ETV Bharat / bharat

ಅಯೋಧ್ಯೆಯಲ್ಲಿ ಡಿಸೆಂಬರ್ 17ರವರೆಗೆ ಸೆಕ್ಷನ್ 144 ಜಾರಿ ಮಾಡಿದ ಜಿಲ್ಲಾಡಳಿತ

ಅಯೋಧ್ಯೆಯಲ್ಲಿ ಸೆಕ್ಷನ್ 144 ಐದು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಒಟ್ಟುಗೂಡಿಸುವುದನ್ನು ನಿಷೇಧಿಸುವ ಕ್ರಿಮಿನಲ್ ಪ್ರೊಸೀಜರ್ (ಸಿಆರ್‌ಪಿಸಿ) ಸೆಕ್ಷನ್ 144 ವಿಧಿಸಲಾಗಿದ್ದು, ಡಿಸೆಂಬರ್ 17ರವರೆಗೆ ನಿಷೇಧ ಆದೇಶ ಅನ್ವಯವಾಗಲಿದೆ.

ayodhya
ayodhya
author img

By

Published : Oct 24, 2020, 7:53 PM IST

ಅಯೋಧ್ಯೆ (ಉತ್ತರ ಪ್ರದೇಶ): ಹಬ್ಬದ ಅವಧಿಯಲ್ಲಿ ಸಾಮರಸ್ಯ ಕಾಪಾಡುವ ಸಲುವಾಗಿ ಏಕಕಾಲದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಒಟ್ಟುಗೂಡಿಸುವುದನ್ನು ನಿಷೇಧಿಸುವ ಕ್ರಿಮಿನಲ್ ಪ್ರೊಸೀಸರ್ (ಸಿಆರ್‌ಪಿಸಿ) ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆಯನ್ನ ವಿಧಿಸಲಾಗಿದೆ.

ಜಿಲ್ಲೆಯಲ್ಲಿ ಡಿಸೆಂಬರ್ 17ರವರೆಗೆ ನಿಷೇಧ ಆದೇಶ ಅನ್ವಯವಾಗಲಿದೆ. ಯುಪಿ ಮುಖ್ಯಮಂತ್ರಿ 'ದೀಪೋತ್ಸವ'ದಲ್ಲಿ ಭಾಗಿಯಾಗಲಿದ್ದು, ಉತ್ಸವಗಳ ನಡುವೆ ಕೆಲವು ಪ್ರಮುಖ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಅನುಜ್ ಕುಮಾರ್ ಝಾ ಹೇಳಿದ್ದಾರೆ.

"ನವೆಂಬರ್ 13ರಂದು ರಾಮಕಥಾ ಪಾರ್ಕ್, ರಾಮ್​ ಕಿ ಪೈಡಿ, ನಾಯಘಟ್, ಸರಯೂ ಆರತಿ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿವೆ. ರಾಮಕಥಾ ಪಾರ್ಕ್‌ನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಶ್ರೀ ರಾಮ, ಸೀತೆ, ಲಕ್ಷ್ಮಣರ ಪಟ್ಟಾಭಿಷೇಕ ಸಮಾರಂಭ ನಡೆಯಲಿದೆ. ಈ ಸಮಯದಲ್ಲಿ ಹೆಲಿಕಾಪ್ಟರ್‌ನಿಂದ 'ಪುಷ್ಪವರ್ಷ' ಇರಲಿದೆ. ಸಂಜೆ ಸರಯೂ ಆರತಿಯ ನಂತರ ಭಾಮ ಸಂಧ್ಯಾ ಸ್ಥಳದಲ್ಲಿ ರಾಮ್‌ಲೀಲಾ ಆಯೋಜಿಸಲು ನಿರ್ಧರಿಸಲಾಗಿದೆ ಮತ್ತು ರಾಮ್ ಕಿ ಪೈಡಿಯನ್ನು ದೀಪಗಳಿಂದ ಅಲಂಕರಿಸಲಾಗುವುದು" ಎಂದು ಹೇಳಿದರು.

"ಜಿಲ್ಲೆಗೆ ಸಾಂಸ್ಕೃತಿಕ ಪ್ರಾಮುಖ್ಯತೆ ಇರುವುದರಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿರ್ಬಂಧ ಹೇರಲು ಜಿಲ್ಲಾಡಳಿತ ನಿರ್ಧರಿಸಿದೆ" ಎಂದು ಝಾ ತಿಳಿಸಿದರು.

"ಪೆಂಡಾಲ್​ಗಳು ಮತ್ತು ದೊಡ್ಡ ವಿಗ್ರಹಗಳ ಮೇಲೆ ನಿರ್ಬಂಧವಿದೆ. ಕಾರುಗಳು, ಆಟೋಗಳು ಇತ್ಯಾದಿಗಳಲ್ಲಿ ಸಾಗಿಸಬಹುದಾದ ಸಣ್ಣ ವಿಗ್ರಹಗಳನ್ನು ಅನುಮತಿಸಲಾಗಿದೆ. ಮೆರವಣಿಗೆ ನಡೆಸಲು ಅನುಮತಿ ಇಲ್ಲ" ಎಂದು ಜಿಲ್ಲಾಧಿಕಾರಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.