ETV Bharat / bharat

ವಿಶಾಖಪಟ್ಟಣಂ ಅನಿಲ ದುರಂತ: ಸಹಜ ಸ್ಥಿತಿಯತ್ತ LG ಪಾಲಿಮರ್ಸ್ ಸುತ್ತಲಿನ ಪ್ರದೇಶ

ಸ್ಟೈರೀನ್ ಮೊನೊಮರ್ ಅನಿಲ ಸೋರಿಕೆಯಿಂದ ಉಂಟಾಗಿದ್ದ ಆರ್‌.ಜಿ.ವೆಂಕಟಪುರಂ ಗ್ರಾಮದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ ಎಂದು ಆಂಧ್ರ ಪ್ರದೇಶ ಸರ್ಕಾರ ತಿಳಿಸಿದೆ.

ಸಹಜ ಸ್ಥಿತಿಗೆ ಮರಳಿದ LG ಪಾಲಿಮರ್ಸ್ ಸುತ್ತಲಿನ ಪ್ರದೇಶ

author img

By

Published : May 9, 2020, 11:39 PM IST

ವಿಶಾಖಪಟ್ಟಣ: ಮಾರಣಾಂತಿಕ ಸ್ಟೈರೀನ್ ಮೊನೊಮರ್ ಅನಿಲ ಸೋರಿಕೆಯಿಂದ ಉಂಟಾಗಿದ್ದ ಆರ್‌.ಜಿ.ವೆಂಕಟಪುರಂ ಗ್ರಾಮದಲ್ಲಿನ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ ಎಂದು ಆಂಧ್ರ ಪ್ರದೇಶ ಸರ್ಕಾರ ತಿಳಿಸಿದೆ. ಎಲ್‌ಜಿ ಪಾಲಿಮರ್ಸ್ ಸ್ಥಾವರದಿಂದ ಅನಿಲ ಸೋರಿಕೆಯಾಗಿ 12 ಮಂದಿ ಸಾವನ್ನಪ್ಪಿದ್ದು, ಮತ್ತು 300ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪೊಲೀಸ್ ಮಹಾನಿರ್ದೇಶಕ ಡಿ.ಗೌತಮ್ ಸಾವಂಗ್ ಮತ್ತು ವಿಶೇಷ ಮುಖ್ಯ ಕಾರ್ಯದರ್ಶಿ (ಕೈಗಾರಿಕೆಗಳು) ಕರಿಕಲ್ ವಲವೆನ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆವಿ ಸೋರಿಕೆ ಸಂಭವಿಸಿದ ಸ್ಟೈರೀನ್ ಶೇಖರಣಾ ತೊಟ್ಟಿಯಲ್ಲಿನ ತಾಪಮಾನ ಕಡಿಮೆಯಾಗಿದೆ. ಹಾಗೆಯೇ ಪಿಪಿಎಂ (ಸುತ್ತುವರಿದ ಗಾಳಿಯ ಗುಣಮಟ್ಟ) ಮಟ್ಟವೂ ಸರಿಯಾಗಿದೆ. ಚಿಂತೆ ಮಾಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಸಹಜ ಸ್ಥಿತಿಗೆ ಬರುತ್ತದೆ ಎಂದು ಹೇಳಿದರು.

ನವದೆಹಲಿ ಸೇರಿದಂತೆ ದೇಶದ ವಿವಿಧ ಭಾಗಗಳ ವಿಜ್ಞಾನಿಗಳು ಮತ್ತು ತಜ್ಞರು ಇಲ್ಲಿಗೆ ಬರುತ್ತಿದ್ದಾರೆ. ಅವರು ಪರಿಸ್ಥಿತಿಯನ್ನು ಪರಿಶೀಲಿಸುತ್ತಾರೆ. ಸ್ಥಾವರದಲ್ಲಿನ ತಾಪಮಾನವು ಕಡಿಮೆಯಾಗಿದೆ. ಜೊತೆಗೆ ಪಿಪಿಎಂ ಮಟ್ಟವೂ ಸರಿಯಾಗಿದೆ ಎಂದು ವಿಶೇಷ ಮುಖ್ಯ ಕಾರ್ಯದರ್ಶಿ ವಲವೆನ್ ಹೇಳಿದ್ದಾರೆ.

ಇಂದು ಬೆಳಿಗ್ಗೆ ಸ್ಥಾವರದಲ್ಲಿನ ಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಎಲ್​ಜಿ ಆಡಳಿತ ಮಂಡಳಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.