ಅಯೋಧ್ಯೆ (ಉತ್ತರ ಪ್ರದೇಶ): ಕೊರೊನಾ ವೈರಸ್ ಲಾಕ್ಡೌನ್ನಿಂದಾಗಿ ಆಯೋಧ್ಯೆಯ ರಾಮಮಂದಿರದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು. ಲಾಕ್‌ಡೌನ್ ಕೊಂಚ ಸಡಿಲಿಕೆ ನೀಡಿದ ಬಳಿಕ ಈ ಕೆಲಸ ಪುನಃ ಪ್ರಾರಂಭವಾಗಿದ್ದು, ಭೂಮಿ ಸಮತಟ್ಟು ಮಾಡುವಾಗ ಶಿವಲಿಂಗದ ವಿಶೇಷ ಅವಶೇಷಗಳು ಪತ್ತೆಯಾಗಿವೆ ಎಂದು ವಿಶ್ವ ಹಿಂದೂ ಪರಿಷತ್ನ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ತಿಳಿಸಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಕೊರೊನಾ ವೈರಸ್ ಪ್ರೇರಿತ ಲಾಕ್ಡೌನ್ನಿಂದಾಗಿ ರಾಮ ಮಂದಿರದ ಕಾರ್ಯ ನಿಂತು ಹೋಗಿತ್ತು. ಆದರೆ ಅಯೋಧ್ಯೆ ಕಳೆದ ವಾರವಷ್ಟೇ ಅನುಮತಿ ಪಡೆದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನಿಂದ ರಾಮಮಂದಿರ ನಿರ್ಮಾಣಕ್ಕೆ ಸಿದ್ಧತೆಗಳು ಪ್ರಾರಂಭವಾಗಿವೆ.
ಕೊರೊನಾ ಹರಡುವಿಕೆಯ ಕಾರಣದಿಂದಾಗಿ ಈ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳಾದ ಸಾಮಾಜಿಕ ಅಂತರದೊಂದಿಗೆ ಮೂರು ಅರ್ಥ್ ಮೂವರ್ ಯಂತ್ರ, ಒಂದು ಕ್ರೇನ್, ಎರಡು ಟ್ರಾಕ್ಟರ್ಗಳು ಮತ್ತು ಹತ್ತು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೇ 11 ರಿಂದ ಈ ಸ್ಥಳದಲ್ಲಿ ಹಳೆಯ ಕೆಲಸವನ್ನು ಪುನಾರಂಭಿಸಿದ್ದು, ಹಿಂದೂ ದೇವರು ಮತ್ತು ದೇವತೆಗಳ ವಿಗ್ರಹಗಳು ಹಾಗೂ ಕೆಲವು ಪ್ರಾಚೀನ ಅವಶೇಷಗಳು ಇಲ್ಲಿ ದೊರೆತಿವೆ ಎಂದು ವಿನೋದ್ ಬನ್ಸಾಲ್ ಹೇಳಿದ್ದಾರೆ.
ಪುರಾತನ ಹೂವಿನ ಹೂದಾನಿ, ಕಮಾನಿನ ಕಲ್ಲುಗಳು, ಕಪ್ಪು ಸ್ಪರ್ಶ ಕಲ್ಲಿನಿಂದ ಮಾಡಿದ ಏಳು ಸ್ತಂಭಗಳು, ಕೆಂಪು ಕಲ್ಲಿನ ಆರು ಕಂಬಗಳು ಮತ್ತು ಐದು ಅಡಿ ಎತ್ತರದ ಕೆತ್ತಿದ ಶಿವಲಿಂಗ ಈಗಾಗಲೇ ಈ ಸ್ಥಳದಲ್ಲಿ ನಮಗೆ ದೊರೆತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದಲ್ಲದೆ, ಮರಳುಗಲ್ಲಿನ ಕೆತ್ತನೆಗಳು, ಕಂಬಗಳು ಹಾಗೂ ಶಿವಲಿಂಗ ಸಹ ಈ ಸ್ಥಳದಲ್ಲಿ ಕಂಡುಬಂದಿವೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದರು.
ಈ ಹಿಂದೆ ಹೈಕೋರ್ಟ್‌ನ ನೀಡಿದ ನಿರ್ದೇಶನದ ಮೇರೆಗೆ ಸ್ಥಳದಲ್ಲಿ ಹೂಳೆತ್ತುವ ಕೆಲಸ ನಡೆಸಿದಾಗ ಅಂತಹ ಅವಶೇಷಗಳು ದೊರೆತಿವೆ. ಈಗ ಕೆಲಸ ಪುನಾರಂಭಗೊಂಡಿದ್ದು, ಇನ್ನಷ್ಟು ವಸ್ತುಗಳನ್ನು ಹುಡುಕಲಾಗುತ್ತಿದೆ ಹಾಗೂ ಎಲ್ಲಾ ಕಲಾಕೃತಿಗಳನ್ನು ಜಾಗ್ರತೆಯಿಂದ ಸಂರಕ್ಷಿಸಲಾಗುತ್ತಿದೆ ಎಂದು ಬನ್ಸಾಲ್ ಹೇಳಿದ್ದಾರೆ.