ನವದೆಹಲಿ: ಟೀಂ ಇಂಡಿಯಾದ ಆರಂಭಿಕ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ಸದ್ಯ ಗಾಯಗೊಂಡು ತಂಡದಿಂದ ಹೊರಗುಳಿದಿದ್ದು, ಮುಂಬರುವ ಟಿ-20 ವಿಶ್ವಕಪ್ನಲ್ಲಿ ಸ್ಥಾನ ಪಡೆದುಕೊಳ್ಳಲು ಸಜ್ಜುಗೊಳ್ತಿದ್ದಾರೆ.
ಇದರ ಮಧ್ಯೆ ಅವರ ಮಗ ಜೊರಾವರ್ ಧವನ್ ಹೆಗಲಿಗೆ ಕ್ರಿಕೆಟ್ ಕಿಟ್ ಇರುವ ಬ್ಯಾಗ್ ಹಾಕಿಕೊಂಡು ನಿಂತಿರುವ ಪೋಟೋ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಜತೆಗೆ ಅದಕ್ಕೆ ತಲೆಬರಹ ನೀಡಿರುವ ಶಿಖರ್ ಧವನ್,ನಾವು ತುಂಬಾ ಪ್ರೀತಿಸುತ್ತಿರುವುದನ್ನೇ ನಮ್ಮ ಮಗ ಕೂಡ ಪ್ರೀತಿಸುತ್ತಿರುವುದು ನೋಡಿ ತುಂಬಾ ಖುಷಿ ಆಯ್ತು. ಕ್ರಿಕೆಟ್ ಮೇಲಿನ ನಮ್ಮ ಪ್ರೀತಿ ರಕ್ತದಲ್ಲಿಯೇ ಇದೆ. ನೀನು ಚಾಂಪಿಯನ್ ಆಗುವುದು ನೋಡಲು ಮತ್ತು ನೀ ಅಂದುಕೊಂಡಿರುವ ಗುರಿ ಸಾಧಿಸುವುದನ್ನ ನೋಡಲು ಕಾಯುತ್ತಿದ್ದೇನೆ.
- " class="align-text-top noRightClick twitterSection" data="
">
ನಿನಗೆ ಮಾರ್ದರ್ಶನ ನೀಡಲು ನಿಮ್ಮ ಡ್ಯಾಡಿ ಯಾವಾಗಲು ಜತೆಯಲ್ಲೇ ಇರುತ್ತಾನೆ ಎಂದು ಹೇಳಿದ್ದಾನೆ.