ETV Bharat / bharat

ಅನರ್ಹರ ಕುರಿತ ಸ್ಪೀಕರ್ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್​! ಚುನಾವಣೆ ಸ್ಪರ್ಧೆಗೆ ಅವಕಾಶ

author img

By

Published : Nov 13, 2019, 10:08 AM IST

Updated : Nov 13, 2019, 12:42 PM IST

ಚುನಾವಣೆ ಸ್ಪರ್ಧೆಗೆ ಅವಕಾಶ

12:30 November 13

ಉಪಚುನಾವಣೆಯಲ್ಲಿ ಸ್ಪರ್ಧಿಸುವೆ.... ಹೆಚ್​. ವಿಶ್ವನಾಥ್

ಹೆಚ್​. ವಿಶ್ವನಾಥ್

ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಅಲ್ಲದೆ ಈ ಬಾರಿಯ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹುಣಸೂರು ಕ್ಷೇತ್ರದ ಅನರ್ಹ ಶಾಸಕ ಹೆಚ್​. ವಿಶ್ವನಾಥ್​ ತಿಳಿಸಿದರು.  ಮುಂದಿನ ಚುನಾವಣೆಯಲ್ಲಿ ಜನ ನಮ್ಮನ್ನು ಸ್ವೀಕರಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

12:28 November 13

ರಾಷ್ಟ್ರದ ಸಾಂವಿಧಾನಿಕ ನೈತಿಕತೆಯನ್ನು ಎತ್ತಿಹಿಡಿಯಬೇಕಾಗಿದೆ: ಅಶ್ವನಿ ಕುಮಾರ್

ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್

ಸುಪ್ರೀಂ ಏನು ತೀರ್ಪು ನೀಡುತ್ತದೋ ಅದು ಅಂತಿಮ. ಈ ಬಗ್ಗೆ ಹೆಚ್ಚು ಚರ್ಚೆ ಅನಗತ್ಯ. ಉನ್ನತ ನ್ಯಾಯಾಲಯ ನೀಡಿದ ತೀರ್ಪನ್ನು ಗೌರವಿಸಬೇಕು. ಸುಪ್ರೀಂ ಕೋರ್ಟ್ ಪಕ್ಷಾಂತರ ವಿರೋಧಿ ಕಾನೂನಿನ ಪ್ರಕಾರ ಮಾತನಾಡಿದೆ. ನಮ್ಮದು ಜನಪ್ರಿಯ ಪ್ರಜಾಪ್ರಭುತ್ವ ಮಾತ್ರವಲ್ಲದೆ ಸಾಂವಿಧಾನಿಕ ಪ್ರಜಾಪ್ರಭುತ್ವವೂ ಆಗಿರುವುದರಿಂದ ರಾಷ್ಟ್ರದ ಸಾಂವಿಧಾನಿಕ ನೈತಿಕತೆಯನ್ನು ಎತ್ತಿಹಿಡಿಯಬೇಕು. ಈ ತೀರ್ಪನ್ನು  ನಾನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದು ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್​ ಹೇಳಿದ್ದಾರೆ.

10:49 November 13

ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದ ನ್ಯಾಯಾಲಯ

  • 2023ರವರೆಗೆ ಅವರ ಅನರ್ಹತೆಗೆ ಅವಕಾಶವಿಲ್ಲ
  • ಉಪಚುನಾವಣೆಗೆ ಸ್ಪರ್ಧಿಸಬಹುದು ಎಂದ ನ್ಯಾಯಾಲಯ
  • ನ್ಯಾಯಮೂರ್ತಿ. ಎನ್​ ವಿ ರಮಣ, ಸಂಜೀವ್​ ಖನ್ನಾ ಹಾಗೂ ಕೃಷ್ಣ ಮುರಾರಿ ಇರುವ ತ್ರಿಸದಸ್ಯ ಪೀಠದಿಂದ ತೀರ್ಪು ಪ್ರಕಟ

10:44 November 13

ಸ್ಪೀಕರ್ ಆದೇಶವನ್ನು ಎತ್ತಿಹಿಡಿದ ನ್ಯಾಯಾಲಯ

  • ಅರ್ಜಿದಾರರು ರಾಜೀನಾಮೆಗೆ ಬಯಸಿದ್ದಾರೆಂಬುದು ಸ್ಪಷ್ಟವಾದ ಬಳಿಕ ಸ್ಪೀಕರ್​ ರಾಜೀನಾಮೆ ಅಂಗೀಕರಿಸಬಹುದು
  • ಸ್ಪೀಕರ್ ಆದೇಶವನ್ನು ಎತ್ತಿಹಿಡಿದ ನ್ಯಾಯಾಲಯ
  • ಆದರೆ ಸದನದ ಸಂಪೂರ್ಣ ಕಾಲಾವಧಿವರೆಗೆ ಅನರ್ಹಗೊಳಿಸುವ ಹಕ್ಕು ಸ್ಪೀಕರ್​ಗಿಲ್ಲ
  • ಚುನಾವಣೆ ಸ್ಪರ್ಧೆಗೆ ಅವಕಾಶ ನೀಡಿದ ಕೋರ್ಟ್​

10:43 November 13

ಕೋರ್ಟ್​ ಅಸಮಾಧಾನ

  • ಸ್ಪೀಕರ್​ ಆದೇಶವನ್ನು ಪ್ರಶ್ನಿಸುವ ಶಾಸಕರು ಮೊದಲು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಬಹುದಿತ್ತು.

10:39 November 13

  • ಅರ್ಜಿದಾರರು ನ್ಯಾಯಾಲಯ ಮೆಟ್ಟಿಲೇರಿರುವ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಪೀಠ

10:38 November 13

ತೀರ್ಪು ಓದುತ್ತಿರುವ ನ್ಯಾಯಾಧೀಶರು

  • ತೀರ್ಪು ಓದುತ್ತಿರುವ ನ್ಯಾಯಾಧೀಶರು

09:56 November 13

ಏನಾಗಲಿದೆ ಅನರ್ಹರ ಹಣೆಬರಹ?

ನವದೆಹಲಿ: ರಾಜ್ಯ ರಾಜಕಾರಣಕ್ಕೆ ಮಹತ್ವದ ತಿರುವು ನೀಡಲಿರುವ ಅನರ್ಹ ಶಾಸಕರ ಭವಿಷ್ಯ ಇಂದು ಪ್ರಕಟವಾಗಲಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡಿದ್ದ 17 ಶಾಸಕರ ಕುರಿತಾದ ಮಹತ್ವದ ತೀರ್ಪನ್ನು ಇಂದು ಸರ್ವೋಚ್ಛ ನ್ಯಾಯಾಲಯ ಪ್ರಕಟಿಸಲಿದೆ. 

ಕಾಂಗ್ರೆಸ್​ನ 13, ಜೆಡಿಎಸ್​ನ 3 ಹಾಗೂ ಓರ್ವ ಪಕ್ಷೇತರ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಂಖ್ಯಾಬಲದ ಕೊರತೆಯಿಂದ ಅನಿವಾರ್ಯವಾಗಿ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಕುಮಾರಸ್ವಾಮಿ ನಾಯಕತ್ವದ ಮೈತ್ರಿ ಸರ್ಕಾರ ಪತನಗೊಂಡಿತ್ತು. ಬಳಿಕ ಬಿ.ಎಸ್.​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಿತು. 

ಈ ಎಲ್ಲಾ ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದಾರೆ ಎಂದು ಅಂದಿನ ವಿಧಾನ ಸಭಾ ಸ್ಪೀಕರ್​ ಕೆ.ಆರ್​. ರಮೇಶ್​ ಕುಮಾರ್​ ಈ ಎಲ್ಲಾ ಶಾಸಕರನ್ನೂ ಅನರ್ಹಗೊಳಿಸಿದ್ದರು. ಆದರೆ ತಮ್ಮ ಅನರ್ಹತೆ ಪ್ರಶ್ನಿಸಿ ಈ ಎಲ್ಲಾ ಅನರ್ಹ ಶಾಸಕರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಸ್​.ರಮಣ ನೇತೃತ್ವದ ತ್ರಿಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸಿತ್ತು.

Intro:Body:

SC to deliver verdict on pleas of disqualified Karnataka MLAs today

Conclusion:
Last Updated : Nov 13, 2019, 12:42 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.