ETV Bharat / bharat

ಸ್ಪೀಕರ್ ಆದೇಶ ಎತ್ತಿ ಹಿಡಿದ ಸುಪ್ರೀಂಕೋರ್ಟ್: ಉಪಚುನಾವಣೆ ಸ್ಪರ್ಧೆಗೆ ಅನರ್ಹರಿಗೆ ಅವಕಾಶ

author img

By

Published : Nov 13, 2019, 12:09 PM IST

ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನೇ ನ್ಯಾಯಾಲಯ ಎತ್ತಿ ಹಿಡಿದಿದೆ. ಆದರೆ, ಸದನದ ಸಂಪೂರ್ಣ ಕಾಲಾವಧಿವರೆಗೆ ಅನರ್ಹಗೊಳಿಸುವ ಹಕ್ಕು ಸ್ಪೀಕರ್ ಅವರಿ​ಗಿಲ್ಲ. ಹೀಗಾಗಿ 2023ರವರೆಗೆ ಅವರ ಅನರ್ಹತೆಗೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಉಪಚುನಾವಣೆಗೆ ಅನರ್ಹ ಶಾಸಕರು ಸ್ಪರ್ಧಿಸಬಹುದು ಎಂದು ದೇಶದ ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಉಪಚುನಾವಣೆ ಸ್ಪರ್ಧೆಗೆ ಅನರ್ಹರಿಗೆ ಅವಕಾಶ

ನವದೆಹಲಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡಿದ್ದ 17 ಶಾಸಕರ ಕುರಿತಾದ ಮಹತ್ವದ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯ ಪ್ರಕಟಿಸಿದೆ. ಸ್ಪೀಕರ್ ರಮೇಶ್​ ಕುಮಾರ್​ ಆದೇಶವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್, ಅನರ್ಹರಿಗೆ ಚುನಾವಣೆ ಸ್ಪರ್ಧೆಗೆ ಅವಕಾಶ ಕಲ್ಪಿಸಿ ಸಮತೋಲನದ ತೀರ್ಪು ಕೊಟ್ಟಿದೆ.

ನ್ಯಾಯಮೂರ್ತಿ ಎನ್. ವಿ. ರಮಣ, ನ್ಯಾ. ಸಂಜೀವ್​ ಖನ್ನಾ ಹಾಗೂ ನ್ಯಾ. ಕೃಷ್ಣ ಮುರಾರಿಯವರನ್ನೊಳಗೊಂಡ ತ್ರಿಸದಸ್ಯ ಪೀಠ ತೀರ್ಪು ಪ್ರಕಟಿಸಿತು. ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನು ನ್ಯಾಯಾಲಯ ಎತ್ತಿಹಿಡಿಯಿತು. ಅನರ್ಹ ಶಾಸಕರು ಸುಪ್ರೀಂ ಮೆಟ್ಟಿಲೇರಿರುವ ಕುರಿತು ಅಸಮಾಧಾನ ಹೊರಹಾಕಿದ ನ್ಯಾಯಾಲಯ, ​ನೀವು ಸ್ಪೀಕರ್​ ಆದೇಶವನ್ನು ಪ್ರಶ್ನಿಸುವ ಮೊದಲು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಬಹುದಿತ್ತು ಎಂದಿತು.

ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಿದ ಕೋರ್ಟ್​:

ಅರ್ಜಿದಾರರು ರಾಜೀನಾಮೆಗೆ ಬಯಸಿದ್ದಾರೆಂಬುದು ಸ್ಪಷ್ಟವಾದ ಬಳಿಕ ಸ್ಪೀಕರ್​ ರಾಜೀನಾಮೆ ಅಂಗೀಕರಿಸಬಹುದು. ಆದರೆ, ಸದನದ ಸಂಪೂರ್ಣ ಕಾಲಾವಧಿವರೆಗೆ ಅನರ್ಹಗೊಳಿಸುವ ಹಕ್ಕು ಸ್ಪೀಕರ್​ಗಿಲ್ಲ. ಹೀಗಾಗಿ 2023ರವರೆಗೆ ಅವರ ಅನರ್ಹತೆಗೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಉಪಚುನಾವಣೆಗೆ ಅನರ್ಹ ಶಾಸಕರು ಸ್ಪರ್ಧಿಸಬಹುದು ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಹೀಗಾಗಿ ಒಟ್ಟು 17 ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಕಿ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರ ಹೊರತುಪಡಿಸಿ ಉಳಿದ 15 ಕ್ಷೇತ್ರಗಳಿಗೆ ಡಿಸೆಂಬರ್​ 5ರಂದು ಉಪಚುನಾವಣೆ ನಡೆಯಲಿದೆ. ಹೀಗಾಗಿ ಈ ಅನರ್ಹ ಶಾಸಕರು ನವೆಂಬರ್​ 11 ರಿಂದ 18 ರೊಳಗೆ ನಾಮಪತ್ರ ಸಲ್ಲಿಸಿ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಬಳಿಕ ಉಪಚುನಾವಣೆಯಲ್ಲಿ ಗೆದ್ದರೆ ಸಚಿವರೂ ಆಗಬಹುದು ಎಂದು ಕೋರ್ಟ್​ ಹೇಳಿದೆ.

ಅನರ್ಹ ಶಾಸಕರ ಹಿನ್ನೆಲೆ:

ಕಾಂಗ್ರೆಸ್​ನ 13, ಜೆಡಿಎಸ್​ನ 3 ಹಾಗೂ ಓರ್ವ ಪಕ್ಷೇತರ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಂಖ್ಯಾಬಲದ ಕೊರತೆಯಿಂದ ಅನಿವಾರ್ಯವಾಗಿ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕುಮಾರಸ್ವಾಮಿ ನಾಯಕತ್ವದ ಮೈತ್ರಿ ಸರ್ಕಾರ ಪತನಗೊಂಡಿತ್ತು. ಬಳಿಕ ಬಿ.ಎಸ್.​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಿತು. ಈ ಎಲ್ಲಾ ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದಾರೆ ಎಂದು ಅಂದಿನ ವಿಧಾನಸಭಾಧ್ಯಕ್ಷ ಕೆ.ಆರ್​. ರಮೇಶ್​ ಕುಮಾರ್​ ಈ ಎಲ್ಲಾ ಶಾಸಕರನ್ನೂ ಅನರ್ಹಗೊಳಿಸಿದ್ದರು. ಆದರೆ ತಮ್ಮ ಅನರ್ಹತೆ ಪ್ರಶ್ನಿಸಿ ಈ ಎಲ್ಲಾ ಅನರ್ಹ ಶಾಸಕರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಸ್​.ರಮಣ ನೇತೃತ್ವದ ತ್ರಿಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸಿತ್ತು.

ಅನರ್ಹಗೊಂಡಿದ್ದ ಶಾಸಕರು ಯಾರ್ಯಾರು:

  • ಭೈರತಿ ಬಸವರಾಜ್​ -ಕೆ.ಆರ್.​ ಪುರಂ
  • ಶ್ರೀಮಂತ ಪಾಟೀಲ್​​ -ಕಾಗವಾಡ
  • ಡಾ. ಕೆ ಸುಧಾಕರ್​ -ಚಿಕ್ಕಬಳ್ಳಾಪುರ
  • ಎಸ್. ಟಿ. ಸೋಮಶೇಖರ್ ​- ಯಶವಂತಪುರ
  • ಮಹೇಶ್​ ಕುಮಟಳ್ಳಿ -ಅಥಣಿ
  • ಆನಂದ್​ ಸಿಂಗ್ ​-ವಿಜಯನಗರ
  • ಆರ್​ ಶಂಕರ್ ​-ರಾಣೆಬೆನ್ನೂರು
  • ಬಿ.ಸಿ. ಪಾಟೇಲ್ ​-ಹಿರೇಕೆರೂರು
  • ಹೆಚ್​ ವಿಶ್ವನಾಥ್​ -ಹುಣಸೂರು
  • ಕೆ. ಗೋಪಾಲಯ್ಯ -ಮಹಾಲಕ್ಷ್ಮಿ ಲೇಔಟ್​
  • ಎಂ.ಟಿ.ಬಿ. ನಾಗರಾಜ್​ -ಹೊಸಕೋಟೆ
  • ರೋಷಣ್​ ಬೇಗ್ ​-ಶಿವಾಜಿನಗರ
  • ರಮೇಶ್​ ಜಾರಕಿಹೊಳಿ -ಗೋಕಾಕ್​
  • ಶಿವರಾಮ್​ ಹೆಬ್ಬಾರ್ ​-ಯಲ್ಲಾಪುರ
  • ನಾರಾಯಣ ಗೌಡ -ಕೆ ಆರ್​ ಪೇಟೆ
  • ಪ್ರತಾಪ್​ ಗೌಡ ಪಾಟೀಲ್​ -ಮಸ್ಕಿ
  • ಮುನಿರತ್ನ -ಆರ್​ ಆರ್​ ನಗರ

Intro:Body:

rebel mla

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.