ನವದೆಹಲಿ: ದಶಕಗಳಷ್ಟು ಹಳೆಯದಾದ ರಾಮ ಜನ್ಮಭೂಮಿ ಹಾಗೂ ಬಾಬರಿ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಲಿಖಿತ ದಾಖಲೆಗಳನ್ನು ಸಲ್ಲಿಸಲು ಸುಪ್ರೀಂ ಕೋರ್ಟ್ ಸೋಮವಾರ ಮುಸ್ಲಿಂ ಪಕ್ಷಗಳಿಗೆ ಅನುಮತಿ ನೀಡಿದೆ.
ಉತ್ತರ ಪ್ರದೇಶದ ಸುನ್ನಿ ವಕ್ಫ್ ಮಂಡಳಿ ಸೇರಿದಂತೆ ಇತರ ಮುಸ್ಲಿಂ ಪಕ್ಷಗಳಿಗೆ ಸುಪ್ರೀಂ ಅನುಮತಿ ನೀಡಿದೆ. ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ನೇತೃತ್ವದ ತ್ರಿಸದಸ್ಯ ಪೀಠ, ಮುಸ್ಲಿಂ ಪಕ್ಷಗಳ ಪರ ವಕೀಲರಿಗೆ ಈ ಸಲಹೆ ನೀಡಿದೆ.
ಲಿಖಿತ ಟಿಪ್ಪಣಿಯನ್ನು ಮೊಹರು ಮಾಡಿದ ಕವರ್‌ನಲ್ಲಿ ಸಲ್ಲಿಸಲು ವಿವಿಧ ಪಕ್ಷಗಳು ಮತ್ತು ಸುಪ್ರೀಂಕೋರ್ಟ್, ನೋಂದಣಿಗೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಮುಸ್ಲಿಂ ಪಕ್ಷಗಳ ಪರ ವಕೀಲರು ತಿಳಿಸಿದ್ದಾರೆ.
ದಾಖಲೆಗಳನ್ನು ಗೌಪ್ಯವಾಗಿಡುವ ಮುಸ್ಲಿಂ ಪಕ್ಷಗಳ ಪರ ವಕೀಲರ ವಾದಕ್ಕೆ, ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ ಮತ್ತು ಎಸ್ ಎ ನಜೀರ್ ಅವರನ್ನೊಳಗೊಂಡ ನ್ಯಾಯಪೀಠ, ಮೊಹರು ಮಾಡಲಾದ ಕವರ್‌ನಲ್ಲಿ ಸಲ್ಲಿಸಲಾದ ಲಿಖಿತ ಟಿಪ್ಪಣಿಯ ವಿಷಯಗಳು ಈಗಾಗಲೇ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ತಿಳಿಸಿದರು.