಎದೆ ಹಾಲು ಅತೀ ಅಗತ್ಯ. ಹೀಗಾಗಿ ನುರಿತ ಸ್ತನಪಾನ ಅಭ್ಯಾಸಗಳ ಬಗ್ಗೆ ತಾಯಿಗೆ ಶಿಕ್ಷಣ ನೀಡುವುದು ಅವಶ್ಯಕ. ಮಹಾರಾಷ್ಟ್ರದ ನಾಸಿಕ್ನ ಜಗದಿಶಾ ಮಕ್ಕಳ ಮಾರ್ಗದರ್ಶನ ಮತ್ತು ಹಾಲುಣಿಸುವ ನಿರ್ವಹಣಾ ಚಿಕಿತ್ಸಾಲಯದ ಮಕ್ಕಳ ವೈದ್ಯ ಡಾ. ಶಾಮಾ ಜಗದೀಶ್ ಕುಲಕರ್ಣಿ ಸಂದರ್ಶನದಲ್ಲಿ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ನೀಡುವ ಸಲಹೆಗಳೇನು:
- ಮಗು ಜನಿಸಿದ ಕೆಲವೇ ನಿಮಿಷಗಳ ಬಳಿಕ ಮಗುವನ್ನು ತಾಯಿಯ ಸ್ತನದ ಬಳಿ ಇಟ್ಟರೆ ಮಗುವೇ ಹಾಲುಣಲು ಮುಂದಾಗುತ್ತದೆ. ಇದು ಸ್ತನಪಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪ್ರಾರಂಭಿಸಲು ಸಹಾಯ ಮಾಡುತ್ತದೆ. ಜನಿಸಿದ ಒಂದು ಗಂಟೆಯಲ್ಲಿ, ಮಗು ಸ್ತನಪಾನವನ್ನು ಪ್ರಾರಂಭಿಸುತ್ತದೆ. ಅಷ್ಟೇ ಅಲ್ಲದೆ, ತಾಯಿಯ ಮೊಲೆತೊಟ್ಟುಗಳ ಪರಿಚಯವನ್ನು ಮಗು ವಾಸನೆಯ ಮೂಲಕ ಗುರುತಿಸುತ್ತದೆ. ಇದರಲ್ಲಿ ಮಗು ಗರ್ಭಾವಸ್ಥೆಯಲ್ಲಿ ಮಲಗಿರುತ್ತದೆ. ಅಮ್ಮನ ಹೃದಯ ಬಡಿತವನ್ನು ಕೇಳುತ್ತದೆ ಎಂದು ತಿಳಿಯಬಹುದು.
- 1 ರಿಂದ 6 ತಿಂಗಳವರೆಗೆ ವಿಶೇಷ ಸ್ತನಪಾನವನ್ನು ಮಾಡಿಸಬೇಕು. ಎದೆಹಾಲು, ಜೇನುತುಪ್ಪ, ನೀರು ಅಥವಾ ಸ್ತನಪಾನದ ಹೊರತಾಗಿ ಏನನ್ನೂ ನೀಡಬಾರದು.
- ಸ್ತನಪಾನ ಮಾಡಿಸುವಾಗ ಮಗುವಿನ ಜೊತೆ ಮಾತನಾಡಿ
ಸ್ತನಪಾನ ಮಾಡುವಾಗ ಮಗುವಿನ ತಲೆ ಮತ್ತು ದೇಹ ಒಂದೇ ಸಮತಲದಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮಗುವಿನ ಬೆನ್ನು ಮತ್ತು ತಲೆ ತಾಯಿಯ ಕೈಯಿಂದ ಬೆಂಬಲಿತವಾಗಿರಬೇಕು. ಅಷ್ಟೇ ಅಲ್ಲದೆ, ತಾಯಿಯೂ ಆರಾಮಾಗಿ ಕುಳಿತು ಸ್ತನಪಾನ ಮಾಡಿಸಿದರೆ ಉತ್ತಮ. ಸ್ತನವನ್ನು ಸಿ-ಸ್ಥಾನದಲ್ಲಿ ಹಿಡಿದುಕೊಳ್ಳಬೇಕು. ಅಂದರೆ ಹೆಬ್ಬೆರಳು ಮತ್ತು 4 ಬೆರಳುಗಳ ನಡುವೆ. ಮಗುವಿನ ತುಟಿಗೆ ಮೊಲೆತೊಟ್ಟುಗಳನ್ನು ಕೊಟ್ಟಾಗ ಮಗು ಬಾಯ್ತೆರೆದು ಹಾಲುಣುತ್ತದೆ. ಹಾಲುಣಿಸುವ ಸಂದರ್ಭದಲ್ಲಿ ಮಗು ಸಂಪೂರ್ಣ ಬಾಯಿ ತೆರೆಯಬೇಕು. ಐಸೊಲಾದ ಗರಿಷ್ಠ ಭಾಗ (ಮೊಲೆತೊಟ್ಟುಗಳ ಸುತ್ತಲಿನ ಕಪ್ಪು ಪ್ರದೇಶ) ಮಗುವಿನ ಬಾಯಿಯಲ್ಲಿರಬೇಕು. ಮಗುವಿನ ಗಲ್ಲ ಸ್ತನವನ್ನು ಸ್ಪರ್ಶಿಸಬೇಕು. ಈ ಕ್ರಿಯೆಗಳು ಪರಿಪೂರ್ಣವಾಗಿ ಮಗುವಿಗೆ ಹಾಲುಣಿಸುತ್ತಿದೆ ಎಂದು ಸೂಚಿಸುತ್ತದೆ.
ತಾಯಿ ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ಗಾಯಗಳಾಗುತ್ತದೆ. ಇದು ಸಾಮಾನ್ಯ. ಮೊದಲ 2 ದಿನಗಳು ಎದೆ ಹಾಲನ್ನು ಕೊಲೊಸ್ಟ್ರಮ್ ಎಂದು ಕರೆಯಲಾಗುತ್ತದೆ. ಹಾಲಿನ ಸ್ರವಿಸುವಿಕೆಯು ಕಡಿಮೆ ಇರುತ್ತದೆ. ಸ್ತನಪಾನ ಮಗುವಿನ ಪ್ರಥಮ ಲಸಿಕೆ ಎಂದು ಭಾವಿಸಲಾಗಿದೆ. ಆದರೆ ತಾಯಿ ಎದೆಹಾಲು ನಿಲ್ಲಿಸಿ ಮಗುವಿಗೆ ಫಾರ್ಮುಲಾ ಫೀಡ್ ಪ್ರಾರಂಭಿಸುತ್ತಾರೆ. ಇದು ಜನರು ಮಾಡುವ ಸಾಮಾನ್ಯ ತಪ್ಪು. ಸರಿಯಾಗಿ ಹಾಲುಣಿಸದೇ ಇದ್ದಲ್ಲಿ ಹಾಲಿನ ವರ್ಗಾವಣೆ ಕಳಪೆಯಾಗುತ್ತದೆ. ಅಷ್ಟೇ ಅಲ್ಲದೆ, ತಾಯಿಗೆ ಮೊಲೆತೊಟ್ಟು ಬಿರುಕು ಬೀಳುತ್ತದೆ. ಇನ್ನು ಮಗುವಿಗೆ ಎದೆಹಾಲು ಕಡಿಮೆಯಾದಲ್ಲಿ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿರುತ್ತವೆ.
ಸ್ತನಪಾನ ಸಾಕು ಎಂದು ಹೇಗೆ ನಿರ್ಣಯಿಸುವುದು:
- 24 ಗಂಟೆಗಳಲ್ಲಿ ಕನಿಷ್ಠ 6 ಬಾರಿ ಮೂತ್ರ ವಿಸರ್ಜನೆಯಾಗಬೇಕು
- 1 ತಿಂಗಳಲ್ಲಿ ಕನಿಷ್ಠ 500 ಗ್ರಾಂ ತೂಕ ಹೆಚ್ಚಾಗುತ್ತದೆ
ಸ್ತನಪಾನ ಮಾಡಿಸುವ ತಾಯಿಗೆ ಸಲಹೆಗಳು:
- ತಾಯಿ ಮತ್ತು ಮಗುವನ್ನು ಒಂದೇ ಹಾಸಿಗೆಯಲ್ಲಿ ಸರಿಯಾದ ಮುನ್ನೆಚ್ಚರಿಕೆಗಳೊಂದಿಗೆ ನೋಡಿಕೊಳ್ಳಬೇಕು. ತೊಟ್ಟಿಲು ಬಳಸಬೇಡಿ.
- ಸಮಯಕ್ಕೆ ಸರಿಯಾಗಿ ಆಹಾರ ಪೂರೈಕೆ
- ಎದೆಹಾಲು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಮಗುವಿಗೆ ಆಗಾಗ್ಗೆ ಹಸಿವು ಉಂಟಾಗುತ್ತದೆ. ಇದು ಹೆಚ್ಚು ಎದೆಹಾಲು ಉತ್ಪತ್ತಿಗೆ ಕಾರಣವಾಗುತ್ತದೆ.
- ತಾಯಿ ತನ್ನ ನಿಯಮಿತ ಆಹಾರವನ್ನು ತೆಗೆದುಕೊಳ್ಳಬೇಕು
- ತಾಯಿ ಜಂಕ್ ಫುಡ್, ಕೆಫೀನ್ನಂತಹ ಆಹಾರ ಸೇವನೆ ಮಾಡಬಾರದು
- ಹೆಚ್ಚಾಗಿ ಹಸುವಿನ ಹಾಲು ನೀಡಿದರೆ ಮಗುವಿಗೆ ಅಸಿಡಿಟಿ ಉಂಟಾಗುವ ಸಾಧ್ಯತೆ ಇದೆ.
- ತಾಯಿಗೆ ಕೋವಿಡ್ ಪಾಸಿಟಿವ್ ಆಗಿದ್ದರೂ ಸಹ ಆಕೆ ಮಗುವಿಗೆ ಹಾಲುಣಿಸಬಹುದು.