ಗುರುಗ್ರಾಮ್(ಹರಿಯಾಣ): ದೇಶಾದ್ಯಂತ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದ್ದು, ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೆಲವು ನಿಯಮ ಮತ್ತು ಷರತ್ತುಗಳೊಂದಿಗೆ ಸಲೂನ್‌ಗಳುನ್ನು ತೆರೆಯಲು ಅನುಮತಿ ನೀಡಲಾಗಿದೆ.
ಸುರಕ್ಷತೆಯ ಕಾರಣದಿಂದಾಗಿ ಸಲೂನ್ಗಳಿಗೆ ತೆರಳಲು ಜನರು ಹಿಂಜರಿಯುತ್ತಿದ್ದಾರೆ. ಇಂತಹ ಸಮಯದಲ್ಲಿ ಹರಿಯಾಣದ ಗುರುಗ್ರಾಮ್ ಜಿಲ್ಲೆಯ ಸೆಕ್ಟರ್-15ರಲ್ಲಿರುವ ಸಲೂನ್‌ನ ನೌಕರರು ವೈಯಕ್ತಿಕ ಸುರಕ್ಷತಾ ಸಾಧನ ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ.
ಸಲೂನ್‌ನ ಎಲ್ಲಾ ಉದ್ಯೋಗಿಗಳು ವೈಯಕ್ತಿಕ ಸಂರಕ್ಷಣಾ ಸಾಧನ ಧರಿಸಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಈ ಕಿಟ್‌ಗಳನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ವೈದ್ಯರು ಮಾತ್ರ ಬಳಸುತ್ತಿದ್ದರು. ಇದೀಗ ಕೊರೊನಾನಾ ಸೋಂಕಿನ ಮಧ್ಯೆ ಸಲೂನ್ ಕೆಲಸಗಾರರೂ ಪಿಪಿಇ ಮೊರೆ ಹೋಗಿದ್ದಾರೆ.
ನೌಕರರು ಮತ್ತು ಗ್ರಾಹಕರ ಸುರಕ್ಷತೆಯ ಕಾರಣದಿಂದ ಇಂತಹ ನಿರ್ಧಾರಕ್ಕೆ ಬರಲಾಗಿದೆ ಎಂದು ಸಲೂನ್ ಮಾಲೀಕರು ಹೇಳಿದ್ದಾರೆ. ಸಾಮಾಜಿಕ ಅಂತರ, ಬಳಸಿದ ವಸ್ತುಗಳ ವಿಲೇವಾರಿ ಸೇರಿದಂತೆ ಎಲ್ಲಾ ರೀತಿಯಲ್ಲೂ ಎಚ್ಚರಿಕೆ ವಹಿಸಲಾಗಿದೆ ಎಂದಿದ್ದಾರೆ. ಸಲೂನ್‌ನ ಈ ವ್ಯವಸ್ಥೆಯನ್ನು ಗ್ರಾಹಕರು ಮೆಚ್ಚಿಕೊಂಡಿದ್ದು, ಮಾಲೀಕರ ಕಾರ್ಯವನ್ನು ಶ್ಲಾಘಿಸಿದ್ದಾರೆ.