ಮುಂಬೈ: ಮುಂಬರುವ ಲೋಕಸಭೆ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷ 184 ಅಭ್ಯರ್ಥಿಗಳ ಮೊದಲ ಪಟ್ಟಿ ನಿನ್ನೆ ರಿಲೀಸ್ ಮಾಡಿದೆ. ಇದರ ಬೆನ್ನಲ್ಲೇ ಇಂದು ಶಿವಸೇನೆ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ಕೂಡ ರಿಲೀಸ್ ಮಾಡಿದೆ.
ಮಹಾರಾಷ್ಟ್ರದಲ್ಲಿರುವ ಒಟ್ಟು 48 ಕ್ಷೇತ್ರಗಳ ಪೈಕಿ 25ರಲ್ಲಿ ಬಿಜೆಪಿ ಹಾಗೂ ಶಿವಸೇನೆ 23 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದು, ಅದರಲ್ಲಿ ಇದೀಗ 21 ಕ್ಷೇತ್ರಗಳಿಗಾಗಿ ತನ್ನ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. 2ಕ್ಷೇತ್ರಗಳಿಗೆ ಇನ್ನು ಅಭ್ಯರ್ಥಿ ಘೋಷಣೆ ಮಾಡಬೇಕಾಗಿದೆ. ನಿನ್ನೆ ಬಿಜೆಪಿ ಮಹಾರಾಷ್ಟ್ರದ 16 ಕ್ಷೇತ್ರಗಳಿಗಾಗಿ ತನ್ನ ಅಭ್ಯರ್ಥಿ ಘೋಷಣೆ ಮಾಡಿದೆ.
ಶಿವಸೇನೆ ಲಿಸ್ಟ್ ಇಂತಿದೆ
- ಮುಂಬೈ ಸೌತ್ - ಅರವಿಂದ ಸಾವಂತ್
- ಮುಂಬೈ ಸೌತ್ ಸೆಂಟ್ರಲ್ - ರಾಹುಲ್ ಶಿವಾಲೆ
- ಮುಂಬೈ ನಾರ್ತ್ ವೆಸ್ಟ್ - ಗಜಾನನ್ ಕೀರ್ತಿಕರ್
- ಥಾಣೆ - ರಾಜನ್ ವಿಚಾರೆ
- ಕಲ್ಯಾಣ್ - ಶ್ರೀಕಾಂತ್ ಶಿಂಧೆ
- ರಾಯಗಡ್ - ಅನಂತ್ ಗೀತೆ
- ರತ್ನಗಿರಿ ಸಿಂಧುದುರ್ಗ - ವಿನಾಯಕ ರಾತ್
- ಕೊಲ್ಹಾಪುರ - ಸಂಜಯ್ ಮಾಂಡಲಿಕ್
- ಹಾಟ್ಕಾನಂಗಲೆ - ಧೈರಿಶಿಲ್ ಮಾನೆ
- ನಾಶಿಕ್ - ಹೇಮಂತ್ ಗೋಡ್ಸೆ
- ಶಿರಡಿ - ಸದಾಶಿವ ಲೋಕಹಂದ್
- ಶಿರೂರ್ - ಶಿವಾಜಿರಾವ್ ಅದಾಲ್ರಾವ್ ಪಾಟೀಲ್
- ಔರಂಗಾಬಾದ್ - ಚಂದ್ರಕಾಂತ್ ಖೈರೆ
- ಯವತ್ಮಾಲ್-ವಾಶಿಮ್ - ಭಾವನ ಗವ್ಳಿ
- ಬುಲ್ಧನಾ - ಪ್ರತಾಪ್ ರಾವ್ ಜಾಧವ್
- ರಾಮ್ಟೆಕ್ - ಕ್ರುಪಾಲ್ ಟುಮಾನೆ
- ಅಮರಾವತಿ- ಆನಂದರಾವ್ ಅದ್ಸುಲ್
- ಪರ್ಭಾನಿ - ಸಂಜಯ್ ಜಾಧವ್
- ಮಾವಲ್ - ಶ್ರೀರಾಂಗ್ ಬರೇನ್
- ಹಿಂಗೋಲಿ-ಹೇಮಂತ್ ಪಾಟೀಲ್
- ಉಸ್ಮಾನಾಬಾದ್- ಓಮರೇಜ್ ನಿಂಬಾಳಕರ್