ETV Bharat / bharat

ರೈಲು ನಿಲ್ದಾಣವನ್ನು ಪ್ಲಾಸ್ಟಿಕ್​ ಮುಕ್ತ ಮಾಡುವ ಪಣ... ಟೊಂಕ ಕಟ್ಟಿ ನಿಂತ ರೈಲ್ವೆ ಅಧಿಕಾರಿಗಳು - ಏಕ-ಬಳಕೆಯ ಪ್ಲಾಸ್ಟಿಕ್‌ ಬ್ಯಾನ್​ ಮಾಡಿದ ವಾರಣಾಸಿಯ ರೈಲ್ವೆ ಅಧಿಕಾರಿಗಳು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಮಿಷನ್​ನಡಿ ದೇಶದ ಜನತೆಗೆ ಪ್ಲಾಸ್ಟಿಕ್​ ಬಳಸದಿರಲು ಕರೆ ನೀಡಿದೆ. ಪ್ಲಾಸ್ಟಿಕ್​ನಿಂದ ಪರಿಸರದ ಮೇಲಾಗುವ ದುಷ್ಪರಿಣಾಮಳನ್ನು ನಿಯಂತ್ರಿಸಲು ಪ್ಲಾಸ್ಟಿಕ್​ ನಿಯಂತ್ರಣವೊಂದೇ ಸೂಕ್ತ ಕ್ರಮ ಎಂಬ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದಿವೆ. ಇದೀಗ ವಾರಣಾಸಿ ಕಂಟೋನ್​ಮೆಂಟ್​ ರೈಲ್ವೆ ನಿಲ್ದಾಣ ತನ್ನ ಆವರಣವನ್ನು ಪ್ಲಾಸ್ಟಿಕ್​​ ಮುಕ್ತಗೊಳಿಸಲು ಸಜ್ಜಾಗಿದೆ.

Varanasi railway station to keep premises & trains plastic free
ಏಕ-ಬಳಕೆಯ ಪ್ಲಾಸ್ಟಿಕ್‌ ಬ್ಯಾನ್​ ಮಾಡಿದ ವಾರಣಾಸಿಯ ರೈಲ್ವೆ ಅಧಿಕಾರಿಗಳು
author img

By

Published : Jan 7, 2020, 12:06 AM IST

Updated : Jan 7, 2020, 9:53 PM IST

ವಾರಣಾಸಿ(ಉತ್ತರ ಪ್ರದೇಶ): ಭಾರತೀಯ ರೈಲ್ವೆ ತನ್ನ ನಿಲ್ದಾಣ ಹಾಗೂ ರೈಲುಗಳಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್‌ನಿಂದ ಮುಕ್ತವಾಗಿಡಲು ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿರುವ ಬೆನ್ನಲ್ಲೇ, ಉತ್ತರ ಪ್ರದೇಶದ ವಾರಣಾಸಿ ರೈಲ್ವೆ ನಿಲ್ದಾಣವು ಅಲ್ಲಿನ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಬದಲಿಗೆ ಟೆರಾಕೋಟಾ ನಿರ್ಮಿತ ಕಪ್​ ಹಾಗೂ ಪ್ಲೇಟ್​ಗಳನ್ನು ಬಳಸುವಂತೆ ಸೂಚಿಸಿದೆ.

ಈ ರೀತಿಯಾಗಿ ಮಣ್ಣಿನಿಂದ ತಯಾರಿಸಿದ ಕಪ್- ಪ್ಲೇಟ್​ಗಳನ್ನು ಬಳಸುವುದರಿಂದ ಪ್ಲಾಸ್ಟಿಕ್​ ಬಳಕೆ ನಿಲ್ಲಿಸುವುದರ ಜೊತೆಗೆ ಕುಂಬಾರಿಕೆ ಮಾಡುವವರಿಗೆ ಹಣ ಗಳಿಸಲು ಒಂದು ಅವಕಾಶ ಮತ್ತು ಉದ್ಯೋಗ ದೊರೆತಂತಾಗುತ್ತದೆ ಎಂಬುದು ರೈಲ್ವೆ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಇನ್ನು, ಐಆರ್‌ಸಿಟಿಸಿ-ಚಾಲಿತ ಮಾತ್ರವಲ್ಲದೇ ಖಾಸಗಿ ಪಾನೀಯ ಮಳಿಗೆಗಳೂ ಸಹ ಈಗಾಗಲೇ ಮಣ್ಣಿನ ಕಪ್‌ಗಳಲ್ಲಿ ಚಹಾ ಮತ್ತು ಕಾಫಿಯನ್ನು ನೀಡಲು ಪ್ರಾರಂಭಿಸಿವೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಮಿಷನ್​ನಡಿ ದೇಶದ ಜನತೆ ಪರಿಸರದ ಸಂರಕ್ಷಣೆ ಮಾಡೋ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಇದೀಗ ವಾರಣಾಸಿ ಕಂಟೋನ್​ಮೆಂಟ್​ ರೈಲ್ವೆ ನಿಲ್ದಾಣದ ಅಧಿಕಾರಿಗಳು ಆವರಣವನ್ನು ಪ್ಲಾಸ್ಟಿಕ್​​ ಮುಕ್ತಗೊಳಿಸಲು ಸಜ್ಜಾಗಿದ್ದಾರೆ.

ಏಕ-ಬಳಕೆಯ ಪ್ಲಾಸ್ಟಿಕ್‌ ಬ್ಯಾನ್​ ಮಾಡಿದ ವಾರಣಾಸಿಯ ರೈಲ್ವೆ ಅಧಿಕಾರಿಗಳು

ನೀರಿನಂತಹ ಕೆಲವೇ ಪದಾರ್ಥಗಳನ್ನು ನೀಡಲು ಪ್ಲಾಸ್ಟಿಕ್‌ ಬಳಸಲಾಗುತ್ತದೆ. ಉಳಿದಂತೆ ಬೇರೆ ವಸ್ತುಗಳನ್ನು ಕಾಗದ ಅಥವಾ ಬಟ್ಟೆ ಚೀಲಗಳಲ್ಲಿ ಮಳಿಗೆಗಳು ನೀಡುತ್ತಿವೆ ಎಂದು ಪ್ರಯಾಣಿಕರು ಸಹ ಹೇಳುತ್ತಿದ್ದಾರೆ.

2019ರ ಅಕ್ಟೋಬರ್ 2 ರಿಂದ 50 ಮೈಕ್ರಾನ್‌ಗಿಂತ ಕಡಿಮೆ ಇರುವ ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ರೈಲ್ವೆ ಸಚಿವಾಲಯ ನಿಷೇಧಿಸಿ ಆದೇಶ ಹೊರಡಿಸಿತ್ತು. ಇದೀಗ ವಾರಣಾಸಿ ರೈಲ್ವೆ ನಿಲ್ದಾಣದ ಅಧಿಕಾರಿಗಳು ತಮ್ಮ ಆವರಣ ಹಾಗೂ ರೈಲುಗಳಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆ ಮಾಡದಂತೆ ಕಾರ್ಯನಿರ್ವಹಿಸುತ್ತಿರುವುದು ಉತ್ತಮ ಹೆಜ್ಜೆಯಾಗಿದೆ.

Intro:Body:

plastic story for Jan 07

Conclusion:
Last Updated : Jan 7, 2020, 9:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.