ನವದೆಹಲಿ: "ಸರಳ ಮಹಿಳಾ ಹಣಕಾಸು ಸಚಿವೆಯೊಬ್ಬರ 'ಆ್ಯಕ್ಟ್ ಆಫ್ ಗಾಡ್' ಹೇಳಿಕೆಯನ್ನು ವ್ಯಂಗ್ಯವಾಗಿ ತೆಗೆದುಕೊಳ್ಳಲಾಗಿದೆ" ಎಂದು ಹೇಳಿದ ನಿರ್ಮಲಾ ಸೀತಾರಾಮನ್, ಲ್ಯಾಟಿನ್ ಪದ 'ಫೋರ್ಸ್ ಮಜೂರ್'ಅನ್ನು ಚೆನ್ನಾಗಿ ಸ್ವೀಕರಿಸಲಾಗಿದೆ ಎಂದು ಹೆಳಿದ್ದಾರೆ.
ದೇಶದ ಮೊದಲ ಮಹಿಳಾ ಹಣಕಾಸು ಸಚಿವೆ ಆಗಿರುವ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮಾತನಾಡಿ, "ನೆರೆಹೊರೆಯ ಆಂಟಿಯಂತೆ ಕಾಣುತ್ತಿದ್ದಾರೆ" ಎಂಬ ಕಾರಣದಿಂದಾಗಿ ತಮ್ಮ ಹೇಳಿಕೆಯನ್ನು ಟೀಕಿಸಲಾಗುತ್ತಿದೆ ಮತ್ತು ಅಭಿಪ್ರಾಯವನ್ನು ತಿರುಚಲಾಗುತ್ತಿದೆ ಎಂದು ಪ್ರತಿಪಾದಿಸಿದರು.
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಆರ್ಥಿಕತೆಗೆ ತೊಂದರೆಯಾಗಿದ್ದು, ಇದು ದೇವರ ಕಾರ್ಯವಾಗಿದೆ. ಇದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಸಂಕುಚಿತತೆ ಉಂಟಾಗಲಿದೆ ಎಂಬ ಅವರ ಅಭಿಪ್ರಾಯವನ್ನು ವಿವಿಧ ರಾಜಕೀಯ ಪಕ್ಷಗಳು ಟೀಕಿಸಿವೆ.