ಮುಂಬೈ: ಮಹಾರಾಷ್ಟ್ರದಿಂದ ರಾಜ್ಯಸಭಾ ಸದಸ್ಯರಾಗಿರುವ ಸಂಜಯ್ ರಾವತ್ ಅವರನ್ನು ಶಿವಸೇನೆ, ಪಕ್ಷದ ಮುಖ್ಯ ವಕ್ತಾರರನ್ನಾಗಿ ಇಂದು ನೇಮಕ ಮಾಡಿದೆ. ರಾವತ್ ಈಗಾಗಲೇ ಶಿಸವಸೇನೆ ಮುಖವಾಣಿ ಸಾಮ್ನಾ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಸಂಬಂಧ ಹರಿತವಾದ ಹೇಳಿಕೆಗಳ ಮೂಲಕ ನಟಿ ಕಂಗನಾ ರನೌತ್ಗೆ ಸಂಜಯ್ ರಾವತ್ ತಿರುಗೇಟು ನೀಡಿದ್ದಾರೆ. ಕಂಗನಾ ಮುಂಬೈಯನ್ನು ಪಾಕ್ ಅಕ್ರಮಿತ ಕಾಶ್ಮೀರಕ್ಕೆ ಹೋಲಿಕೆ ಮಾಡಿದ್ದರು. ಈ ಹೇಳಿಕೆ ಹೊರ ಬೀಳುತ್ತಿದ್ದಂತೆ ಬಾಲಿವುಟ್ ನಟಿಯ ವಿರುದ್ಧ ರಾವತ್ ಗರಂ ಆಗಿದ್ದರು.
ಲೋಕಸಭಾ ಸದಸ್ಯರಾದ ಅರವಿಂದ್ ಸಾವಂತ್, ಧೈರ್ಯಶಿಲ್ ಮಾನೆ, ರಾಜ್ಯಸಭಾ ಸದಸ್ಯರಾದ ಪ್ರಿಯಾಂಕಾ ಚತುರ್ವೇದಿ, ಮಹಾರಾಷ್ಟ್ರ ಸಚಿವ ಉದಯ್ ಸಾಮಂತ್, ಅನಿಲ್ ಪರಬ್, ಗುಲಾಬ್‌ರಾವ್ ಪಾಟೀಲ್, ಶಾಸಕರಾದ ಸುನಿಲ್ ಪ್ರಭು, ಪ್ರತಾಪ್ ಸರ್ನಾಯ್ಕ್, ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಮತ್ತು ಹಿರಿಯ ನಾಯಕ ನೀಲಂ ಗೊರ್ಕೆ ಅವರನ್ನು ಪಕ್ಷದ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.