ETV Bharat / bharat

ಗುರು ಗ್ರಂಥ ಸಾಹೀಬ್​ ಗ್ರಂಥಕ್ಕೆ ಅಗೌರವ ತೋರಿದ ಪ್ರಕರಣ : ಆರೋಪಿಗಳ ಅರ್ಜಿ ವಜಾಗೊಳಿಸಿದ 'ಸುಪ್ರೀಂ'

ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠವು 2015 ರ ಬತಿಂಡಾ ಗುರು ಗ್ರಂಥ ಸಾಹೀಬ್ ಗ್ರಂಥಕ್ಕೆ ಅಗೌರವ ತೋರಿದ ಪ್ರಕರಣದ ವಿಚಾರಣೆಯನ್ನು ಪಂಜಾಬ್‌ನಿಂದ ವರ್ಗಾಯಿಸಲು ನಿರಾಕರಿಸಿದೆ. ಆರೋಪಿ ಗುರು ಗ್ರಂಥ ಸಾಹೀಬ್​​ನನ್ನು ಹರಿದು ಕಾಗದಗಳನ್ನು ನೆಲಕ್ಕೆ ಎಸೆದಿದ್ದ..

ಸುಪ್ರೀಂಕೋರ್ಟ್​
ಸುಪ್ರೀಂಕೋರ್ಟ್​
author img

By

Published : Nov 25, 2020, 5:08 PM IST

ನವದೆಹಲಿ : ಬತಿಂಡಾದಲ್ಲಿ 2015ರಲ್ಲಿ ಗುರು ಗ್ರಂಥ ಸಾಹೀಬ್​ ಗ್ರಂಥಕ್ಕೆ ಅಗೌರವ ತೋರಿದ ಪ್ರಕರಣಕ್ಕೆ ಸಂಬಂಧಿಸಿ, ಇದರ ವಿಚಾರಣೆಯನ್ನು ಪಂಜಾಬ್​ನಿಂದ ವರ್ಗಾಯಿಸಲು ಅನುಮತಿ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ಬುಧವಾರ ವಜಾಗೊಳಿಸಿದೆ.

ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠವು ವಿಚಾರಣೆಯನ್ನು ಪಂಜಾಬ್‌ನಿಂದ ವರ್ಗಾಯಿಸಲು ನಿರಾಕರಿಸಿದೆ. ಅಲ್ಲದೇ ಈ ವಿಚಾರಣೆಯನ್ನು ಉಚಿತ ಮತ್ತು ನ್ಯಾಯಯುತವಾಗಿ ನಡೆಸುವಂತೆ ಟ್ರಯಲ್​ ಕೋರ್ಟ್​ಗೆ ಸೂಚಿಸಿದೆ.

ಡೇರಾ ಸಚ್ಚಾ ಸೌಧ ಸದಸ್ಯರಾದ ಆರು ಆರೋಪಿಗಳು ಈ ವಿಚಾರಣೆಯನ್ನು ವರ್ಗಾವಣೆ ಮಾಡುವಂತೆ ಕೋರಿ ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅವರು ಪಂಜಾಬ್‌ನಲ್ಲಿ ನ್ಯಾಯಯುತ ವಿಚಾರಣೆ ನಡೆಯುವುದಿಲ್ಲ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು.

ಬತಿಂಡಾದ ಗುರುಸರ್ ಗ್ರಾಮದಲ್ಲಿ ಗುರು ಗ್ರಂಥ ಸಾಹೀಬ್​​ ಗ್ರಂಥಕ್ಕೆ 2015ರ ಅಕ್ಟೋಬರ್​​ನಲ್ಲಿ ಅಗೌರವ ತೋರಿದಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ಆರೋಪಿ ಗುರು ಗ್ರಂಥ ಸಾಹೀಬ್​ನ ಪೇಪರ್‌ಗಳನ್ನು ಹರಿದು ನೆಲದ ಮೇಲೆ ಎಸೆದಿದ್ದ.

ಘಟನೆಗೆ ಸಂಬಂಧಿಸಿದಂತೆ 295ಎ ಮತ್ತು ಐಪಿಸಿಯ 120ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಬತಿಂಡಾದ ದಯಾಲ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.