ನವದೆಹಲಿ: ಒಟ್ಟು ಸಂಪತ್ತಿನ ಮರು ಹೊಂದಾಣಿಕೆ (ಎಜಿಆರ್) ಪ್ರಕರಣ ಸಂಬಂಧ ಟೆಲಿಕಾಂ ಕಂಪನಿಗಳು ಸಲ್ಲಿಸಿದ್ದ, ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಭಾರತಿ ಏರ್‌ಟೆಲ್, ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ. ಕಳೆದ ವರ್ಷ ನ್ಯಾಯಾಲಯ ನೀಡಿದ ಆದೇಶದಂತೆ ಈ ಕಂಪನಿಗಳು ಜ. 23 ರೊಳಗೆ ಎಜಿಆರ್ ಬಾಕಿಗಳನ್ನು ದೂರಸಂಪರ್ಕ ಇಲಾಖೆಗೆ ಪಾವತಿಸಬೇಕಾಗುತ್ತದೆ.
ಕಳೆದ ವರ್ಷವೇ ಟೆಲಿಕಾಂ ಕಂಪನಿಗಳು ಎಜಿಆರ್ ಬಗ್ಗೆ ಕೇಂದ್ರದ ನಡೆಯನ್ನು ಪ್ರಶ್ನಿಸಿ, ಕೋರ್ಟ್ಗೆ ಹೋಗಿದ್ದವು. ಅಂದು ಕೂಡ ಕೋರ್ಟ್ ಮನವಿಯನ್ನು ತಿರಸ್ಕರಿಸಿ, ಕಂಪನಿಗಳಾದ ವೊಡಾಫೋನ್ , ಐಡಿಯಾ, ಭಾರ್ತಿ ಏರ್ಟೆಲ್ ಮತ್ತು ಇತರ ಕಂಪನಿಗಳಿಗೆ ಜನವರಿ 2020 ರ ಒಳಗೆ ಕೇಂದ್ರಕ್ಕೆ 90,000 ಕೋಟಿ ರೂ. ಪಾವತಿಸುವಂತೆ ಸೂಚಿಸಿತ್ತು.