ಪುಲ್ವಾಮಾ(ಜಮ್ಮು ಮತ್ತು ಕಾಶ್ಮೀರ): ಅವಂತಿಪೋರಾದ ಸಂಬೊರಾ ಪ್ರದೇಶದಲ್ಲಿ ನಡೆದ ಸೇನೆ - ಭಯೋತ್ಪಾದಕರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಎಕೆ ರೈಫಲ್ಸ್, 4 ಮ್ಯಾಗಜಿನ್‌ಗಳು, 10 ಬುಲೆಟ್‌ಗಳು ಹಾಗೂ ಇತರ ವಸ್ತುಗಳನ್ನು ಉಗ್ರರಿಂದ ವಶಪಡಿಸಿಕೊಳ್ಳಲಾಗಿದೆ. ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕೂಂಬಿಂಗ್ ಆರಂಭಿಸಿದ್ದವು. ಈ ವೇಳೆ ಲಷ್ಕರ್ -ಎ-ತೊಯ್ಬಾ ಸಂಘಟನೆಯ ಉಗ್ರರು ಇರುವುದು ಸ್ಪಷ್ಟವಾಗಿತ್ತು. ಸ್ಥಳವನ್ನು ಸುತ್ತುವರಿದ ನಂತರ ಸೇನೆ-ಉಗ್ರರ ನಡುವೆ ಗುಂಡಿನ ಕಾಳಗದಲ್ಲಿ ಇಬ್ಬರನ್ನು ಹೊಡೆದುರುಳಿಸಲಾಗಿದೆ.
ಹತರಾದವರ ಗುರುತು ಪತ್ತೆಯಾಗಿಲ್ಲ. ಆದರೆ, ಕಾಳಗದಲ್ಲಿ ಬಶೀರ್ ಅಹಮ್ಮದ್ ಮತ್ತು ಗುಲಾಮ್ ಮಹಮ್ಮದ್ ಎಂಬುವರ ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.