ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧಿತರಾಗಿರುವ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ನ್ಯಾಯಾಂಗ ಬಂಧನ ಇಂದಿಗೆ ಮುಕ್ತಾಯವಾಗಲಿದ್ದು, ಸಿಬಿಐ ಚಿದಂಬರಂ ಅವರನ್ನು ಸುಪ್ರೀಂ ಕೋರ್ಟ್ ಮುಂದೆ ಹಾಜರುಪಡಿಸಲಿದೆ.
ಶುಕ್ರವಾರದ ವಿಚಾರಣೆ ವೇಳೆ ಹಗರಣದಲ್ಲಿ ತಾನು ಭಾಗಿಯಾಗಿರುವ ಬಗ್ಗೆ ಸೂಕ್ತ ದಾಖಲೆ ಒದಗಿಸುವಲ್ಲಿ ಸಿಬಿಐ ವಿಫಲವಾಗಿದೆ ಎಂದು ಚಿದಂಬರಂ ಕೋರ್ಟ್ ಮುಂದೆ ಹೇಳಿದ್ದರು.
ಏನಿದು ಐಎನ್ಎಕ್ಸ್ ಮೀಡಿಯಾ ಪ್ರಕರಣ? ಇಲ್ಲಿದೆ ಟೈಮ್ಲೈನ್
ಚಿದಂಬರಂ ಅವರನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದ ಸಿಬಿಐ, ಮಾಜಿ ವಿತ್ತ ಸಚಿವರನ್ನು ಐದು ದಿನಗಳ ಕಾಲ ತನ್ನ ಕಸ್ಟಡಿಗೆ ಪಡೆದಿತ್ತು. ಇದಾದ ಬಳಿಕ ಆಗಸ್ಟ್ 26ರಂದು ಸಿಬಿಐ ನ್ಯಾಯಾಂಗ ಬಂಧನಕ್ಕೆ ಮನವಿ ಮಾಡಿದಾಗ ಮತ್ತೆ ಐದು ದಿನಗಳ ಕಾಲ ಕೋರ್ಟ್ ಕಸ್ಟಡಿ ಅವಧಿಯನ್ನು ವಿಸ್ತರಿಸಿತ್ತು.
ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಶಾಮೀಲಾದ ಆರೋಪದಲ್ಲಿ ಮಾಜಿ ಕೇಂದ್ರ ಸಚಿವರನ್ನು ಆಗಸ್ಟ್ 21ರ ರಾತ್ರಿ ಸಿಬಿಐ ಬಂಧಿಸಿತ್ತು.