ಮುಂಬೈ: ಜಗತ್ತು ತೆರೆದುಕೊಳ್ಳುತ್ತಿದ್ದಂತೆ ನೂತನ ಪೀಳಿಗೆಯು ಕಾಮ, ದುರಾಸೆ ಮತ್ತು ಅಪರಾಧಗಳತ್ತ ಆಕರ್ಷಿತವಾಗುತ್ತಿದೆ ಎಂದು ವೆಬ್ ಸರಣಿಯ REJCTX ಗೆ ಚೊಚ್ಚಲ ಪ್ರವೇಶ ಮಾಡುತ್ತಿರುವ ಮಾಡೆಲ್-ನಟಿ ಇಶಾ ಆತಂಕ ವ್ಯಕ್ತಪಡಿಸಿದರು.
ನನ್ನ ಪ್ರಕಾರ, ಇಂದಿನ ದಿನಗಳಲ್ಲಿ ಯುವಪೀಳಿಗೆ ನೈಜ ಪ್ರಪಂಚದ ಸಮಸ್ಯೆಗಳಿಗಿಂತ ಹೆಚ್ಚು ಬೇರೆ ಸಮಸ್ಯೆಗಳಿಗೆ ಒಳಗಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಾನೇಕೆ ಹೆಚ್ಚು ಲೈಕ್ಗಳನ್ನು ಪಡೆದುಕೊಂಡಿಲ್ಲ?. ಯಾಕೆ ಹೆಚ್ಚು ಜನಪ್ರಿಯತೆ ಪಡೆಯುತ್ತಿಲ್ಲ? ಅವನ ಕಾರು ನನ್ನದಕ್ಕಿಂತ ದೊಡ್ಡದಿದೆ ಎಂಬ ಯೋಚನೆಯಲ್ಲಿ ಅವರಿದ್ದಾರೆ. ಯುವ ಪೀಳಿಗೆ ಪ್ರಸ್ತುತ ವ್ಯವಸ್ಥೆಯ ಜೊತೆಗೆ ಬದುಕುವ ಬದಲು ಅಸೂಯೆ, ದುರಾಸೆಯನ್ನು ಅನುಸರಿಸುತ್ತಿದ್ದಾರೆ. ಇದು ಕೇವಲ ಹದಿಹರೆಯದವರ ಸಮಸ್ಯೆಯಲ್ಲ, ಪ್ರತಿಯೊಬ್ಬರ ಜೀವನವೂ ಸಾಮಾಜಿಕ ಮಾಧ್ಯಮದಲ್ಲಿ ಬದುಕುವ ರೀತಿಯಾಗಿದೆ ಎಂದಿದ್ದಾರೆ.
ಯುವ ಪೀಳಿಗೆ ಹೊರ ಜಗತ್ತಿಗೆ ಹೆಚ್ಚು ತೆರೆದುಕೊಳ್ಳುತ್ತಿದ್ದಂತೆ ಅವರಲ್ಲಿ ಲೈಂಗಿಕ ಅಪರಾಧಗಳು ಹೆಚ್ಚಾಗುತ್ತಿವೆ. ಹೊಸ ಸಂಬಂಧಗಳು, ಡೇಟಿಂಗ್ ಮತ್ತು ಇತರ ವಿಷಯಕ್ಕೆ ನಾನು ವಿರೋಧಿಯಲ್ಲ. ಆದರೆ, ಅತಿಯಾದ ಸಾಮಾಜಿಕ ಮಾಧ್ಯಮ ಬಳಕೆಯಿಂದಾಗಿ ಆಗುವ ಹೆಚ್ಚಿದ ಲೈಂಗಿಕ ಶೋಷಣೆಗೆ ನಾನು ಖಂಡಿತವಾಗಿ ವಿರೋಧಿಯಾಗಿದ್ದೇನೆ. ವರ್ಚುವಲ್ ಪ್ರಪಂಚಕ್ಕಿಂತ ನೈಜ ಜಗತ್ತಿನಲ್ಲಿ ಯುವ ಪೀಳಿಗೆ ಬದುಕಬೇಕು ಎಂದು ಆಶಿಸುವುದಾಗಿ ಅವರು ತಿಳಿಸಿದರು.