ETV Bharat / bharat

ವಿದ್ಯುತ್​ ತಂತಿ ತಗುಲಿ ಬಸ್​ಗೆ ಬೆಂಕಿ: 8 ಜನರ ಸಾವು, 20 ಕ್ಕೂ ಹೆಚ್ಚು ಜನರಿಗೆ ಗಾಯ - ರಾಜಸ್ಥಾನ್

ಬಸ್​ ವಿದ್ಯುತ್ ತಂತಿಗೆ ಸ್ಪರ್ಶಿಸಿದ್ದರಿಂದ ಬಸ್​ಗೆ ಬೆಂಕಿ ಹೊತ್ತಿಕೊಂಡು ಈ ಅನಾಹುತ ಜರುಗಿದೆ. 8 ಜನರು ಸಾವಿಗೀಡಾದರೆ, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Six died and seven injured as a bus caught fire
ಬಸ್​ಗೆ ಬೆಂಕಿ: ಆರು ಜನರ ಸಾವು,ಏಳು ಮಂದಿಗೆ ಗಾಯ
author img

By

Published : Jan 17, 2021, 2:33 AM IST

Updated : Jan 17, 2021, 4:14 AM IST

ರಾಜಸ್ಥಾನ್: ಜಲೋರ್ ಜಿಲ್ಲೆಯ ಮಹೇಶಪುರದಲ್ಲಿ ನಿನ್ನೆ ತಡರಾತ್ರಿ ವಿದ್ಯುತ್ ತಂತಿ ತಗುಲಿ ಬಸ್​ಗೆ ಬೆಂಕಿ ಬಿದ್ದು 8 ಜನರು ಸಾವಿಗೀಡಾಗಿದ್ದು,20 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಗಾಯಗೊಂಡವರನ್ನು ಆಂಬುಲೆನ್ಸ್‌ಗಳ ಸಹಾಯದಿಂದ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಇದೇ ವೇಳೆಗೆ ಆಗಮಿಸಿದ ಆಡಳಿತ ಸಿಬ್ಬಂದಿ ತನಿಖೆ ಪ್ರಾರಂಭಿಸಿದ್ದಾರೆ.

ಪ್ರವಾಸಿಗರು ಎರಡು ಬಸ್​ಗಳಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನಿಗೆ ದಾರಿ ತಿಳಿಯದೆ ಮಹೇಶಪುರ ಕಡೆಗೆ ಹೋಗಿದ್ದಾನೆ. ನಂತರ ಬೇರೆ ರಸ್ತೆಯಲ್ಲಿ ಬಂದಿದ್ದೇವೆ ಎಂದು ಅರಿವಾಗಿ ಮತ್ತೇ ವಾಪಸ್​ ಬರಲು ಮುಂದಾಗಿದ್ದಾರೆ. ಈ ವೇಳೆ ಬಸ್​ನ್ನು ಹಿಂತಿರುಗಿಸುವಾಗ ವಿದ್ಯುತ್​ ತಂತಿ ಬಸ್​ಗೆ ಸಂಪರ್ಕಿಸುತ್ತದೆ ಎಂದು ತಿಳಿದು ಬಸ್​ನ ಕಂಡಕ್ಟರ್​ ಬಸ್​ ರೂಪ್​ ಮೇಲೆ ಏರಿದ್ದಾನೆ. ದುರಂತ ಎಂದರೆ ಈತನಿಗೆ ವಿದ್ಯುತ್​ ಶಾಕ್​ ಹೊಡೆದು ನಂತರ ಬಸ್​ಗೆ ತಗುಲಿದೆ. ಪರಿಣಾಮ ಬಸ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಪಘಾತದಲ್ಲಿ ಕಂಡಕ್ಟರ್ ಬಸ್ಸಿನ ರೂಪ್​ ಮೇಲೆಗೆ ಸುಟ್ಟು ಕರಕಲಾಗಿದ್ದಾನೆ.

ಜೈನ ಸಮುದಾಯದ ಈ ಪ್ರಯಾಣಿಕರು ನಿಕೋಡಾಜಿ ಮತ್ತು ಮಂಡೋಲಿ ನಗರಕ್ಕೆ ಪ್ರಯಾಣಿಸಿದ ನಂತರ ಬೀವರ್‌ಗೆ ಹಿಂದಿರುಗುತ್ತಿದ್ದರು.

Last Updated : Jan 17, 2021, 4:14 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.