ETV Bharat / bharat

2016ರ ಹನುಮಂತಪ್ಪ ಪ್ರಕರಣದ ಕಹಿ ನೆನಪು: ಭಾರೀ ಹಿಮಪಾತಕ್ಕೆ ನಾಲ್ವರು ವೀರ ಯೋಧರು ಹುತಾತ್ಮ - ನಾಲ್ವರು ವೀರ ಯೋಧರು ಹುತಾತ್ಮ

ಸಿಯಾಚಿನ್​ ಹಿಮಪ್ರದೇಶದಲ್ಲಿ ನಡೆದ ಹಿಮಪಾತದಲ್ಲಿ ಇಬ್ಬರು ಸಹಾಯಕರು ಹಾಗೂ ನಾಲ್ವರು ವೀರ ಸೇನಾನಿ ಸೇರಿ 6 ಮಂದಿ ಹುತಾತ್ಮರಾಗಿರುವ ಘಟನೆ ನಡೆದಿದೆ.

2016ರ ಹನುಮಂತಪ್ಪ ಪ್ರಕರಣದ ಕಹಿ ನೆನಪು
author img

By

Published : Nov 19, 2019, 1:44 AM IST

ನವದೆಹಲಿ: ಸರಿಸುಮಾರು 19 ಸಾವಿರ ಅಡಿ ಎತ್ತರದ ಸಿಯಾಚಿನ್​​ ಹಿಮಶ್ರೇಣಿಯಲ್ಲಿ ಪಹರೆ ನಡೆಸುತ್ತಿದ್ದ ವೇಳೆ ಹಿಮಪಾತ ಉಂಟಾಗಿರುವ ಪರಿಣಾಮ ನಾಲ್ವರು ವೀರ ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಸಹಾಯಕರು ಸಹ ಸಾವನ್ನಪ್ಪಿದ್ದಾರೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿನ್ನೆ ಮಧ್ಯಾಹ್ನ 3.30ರ ವೇಳೆ ಏಕಾಏಕಿಯಾಗಿ ಭಾರೀ ಹಿಮಪಾತವಾದ ಕಾರಣ ಭಾರತೀಯ 8 ಸೈನಿಕರು ಹಿಮದಡಿ ಸಿಲುಕಿಕೊಂಡಿದ್ದರು. ಈ ವೇಳೆ ತಕ್ಷಣವೇ ಶೋಧಕಾರ್ಯ ಆರಂಭಿಸಲಾಗಿತ್ತು. ನಾಲ್ವರು ಯೋಧರು ಹಾಗೂ ಇಬ್ಬರು ಸಹಾಯಕರು ಹುತಾತ್ಮರಾಗಿದ್ದಾರೆ. ಈಗಾಗಲೇ ಕೆಲವರನ್ನು ರಕ್ಷಣೆ ಮಾಡಿ ಮಿಲಿಟರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಇನ್ನು ಕೆಲವರಿಗಾಗಿ ಶೋಧಕಾರ್ಯ ಮುಂದುವರಿದಿದೆ.

2016ರಲ್ಲಿ ಸಿಯಾಚಿನ್​​ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ 10 ಜನ ಭಾರತೀಯ ಯೋಧರು ಹುತಾತ್ಮರಾಗಿದ್ದರು. 25 ಅಡಿ ಆಳದ ಹಿಮದಲ್ಲಿ ಸಿಲುಕಿದ್ದ ಕರ್ನಾಟಕದ ಧೀರ ಯೋಧ ಹನುಮಂತಪ್ಪ ಕೊಪ್ಪದ 6 ದಿನಗಳ ಬಳಿಕ ಜೀವಂತವಾಗಿ ಪತ್ತೆಯಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದರು. ಇವರ ಜತೆ ಮೈಸೂರಿನ ಹೆಚ್.​ಡಿ ಕೋಟೆಯ ಮಹೇಶ್​, ಹಾಗೂ ಸುಬೇದಾರ್​ ಟಿಟಿ ನಾಗೇಶ್​ ಹುತಾತ್ಮರಾಗಿದ್ದರು.

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದು ಪರಿಗಣಿಸಲ್ಪಟ್ಟಿರುವ ಸಿಯಾಚಿನ್​​ನಲ್ಲಿ 1984ರಿಂದಲ್ಲೂ ಇಂತಹ ಘಟನೆ ನಡೆಯುತ್ತಲೇ ಇವೆ.

Intro:Body:

2016ರ ಹನುಮಂತಪ್ಪ ಪ್ರಕರಣದ ಕಹಿ ನೆನಪು: ಭಾರೀ ಹಿಮಪಾತಕ್ಕೆ ನಾಲ್ವರು ವೀರ ಯೋಧರು ಹುತಾತ್ಮ 

ನವದೆಹಲಿ: ಸರಿಸುಮಾರು 19 ಸಾವಿರ ಅಡಿ ಎತ್ತರದ ಸಿಯಾಚಿನ್​​ ಹಿಮಶ್ರೇಣಿಯಲ್ಲಿ ಪಹರೆ ನಡೆಸುತ್ತಿದ್ದ ವೇಳೆ ಹಿಮಪಾತ ಉಂಟಾಗಿರುವ ಪರಿಣಾಮ ನಾಲ್ವರು ವೀರ ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಸ್ಥಳೀಯರು ಸಹ ಸಾವನ್ನಪ್ಪಿದ್ದಾರೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿನ್ನೆ ಮಧ್ಯಾಹ್ನ 3.30ರ ವೇಳೆ ಏಕಾಏಕಿಯಾಗಿ ಭಾರೀ ಹಿಮಪಾತವಾದ ಕಾರಣ ಭಾರತೀಯ 8 ಸೈನಿಕರು ಹಿಮದಡಿ ಸಿಲುಕಿಕೊಂಡಿದ್ದರು. ಈ ವೇಳೆ ತಕ್ಷಣವೇ ಶೋಧಕಾರ್ಯ ಆರಂಭಿಸಲಾಗಿತ್ತು. ನಾಲ್ವರು ಯೋಧರು ಹಾಗೂ ಇಬ್ಬರು ಸ್ಥಳೀಯರು ಮೃತಪಟ್ಟಿದ್ದು, ಈಗಾಗಲೇ ಕೆಲವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಇನ್ನು ಕೆಲವರಿಗಾಗಿ ಶೋಧಕಾರ್ಯ ಮುಂದುವರಿದಿದೆ. 

2016ರಲ್ಲಿ ಸಿಯಾಚಿನ್​​ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ 10 ಜನ ಯೋಧರು ಹುತಾತ್ಮರಾಗಿದ್ದರು. 25 ಅಡಿ ಆಳದ ಹಿಮದಲ್ಲಿ ಸಿಲುಕಿದ್ದ ಕರ್ನಾಟಕದ ಧೀರ ಯೋಧ ಹನುಮಂತಪ್ಪ ಕೊಪ್ಪದ 6 ದಿನಗಳ ಬಳಿಕ ಜೀವಂತವಾಗಿ ಪತ್ತೆಯಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದರು. ಇವರ ಜತೆ ಮೈಸೂರಿನ ಎಚ್​ಡಿ ಕೋಟೆಯ ಮಹೇಶ್​, ಸುಬೇದಾರ್​ ಟಿಟಿ ನಾಗೇಶ್​ ಹುತಾತ್ಮರಾಗಿದ್ದರು. 

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಎಂದು ಪರಿಗಣಿಸಲ್ಪಟ್ಟಿರುವ ಸಿಯಾಚಿನ್​​ನಲ್ಲಿ 1984ರಿಂದಲ್ಲೂ ಇಂತಹ ಘಟನೆ ನಡೆಯುತ್ತಲೇ ಇವೆ.  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.