ಲಖನೌ(ಉತ್ತರ ಪ್ರದೇಶ): ಒಂದೇ ಕುಟುಂಬದ 7ಮಂದಿ ಯುವಕರು ನೀರುಪಾಲಾಗಿರುವ ಘಟನೆ, ಉತ್ತರ ಪ್ರದೇಶದ ಶಮಿಲಿ ಜಿಲ್ಲೆಯಲ್ಲಿ ನಡೆದಿದೆ.
ಈ 7 ಯುವಕರು ತಮ್ಮ ಧಾರ್ಮಿಕ ನಂಬಿಕೆಯಂತೆ ಚಿತಾಭಸ್ಮವನ್ನು ನೀರಿನಲ್ಲಿ ಬಿಡಲು ಬಂದು ನದಿಯಲ್ಲಿ ಸಿಲಿಕಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಮುಳುಗಿರುವ 7ಜನರ ಪೈಕಿ ಮೂವರ ಶವ ದೊರೆತಿದ್ದು, ಉಳಿದ ನಾಲ್ವರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು, ಅಸಿಸ್ಟಂಟ್ ಎಸ್ಪಿ ರಾಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ.