ETV Bharat / bharat

ಶಾಂಘೈ ಸಭೆ... ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಮಾಸ್ಕೋ ಭೇಟಿ ​

ಸೆ. 4ರಂದು ನಡೆಯುವ ಶಾಂಘೈ ಸಹಕಾರ ಸಂಘಟನೆಯ ರಕ್ಷಣಾ ಸಚಿವರ ಸಭೆಯಲ್ಲಿ ರಾಜನಾಥ್​ ಸಿಂಗ್ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮೂರು ದಿನಗಳ ಭೇಟಿಗಾಗಿ ರಷ್ಯಾ ರಾಜಧಾನಿ ಮಾಸ್ಕೋಗೆ ತೆರಳಿದ್ದಾರೆ.

Rajnath Singh Russia visit
ರಾಜನಾಥ್​ ಸಿಂಗ್​ ರಷ್ಯಾ ಭೇಟಿ
author img

By

Published : Sep 2, 2020, 10:36 AM IST

ನವದೆಹಲಿ: ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮೂರು ದಿನಗಳ ಭೇಟಿಗಾಗಿ ರಷ್ಯಾ ರಾಜಧಾನಿ ಮಾಸ್ಕೋಗೆ ತೆರಳಿದ್ದಾರೆ. ಸೆ. 4ರಂದು ನಡೆಯುವ ಶಾಂಘೈ ಸಹಕಾರ ಸಂಘಟನೆಯ ರಕ್ಷಣಾ ಸಚಿವರ ಸಭೆಯಲ್ಲಿ ರಾಜನಾಥ್​ ಸಿಂಗ್ ಭಾಗವಹಿಸಲಿದ್ದಾರೆ. ಸಂಘಟನೆಯ ಎರಡು ಪ್ರಬಲ ರಾಷ್ಟ್ರಗಳಾದ ಭಾರತ ಮತ್ತು ಚೀನಾ ನಡುವೆ ಗಡಿ ವಿವಾದ ತೀವ್ರಗೊಳ್ಳುತ್ತಿರುವ ಈ ಸಮಯದಲ್ಲಿ ಶಾಂಘೈ ಸಭೆ ಭಾರೀ ಮಹತ್ವ ಪಡೆದಿದೆ.

ಎಸ್​ಸಿಒ ರಕ್ಷಣಾ ಸಚಿವರ ಸಭೆಗೂ ಮುನ್ನ ರಾಜನಾಥ್​ ಸಿಂಗ್ ರಷ್ಯಾ ರಕ್ಷಣಾ ಸಚಿವ ಸರ್ಗೈ ಶೊಯ್ಗು ಮತ್ತು ಅಲ್ಲಿನ ಸೇನೆಯ ಉನ್ನತಾಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಶಸ್ತ್ರಾಸ್ತ್ರ ಖರೀದಿ ಯೋಜನೆಯ ಅನುಷ್ಠಾನವನ್ನು ತ್ವರಿತಗೊಳಿಸುವ ಉದ್ದೇಶವನ್ನು ರಾಜನಾಥ್​ ಸಿಂಗ್​ ಹೊಂದಿದ್ದು, ಹೀಗಾಗಿ ಸೇನೆಯ ಉನ್ನತಾಧಿಕಾರಿಗಳನ್ನೂ ಭೇಟಿಯಾಗಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೆ. 5ರಂದು ರಾಜನಾಥ್​​ ಸಿಂಗ್​ ಮಾಸ್ಕೋದಿಂದ ಸ್ವದೇಶಕ್ಕೆ ಆಗಮಿಸಲಿದ್ದಾರೆ.

ಚೀನಾದ ರಕ್ಷಣಾ ಸಚಿವ ಜನರಲ್​ ವಿ. ಫೆಂಗೆ ಕೂಡ ಎಸ್​ಸಿಒ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ರಷ್ಯಾದಲ್ಲಿ ನಡೆಯಲಿರುವ ಬಹುರಾಷ್ಟ್ರಗಳ ಸಮರಾಭ್ಯಾಸದಿಂದ ಭಾರತ ಹಿಂದೆ ಸರಿದ ಕೆಲವೇ ದಿನಗಳ ನಂತರ ರಕ್ಷಣಾ ಸಚಿವರ ಸಭೆ ನಡೆಯುತ್ತಿದೆ. ಈ ಸಮರಾಭ್ಯಾಸದಲ್ಲಿ ಚೀನಾ ಮತ್ತು ಪಾಕಿಸ್ತಾದ ಸೇನೆಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ರಾಜನಾಥ್​ ಸಿಂಗ್​ ಮತ್ತು ಚೀನಾ ರಕ್ಷಣಾ ಸಚಿವ ವಿ ಫೆಂಗೆ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆ ಇಲ್ಲ. ಇಂತಹ ಯಾವುದೇ ಪ್ಲಾನ್ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ಲಡಾಖ್​​ನ ಪಾಂಗಾಂಗ್​ ಸರೋವರದ ಬಳಿ 'ಯಥಾಸ್ಥಿತಿ' ಬದಲಾಯಿಸುವ ಚೀನಾ ತಂತ್ರವನ್ನು ಭಾರತ ಮತ್ತೊಮ್ಮೆ ವಿಫಲಗೊಳಿಸಿತ್ತು. ಭಾರತದ ರಕ್ಷಣಾತ್ಮಕ ಮತ್ತು ಸಮಯೋಚಿತ ಕ್ರಮದಿಂದಾಗಿ ಚೀನಾಗೆ ಬುದ್ಧಿ ಕಲಿಸಿತ್ತು. ಹೀಗೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯಿರುವ ಸಮಯದಲ್ಲೇ ಎಸ್​ಸಿಒ ಸಭೆ ನಡೆಯುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ.

ಮೇ 5ರಂದು ಆರಂಭವಾದ ಭಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟನ್ನು ಎರಡೂ ದೇಶಗಳು ಮಾತುಕತೆ ಮೂಲಕ ಬಗೆಹರಿಸಬೇಕು ಎಂದು ರಷ್ಯಾ ಈಗಾಗಲೇ ಹೇಳಿದೆ. ಪ್ರಾದೇಶಿಕ ಸ್ಥಿರತೆಗಾಗಿ ಎರಡೂ ರಾಷ್ಟ್ರಗಳು 'ರಚನಾತ್ಮಕ' ಸಂಬಂಧವನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕ ಎಂದು ರಷ್ಯಾ ಸಲಹೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.