ETV Bharat / bharat

ಒಂಟಿ ವ್ಯಕ್ತಿ ಕಾರು ಚಾಲನೆ ಅಥವಾ ವ್ಯಾಯಾಮದ ವೇಳೆ ಫೇಸ್​ ಮಾಸ್ಕ್​ ಅಗತ್ಯವಿಲ್ಲ : ಕೇಂದ್ರ ಆರೋಗ್ಯ ಇಲಾಖೆ

author img

By

Published : Sep 3, 2020, 8:03 PM IST

ಮಹಾಮಾರಿ ಕೊರೊನಾ ವೈರಸ್​ ಹರಡಲು ಹೊರಡಿಸಿರುವ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದ್ದು, ಒಂಟಿ ವ್ಯಕ್ತಿ ಕಾರು ಚಾಲನೆ, ವ್ಯಾಯಾಮ ಅಥವಾ ಸೈಕ್ಲಿಂಗ್​ ವೇಳೆ ಫೇಸ್​ ಮಾಸ್ಕ್​ ಹಾಕಿಕೊಳ್ಳುವ ಸಾಧ್ಯತೆ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Health Ministry
Health Ministry

ನವದೆಹಲಿ: ಒಂಟಿ ವ್ಯಕ್ತಿ ಕಾರು ಚಾಲನೆ ಅಥವಾ ವ್ಯಾಯಾಮ/ಸೈಕ್ಲಿಂಗ್​ ಮಾಡುವಾಗ ಫೇಸ್​ ಮಾಸ್ಕ್​ ಹಾಕಿಕೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಮಾಹಿತಿ ನೀಡಿದೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್​ ಭೂಷಣ್​, ಕಾರಿನಲ್ಲಿ ಒಬ್ಬರಿಗಿಂತಲೂ ಹೆಚ್ಚಿನ ಪ್ರಯಾಣಿಕರಿದ್ದರೆ ಮಾಸ್ಕ್​ ಹಾಕಿಕೊಳ್ಳುವುದು ಕಡ್ಡಾಯ ಎಂದು ತಿಳಿಸಿದ್ದಾರೆ.

ಕಾರಿನಲ್ಲಿ ಒಬ್ಬರೇ ಇರುವಾಗ ಮಾಸ್ಕ್​ ಹಾಕಿಕೊಳ್ಳುವುದು ಕಡ್ಡಾಯವೇ? ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಕೆಲ ದಿನಗಳಿಂದ ಹೆಚ್ಚಿನ ಜನರು ವ್ಯಾಯಾಮ ಮಾಡಲು ಹೊರಬರುತ್ತಿದ್ದು, ಗುಂಪುಗಳಾಗಿ ಅವರು ಈ ಕಾರ್ಯದಲ್ಲಿ ಮಗ್ನರಾಗುತ್ತಿರುವ ಕಾರಣ ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ. ಆದರೆ ಒಬ್ಬನೇ ವ್ಯಕ್ತಿ ಸೈಕ್ಲಿಂಗ್​ ಮಾಡುವಾಗ ಮಾಸ್ಕ್​ ಹಾಕಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.

ಕೊರೊನಾ ವೈರಸ್ ಹಬ್ಬದಂತೆ ತಡೆಯಲು ಮಾಸ್ಕ್​ ಕಡ್ಡಾಯಗೊಳಿಸಲಾಗಿದೆ. ಆದರೆ ಒಬ್ಬರೇ ಓಡಾಡುವಾಗ ಫೇಸ್​ ಮಾಸ್ಕ್​ ಹಾಕಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ. ಜತೆಗೆ ಕೊರೊನಾ ವಿರುದ್ಧ ಹೋರಾಟಲು ಜಾರಿಯಲ್ಲಿರುವ ನಿಯಮ ಪಾಲನೆ ಕಡ್ಡಾಯ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.