ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಲಖನೌ ವಿಶೇಷ ಸಿಬಿಐ ನ್ಯಾಯಾಲಯದಿಂದ ಐತಿಹಾಸಿಕ ತೀರ್ಪು ಹೊರಬಿದ್ದಿದೆ. ಇದೇ ವಿಚಾರವಾಗಿ ವಿವಿಧ ಮುಖಂಡರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ತೀರ್ಪಿಗೆ ಸಂಬಂಧಿಸಿದಂತೆ ಮಾತನಾಡಿರುವ ಕಾಂಗ್ರೆಸ್ ಇದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧವಾಗಿದ್ದು, ಆಘಾತಕಾರಿಯಾಗಿದೆ ಎಂದಿದೆ.
ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ್ ಮಾತನಾಡಿದ್ದು, ಬಾಬ್ರಿ ಮಸೀದಿ ಧ್ವಂಸ ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರ ಆಳವಾದ ರಾಜಕೀಯ ಪಿತೂರಿಯಾಗಿತ್ತು ಎಂದಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ ಆರೋಪಿಗಳನ್ನ ಖುಲಾಸೆಗೊಳಿಸಿರುವ ವಿಶೇಷ ನ್ಯಾಯಾಲಯದ ತೀರ್ಪು ಸಾಂವಿಧಾನ ಬಾಹಿರವಾಗಿದೆ ಎಂದಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್ 9ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಆ ವೇಳೆ ಬಾಬ್ರಿ ಮಸೀದಿ ಧ್ವಂಸ ಮಾಡಿರುವುದು ಸ್ಪಷ್ಟ ಕಾನೂನು ಬಾಹಿರ ಮತ್ತು ಕಾನೂನು ಉಲ್ಲಂಘನೆ ಎಂದು ಅಭಿಪ್ರಾಯ ಪಟ್ಟಿತ್ತು.
-
(2/2) this may be the recurring phenomenon, India is heading towards modiciary instead of Judiciary.
— Adhir Chowdhury (@adhirrcinc) September 30, 2020 " class="align-text-top noRightClick twitterSection" data="
">(2/2) this may be the recurring phenomenon, India is heading towards modiciary instead of Judiciary.
— Adhir Chowdhury (@adhirrcinc) September 30, 2020(2/2) this may be the recurring phenomenon, India is heading towards modiciary instead of Judiciary.
— Adhir Chowdhury (@adhirrcinc) September 30, 2020
ಅಧಿಕಾರ ಕಸಿದುಕೊಳ್ಳಲು ದೇಶದ ಕೋಮು ಸೌಹಾರ್ದತೆ ಮತ್ತು ಭ್ರಾತೃತ್ವವನ್ನ ನಾಶಮಾಡಲು ಬಿಜೆಪಿ-ಆರ್ಎಸ್ಎಸ್ ರಾಜಕೀಯ ಪಿತೂರಿಗೆ ದೇಶ ಸಾಕ್ಷಿಯಾಗಿದೆ ಎಂದಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್.ಕೆ. ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಮತ್ತು ವಿನಯ್ ಕಟಿಯಾರ್ ಸೇರಿ 32 ಆರೋಪಿಗಳಿಗೆ ಸುಮಾರು 28 ವರ್ಷಗಳ ನಂತರ ಪ್ರಕರಣದಿಂದ ಖುಲಾಸೆಗೊಳಿಸಲಾಗಿದೆ.
-
The Babri verdict is shocking, it goes contrary to principles of natural justice & even the SC’s observation
— Ahmed Patel (@ahmedpatel) September 30, 2020 " class="align-text-top noRightClick twitterSection" data="
">The Babri verdict is shocking, it goes contrary to principles of natural justice & even the SC’s observation
— Ahmed Patel (@ahmedpatel) September 30, 2020The Babri verdict is shocking, it goes contrary to principles of natural justice & even the SC’s observation
— Ahmed Patel (@ahmedpatel) September 30, 2020
ಬಾಬ್ರಿ ಮಸೀದಿ ಧ್ವಂಸ ಮಾಡಲು ಯಾವುದೇ ಪೂರ್ವ ಯೋಜನೆ ಇರಲಿಲ್ಲ. ಅಂತಹ ಪುರಾವೆಗಳು ಸಿಕ್ಕಿಲ್ಲ ಎಂದು ಸಿಬಿಐ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಹೇಳಿದ್ದಾರೆ.