ETV Bharat / bharat

ವಿಕಾಸ್ ದುಬೆ ಪ್ರಕರಣ: ತನಿಖಾ ವರದಿ ಸಲ್ಲಿಸಲು ಎಸ್‌ಐಟಿಗೆ ಕಾಲಾವಕಾಶ ನೀಡಿದ ಸರ್ಕಾರ - ಎಸ್‌ಐಟಿ ತನಿಖಾ ವರದಿ

ಎಸ್​ಐಟಿ ಜುಲೈ 31ರೊಳಗೆ ತನ್ನ ತನಿಖೆಯನ್ನು ಪೂರ್ಣಗೊಳಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಿತ್ತು, ಆದರೆ, ತನಿಖೆ ಪೂರ್ಣಗೊಳ್ಳದ ಕಾರಣ ಸಮಿತಿ ಸರ್ಕಾರದಿಂದ ಹೆಚ್ಚುವರಿ ಸಮಯ ಕೋರಿತ್ತು.

vikas dubey
vikas dubey
author img

By

Published : Aug 6, 2020, 7:56 AM IST

ಲಖನೌ (ಉತ್ತರ ಪ್ರದೇಶ): ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಗ್ಯಾಂಗ್​ಸ್ಟರ್ ವಿಕಾಸ್ ದುಬೆ ಮತ್ತು ಆತನ ಗ್ಯಾಂಗ್ ವಿರುದ್ಧ ತನಿಖೆ ನಡೆಸುತ್ತಿರುವ ಎಸ್‌ಐಟಿಗೆ ಸರ್ಕಾರವು ತನ್ನ ತನಿಖಾ ವರದಿಯನ್ನು ಸಲ್ಲಿಸಲು ನಾಲ್ಕು ವಾರಗಳ ಹೆಚ್ಚುವರಿ ಸಮಯವನ್ನು ನೀಡಿದೆ. ಎಸ್‌ಐಟಿ ತನ್ನ ತನಿಖಾ ವರದಿಯನ್ನು ಆಗಸ್ಟ್ 28ರಂದು ಸಲ್ಲಿಸಲಿದೆ.

ಕಾನ್ಪುರದಲ್ಲಿ ಎಂಟು ಪೊಲೀಸರನ್ನು ಹತ್ಯೆ ಮಾಡಿ, ನಂತರ ಎನ್​ಕೌಂಟರ್​ನಲ್ಲಿ ಕೊಲ್ಲಲ್ಪಟ್ಟ ಆರೋಪಿ ವಿಕಾಸ್ ದುಬೆಯ ಅಪರಾಧ ಪ್ರಕರಣಗಳ ತನಿಖೆಗಾಗಿ ಜುಲೈ 11ರಂದು ಎಸ್ಐಟಿ ರಚಿಸಲಾಯಿತು. ಎಸ್‌ಐಟಿಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಭುಸ್ರೆಡ್ಡಿ, ಎಡಿಜಿ ಹರಿರಾಮ್ ಶರ್ಮಾ ಮತ್ತು ಡಿಐಜಿ ಜೆ ರವೀಂದ್ರ ಗೌರ್ ಇದ್ದಾರೆ.

ಸಮಿತಿಯು ಜುಲೈ 31ರೊಳಗೆ ತನ್ನ ತನಿಖೆಯನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿತ್ತು, ಆದರೆ, ತನಿಖೆ ಪೂರ್ಣಗೊಳ್ಳಲು ಸಾಧ್ಯವಾಗಲಿಲ್ಲ. ತಂಡವು ತನ್ನ ತನಿಖೆಯನ್ನು ಪೂರ್ಣಗೊಳಿಸಲು ಸರ್ಕಾರದಿಂದ ಹೆಚ್ಚುವರಿ ಸಮಯ ಕೋರಿದೆ ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ತನಿಖೆ ಪೂರ್ಣಗೊಳಿಸಲು ನಾಲ್ಕು ವಾರಗಳ ಹೆಚ್ಚುವರಿ ಸಮಯ ನೀಡಲಾಗಿದೆ.

ಎಸ್‌ಐಟಿ ಈವರೆಗೆ ಸುಮಾರು 50 ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಹಲವಾರು ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಹಲವಾರು ಸಾಕ್ಷಿಗಳ ಹೇಳಿಕೆಗಳನ್ನು ತೆಗೆದುಕೊಳ್ಳಬೇಕಾಗಿದೆ. 60 ಪ್ರಕರಣಗಳಲ್ಲಿ ದುಬೆಗೆ ಹೇಗೆ ಜಾಮೀನು ಸಿಕ್ಕಿತು ಮತ್ತು ವಿಕಾಸ್ ದುಬೆ ಎಷ್ಟು ಅಕ್ರಮ ಆಸ್ತಿ ಮಾಡಿಕೊಂಡಿದ್ದಾನೆ ಎಂಬ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.