ಜೈಪುರ (ರಾಜಸ್ಥಾನ): ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ಎಂಜಿಎನ್‌ಆರ್‌ಇಜಿಎ) ಅಡಿಯಲ್ಲಿ ರಾಜ್ಯದ 1.13 ಕೋಟಿ ಕಾರ್ಮಿಕರಿಗೆ ಕೆಲಸದ ದಿನಗಳನ್ನು 200ಕ್ಕೆ ಏರಿಸಬೆಕೆಂದು ಒತ್ತಾಯಿಸಿ ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್‌ಗೆ ಪತ್ರ ಬರೆದಿದ್ದಾರೆ.
ಈ ಕಾಯ್ದೆಯ ಪ್ರಕಾರ ಪ್ರಸ್ತುತ ಪ್ರತಿ ಕುಟುಂಬಕ್ಕೆ 100 ದಿನಗಳವರೆಗೆ ಇರುವ ಉದ್ಯೋಗದ ದಿನಗಳನ್ನು 200 ದಿನಗಳವರೆಗೆ ಹೆಚ್ಚಿಸಬೇಕೆಂದು ಪೈಲಟ್ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ.
"ಲಾಕ್ ಡೌನ್ನಿಂದಾಗಿ ದಿನಗೂಲಿ ನೌಕರರು ಸಮಸ್ಯೆ ಅನುಭವಿಸುತ್ತಿದ್ದಾರೆ. ಆದ್ದರಿಂದ, 2020-21ರಲ್ಲಿ ಹಣಕಾಸಿನ ನೆರವು ನೀಡುವ ಸಲುವಾಗಿ, ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ನಿಗದಿಪಡಿಸಿದ 100 ದಿನಗಳ ಉದ್ಯೋಗವನ್ನು ಪ್ರತಿ ಕುಟುಂಬಕ್ಕೆ 200 ದಿನಗಳಿಗೆ ಹೆಚ್ಚಿಸಬೇಕು" ಎಂದು ಪೈಲಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.