ಮಲಪ್ಪುರಂ (ಕೇರಳ): ಗುರುಗಳೆಂದರೆ ಭಯ- ಭಕ್ತಿ ಇದ್ದೇ 1ಇರುತ್ತದೆ, ಅದರಲ್ಲೂ ಭಯದ ಪ್ರಮಾಣ ಹೆಚ್ಚೇ ಇರುತ್ತದೆ. ಆದರೆ ಎಲ್ಲೊ ಕೆಲವೊಬ್ಬ ಅಪರೂಪದ ಗುರುಗಳ ಮೇಲೆ ಮಾತ್ರ ಅತಿಯಾದ ಭಕ್ತಿ ಮತ್ತು ಪ್ರೀತಿ ಹೆಚ್ಚಿರುತ್ತದೆ. ಅಂತದ್ದೇ ಅತಿಯಾದ ಪ್ರೀತಿಯನ್ನು ಸಂಪಾದನೆ ಮಾಡಿರುವ ಕೇರಳದ ಮಲಪ್ಪುರಂ ಜಿಲ್ಲೆಯ ಪ್ರಸಿದ್ಧ ಶಿಕ್ಷಕನ್ನು ನಾವು ಪರಿಚಯ ಮಾಡಿಕೊಡಲಿದ್ದೇವೆ.
![shammu-master-of-urdu-pandit](https://etvbharatimages.akamaized.net/etvbharat/prod-images/5730994_urdu1.jpg)
ಶಮ್ಮು ಮಾಸ್ಟರ್, ಕೇರಳದ ಮಲಪ್ಪುರಂ ಜಿಲ್ಲೆಯ ಪ್ರಸಿದ್ಧ ಶಿಕ್ಷಕ. ಶಮ್ಮು ಮಾಸ್ಟರ್‌ನ ನಿಜವಾದ ಹೆಸರು ಡಾ.ಪಿಕೆ ಶಂಶುದ್ದೀನ್, ಆದರೆ ಸ್ಥಳೀಯರು ಮತ್ತು ವಿದ್ಯಾರ್ಥಿಗಳು ಅವರನ್ನು ಪ್ರೀತಿಯಿಂದ ಶಮ್ಮು ಮಾಸ್ಟರ್ ಎಂದು ಕರೆಯುತ್ತಾರೆ.
![shammu-master-of-urdu-pandit](https://etvbharatimages.akamaized.net/etvbharat/prod-images/5730994_urdu3.jpg)
ಶಂಶುದ್ದೀನ್ ಒಬ್ಬ ಶಿಕ್ಷಕ ಮತ್ತು ಸಂಶೋಧಕನಾಗಿದ್ದು, ಉರ್ದು ಭಾಷೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದಾನೆ. ಇವರು ಕೊಟ್ಟರಪರಂಬಿಲ್ನ ಮುಹುದ್ದೀನ್ ಮತ್ತು ಅಂಬಲಕುಟ್ ಕುರಿಕಲ್ ಫಾತಿಮಾ ಅವರ ನಾಲ್ಕು ಮಕ್ಕಳಲ್ಲಿ ಕೊನೆಯ ಕಿರಿಯರಾಗಿ ಮುಂಬೈಯಲ್ಲಿ ಜನಿಸಿದ್ದಾರೆ.
![shammu-master-of-urdu-pandit](https://etvbharatimages.akamaized.net/etvbharat/prod-images/5730994_urdu5.jpg)
ಮುಂಬೈಯಲ್ಲಿಯೇ ಹುಟ್ಟಿ- ಬೆಳೆದ ಶಮ್ಮು ಮಾಸ್ಟರ್, ಅಲ್ಲಿಯೇ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು ಹಾಗೂ ಉರ್ದು ಭಾಷೆಯಂತೆ ಮಲಯಾಳಂ ಭಾಷೆಯನ್ನು ಕಲಿತರು. ಕೊನೆಗೆ ತಮ್ಮ ದಡ ಮುಟ್ಟಿದ್ದು ಮಾತ್ರ ಉರ್ದು ಸಂಘಟನೆಗಳ ರಾಷ್ಟ್ರೀಯ ಮುಖ್ಯಸ್ಥನಾಗಿ.
![shammu-master-of-urdu-pandit](https://etvbharatimages.akamaized.net/etvbharat/prod-images/5730994_urdu4.jpg)
ಇದರ ಕುರಿತು ಶಮ್ಮು ಮಾಸ್ಟರ್ ಮಾತನಾಡುತ್ತಾ, ಮನೆಯಲ್ಲಿ ಮಲಯಾಳಂ ಭಾಷೆಯನ್ನೇ ಮಾತನಾಡಬೇಕೆಂಬುದು ತಂದೆಯ ಆಸೆಯಾಗಿತ್ತು. ತಾನು ಓದುತ್ತಿರುವಾಗಲೇ ಉರ್ದು ಪತ್ರಿಕೆಯಲ್ಲಿ ಕೆಲಸ ಮಾಡುವ ಅವಕಾಶ ಒದಗಿ ಬಂತು, ಅಲ್ಲಿಂದಲೇ ಶಮ್ಮು ಮಾಸ್ಟರ್‌ನ ಜೀವನ ಬದಲಾಗ ತೊಡಗಿತು. ತರುವಾಯ ಅವರು ಉರ್ದು ನಿಯತಕಾಲಿಕೆಗಳು ಮತ್ತು ಸಾಪ್ತಾಹಿಕ ಆವೃತ್ತಿಗಳಲ್ಲಿ ಲೇಖನಗಳು ಮತ್ತು ಕವನಗಳನ್ನು ಬರೆಯಲು ಪ್ರಾರಂಭಿಸಿದರು. ಇದರ ಮಧ್ಯೆಯೆ ಉರ್ದು ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಕೂಡ ಗಳಿಸುತ್ತಾರೆ.
![shammu-master-of-urdu-pandit](https://etvbharatimages.akamaized.net/etvbharat/prod-images/5730994_urdu2.jpg)
ಶಮ್ಮು ಮಾಸ್ಟರ್ ಅವರ ದಸ್ತಾನ್-ಎ-ಉರ್ದು ಕಾರ್ಯಕ್ರಮ ದೂರದರ್ಶನದಲ್ಲಿ ಪ್ರಸಾರವಾಗುತ್ತಿತ್ತು. ಸದ್ಯ ಕೇರಳ ಸರ್ಕಾರದ ಉರ್ದು ಪಠ್ಯಪುಸ್ತಕ ಉತ್ಪಾದನಾ ಸಮಿತಿ ಸೇರಿದಂತೆ ವಿವಿಧ ಉರ್ದು ಸಮಿತಿಗಳ ಪ್ರಮುಖ ಸದಸ್ಯರಾಗಿ ಕೆಲಸ ನಿರ್ವಹಿಸುತ್ತದ್ದಾರೆ. ಹಾಗೂ ಇವರಿಗೆ ನಾಲ್ಕು ರಾಜ್ಯಗಳಿಂದ 12 ಪ್ರಶಸ್ತಿಗಳನ್ನು ಸಂದಿವೆ.