ETV Bharat / bharat

ಹೆಚ್ಚುತ್ತಿರುವ ಜಾಗತಿಕ ಉಷ್ಣಾಂಶ: ಸಾವುಗಳಿಗೆ ಹವಾಮಾನ ಬದಲಾವಣೆ ಕಾರಣವೇ?

author img

By

Published : Dec 6, 2020, 2:53 PM IST

ಕಳೆದೆರಡು ದಶಕಗಳಲ್ಲಿ ಹವಾಮಾನ ವೈಪರೀತ್ಯದಿಂದ ಹೆಚ್ಚಿದ ಉಷ್ಣಾಂಶಕ್ಕೆ ಶೇ. 54ರಷ್ಟು ವಯಸ್ಸಾದವರು ಮೃತಪಟ್ಟಿದ್ದಾರೆ ಎಂದು ಯುಸಿಎಲ್ ಸಂಶೋಧಕರ ನೇತೃತ್ವದ ಹೊಸ ಅಂತಾರಾಷ್ಟ್ರೀಯ ವರದಿ ಮಾಹಿತಿ ನೀಡಿದೆ.

ಹವಾಮಾನ ಬದಲಾವಣೆ
ಹವಾಮಾನ ಬದಲಾವಣೆ

ದಿ ಲ್ಯಾನ್ಸೆಟ್​​ನಲ್ಲಿ ಪ್ರಕಟವಾದ ಲ್ಯಾನ್ಸೆಟ್ ಕೌಂಟ್​​ಡೌನ್​​ ಆನ್ ಹೆಲ್ತ್ ಆ್ಯಂಡ್ ಕ್ಲೈಮೇಟ್ ಚೇಂಜ್​​ನ 2020ರ ವರದಿಯು, 2019ರಲ್ಲಿ 65ಕ್ಕಿಂತ ಹೆಚ್ಚು ವಯಸ್ಸಾದ ಸುಮಾರು 2.9 ಬಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ. ಇದು ಹಿಂದಿನ ಅಂಕಿಅಂಶಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ವರದಿ ಕಳವಳ ವ್ಯಕ್ತಪಡಿಸಿದೆ. ಯಾವುದೇ ಶ್ರೀಮಂತ ಅಥವಾ ಬಡವ ದೇಶವಾಗಲಿ ಈ ಹವಾಮಾನ ಬದಲಾವಣೆ ಅಲ್ಲಿನ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಲೇಖಕರು ಹೇಳುತ್ತಾರೆ.

ಹವಾಮಾನ ವೈಪರೀತ್ಯ ಜಾಗತಿಕ ಆರೋಗ್ಯಕ್ಕೆ ಹೆಚ್ಚು ಅಪಾಯ ಉಂಟು ಮಾಡುತ್ತದೆ. ಯುಸಿಎಲ್‌ನ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್, ಎನರ್ಜಿ ಇನ್‌ಸ್ಟಿಟ್ಯೂಟ್, ಇನ್‌ಸ್ಟಿಟ್ಯೂಟ್ ಫಾರ್ ಸಸ್ಟೈನಬಲ್ ರಿಸೋರ್ಸಸ್, ಇನ್‌ಸ್ಟಿಟ್ಯೂಟ್ ಫಾರ್ ಎನ್ವಿರಾನ್ಮೆಂಟಲ್ ಡಿಸೈನ್ ಆ್ಯಂಡ್ ಎಂಜಿನಿಯರಿಂಗ್, ಭೌಗೋಳಿಕ ಇಲಾಖೆ ಮತ್ತು ಮಾನವ ಆರೋಗ್ಯ ಮತ್ತು ಕಾರ್ಯಕ್ಷಮತೆಯ ಸಂಸ್ಥೆ ಇವೆಲ್ಲವೂ ವರದಿಗೆ ಕೊಡುಗೆ ನೀಡಿವೆ. ಇವು ಸೇರಿದಂತೆ 35ಕ್ಕೂ ಹೆಚ್ಚು ಸಂಸ್ಥೆಗಳ ತಜ್ಞರು ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹಾಗೂ ವಿಶ್ವ ಹವಾಮಾನ ಸಂಸ್ಥೆ ಕೂಡ ಒಳಗೊಂಡಿವೆ.

ಕೋವಿಡ್​-19 ಸಾಂಕ್ರಾಮಿಕದ ಸಂದರ್ಭದಲ್ಲಿ ಇದು ವಯಸ್ಸಾದವರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅದರಲ್ಲೂ ಆಸ್ತಮಾ ಮತ್ತು ಮಧುಮೇಹ ಸೇರಿದಂತೆ ಇತರ ಕಾಯಿಲೆಯಿಂದ ಬಳಲುತ್ತಿರುವವರು ಹೆಚ್ಚಿನ ಅಪಾಯ ಎದುರಿಸುತ್ತಾರೆ.

ಕೈಗಾರಿಕಾಪೂರ್ವ ಕಾಲದಲ್ಲಿದ್ದ ಮಟ್ಟಕ್ಕಿಂತ ಹೆಚ್ಚಿನದಾದ 1.5 ಡಿಗ್ರಿ ಸೆಲ್ಸಿಯಸ್‍ಗಷ್ಟೇ ಸರಾಸರಿ ಜಾಗತಿಕ ಉಷ್ಣಾಂಶ ಏರಿಕೆಯನ್ನು ಕಾಪಾಡಿಕೊಳ್ಳಬೇಕು. ಕೇವಲ ಅರ್ಧ ಡಿಗ್ರಿ ಹೆಚ್ಚಾಗಿ 2 ಡಿಗ್ರಿ ಸೆಲ್ಸಿಯಸ್ ಆದರೂ ಪರಿಣಾಮ ಕೆಟ್ಟದಾಗಿರುತ್ತದೆ. ಇದ್ರ ಪರಿಣಾಮ ಅನೇಕ ಕೀಟಗಳು, ಸಸ್ಯಗಳು ಮಾಯವಾಗುತ್ತವೆ. ಉಷ್ಣಾಂಶ 3 ಡಿಗ್ರಿ ಸೆಲ್ಸಿಯಸ್‍ಗೆ ಏರಿಕೆ ಎಂದರೆ ಮಾಲ್ಡೀವ್ಸ್‌ನಂತಹ ದ್ವೀಪ ರಾಷ್ಟ್ರಗಳು ಮಾಯವಾಗುತ್ತವೆ. ಕೃಷಿ ಹಾಗೂ ಮೀನುಗಾರಿಕೆಯನ್ನು ಜೀವನೋಪಾಯಕ್ಕಾಗಿ ನೆಚ್ಚಿಕೊಂಡಿರುವಂತಹ ಹೆಚ್ಚಿನ ಜನಸಂಖ್ಯೆ ಹೊಂದಿದ ಭಾರತದಂತಹ ರಾಷ್ಟ್ರಗಳ ಮೇಲೆ ಹವಾಮಾನ ಬದಲಾವಣೆ ಬೀರುವ ಪರಿಣಾಮ ವ್ಯಾಪಕವಾದದ್ದು.

ಕಳೆದ ಐದು ವರ್ಷಗಳಲ್ಲಿ ಲ್ಯಾನ್ಸೆಟ್ ಕೌಂಟ್​​ಡೌನ್, ನಮ್ಮ ಆರೋಗ್ಯದ ಮೇಲೆ ಬದಲಾಗುತ್ತಿರುವ ಹವಾಮಾನ ಯಾವ ರೀತಿ ಪ್ರಭಾವವನ್ನು ಬೀರುತ್ತದೆ ಎಂಬುದನ್ನು ಅಳೆಯಲು ಜಾಗತಿಕವಾಗಿ 40ಕ್ಕೂ ಹೆಚ್ಚು ಸೂಚಕಗಳನ್ನು ಮೇಲ್ವಿಚಾರಣೆ ಮಾಡಿದೆ.

ಹವಾಮಾನ ಬದಲಾವಣೆ ಎಂಬುದು ಇಡೀ ಮನುಷ್ಯಕುಲಕ್ಕೇ ದೊಡ್ಡ ಬೆದರಿಕೆ. ಆದರೆ ಇದು ಬರೀ ಬೆದರಿಕೆಯಲ್ಲ. ತಕ್ಷಣದ ವಾಸ್ತವ ಎಂಬುದನ್ನು ಅರಿತುಕೊಳ್ಳಬೇಕು. ಇದರ ಪರಿಣಾಮಗಳು ವಿಶ್ವದಾದ್ಯಂತ ಪಸರಿಸಿಕೊಳ್ಳುತ್ತವೆ. ಹೀಗಾಗಿ ಭೂ ಬಿಸಿಯ ಕೆಟ್ಟ ಪರಿಣಾಮಗಳನ್ನು ನಾವು ನಿರ್ವಹಿಸಬಹುದಾದ ಮಟ್ಟದಲ್ಲಿ ಇಟ್ಟುಕೊಳ್ಳಬೇಕಾದರೆ, ನಮ್ಮ ಆರ್ಥಿಕತೆ ಹಾಗೂ ಜೀವನ ವಿಧಾನಗಳನ್ನು ಅಗತ್ಯವಾಗಿ ಬದಲಾಯಿಸಿಕೊಳ್ಳಬೇಕು.

ಹವಾಮಾನ ಬದಲಾವಣೆಯಿಂದ ಮುಂದೆ ಆಗುವ ಅನಾಹುತಗಳನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ಕೈಗಕೊಳ್ಳಬೇಕಾಗಿರುವುದು ಅಗತ್ಯವಾಗಿದೆ. ಇದರಿಂದ ಪ್ರವಾಹ, ಕ್ಷಾಮ, ಜ್ವಾಲಮುಖಿಯಂತಹ ಘಟನೆಗಳು ಸಂಭವಿಸಬಹುದು. ”ಪ್ಯಾರಿಸ್ ಒಪ್ಪಂದದ ಐದನೇ ವಾರ್ಷಿಕೋತ್ಸವದಂದು 2020 ರ ವರದಿಯನ್ನು ಪ್ರಕಟಿಸಲಾಯಿತು, ಈ ವೇಳೆ ಜಾಗತಿಕ ತಾಪಮಾನ ಏರಿಕೆಯನ್ನು 2 ಸೆಲ್ಸಿಯಸ್‌‌ಗಿಂತ ಕಡಿಮೆ ಮಾಡುವ ಪ್ರತಿಜ್ಞೆಯನ್ನು ಮಾಡಲಾಯಿತು. ಇದಕ್ಕಾಗಿ ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದದ ಮಹತ್ವಾಕಾಂಕ್ಷೆ ಗುರಿಗಳ ಈಡೇರಿಕೆಗೆ ಜಗತ್ತಿನ ರಾಷ್ಟ್ರಗಳು ಬದ್ಧವಾಗಬೇಕು. ಹವಾಮಾನ ವೈಪರೀತ್ಯ ಪರಿಣಾಮಗಳನ್ನು ತಗ್ಗಿಸುವ ಕ್ರಮಗಳಿಗಾಗಿ ದೇಶಿ ಹಾಗೂ ವಿದೇಶಿ ಮೂಲಗಳಿಂದ ಭಾರಿ ಪ್ರಮಾಣದ ಹಣಹೂಡಿಕೆ ಬೇಕಾಗುತ್ತದೆ.

2018 ರಲ್ಲಿ 296,000 ವೃದ್ಧರು ತಮ್ಮ ಜೀವಿತಾವಧಿಯಲ್ಲಿ ಹೆಚ್ಚು ತಾಪವನ್ನು ತಾಳಲಾರದೆ ಮರಣ ಹೊಂದಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಹೆಚ್ಚಿನ ಜನರು ಹೊರಗಡೆ ಕೆಲಸ ಮಾಡುವುದರಿಂದ ಅವರ ಜೀವ ಅಪಾಯದಲ್ಲದೆ ಎಂದೇ ಹೇಳಬಹುದು. ಭೂಮಿಯ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್‌ ದಾಟಿದರೆ ಭಾರತದಂತಹ ರಾಷ್ಟ್ರಗಳು ಭಾರಿ ಬೆಲೆ ತೆರಬೇಕಾಗುತ್ತದೆ. ಬಿಸಿಗಾಳಿ, ಬರ ಹಾಗೂ ಪ್ರವಾಹದಂತಹ ವಿದ್ಯಮಾನಗಳು ಅಭಿವೃದ್ಧಿಯ ಲಾಭಗಳನ್ನು ಕಸಿಯುತ್ತವೆ ಎಂಬುದು ನಮಗೆ ನೆನಪಿರಬೇಕು. ಜಾಗತಿಕ ತಾಪಮಾನ ಏರಿಕೆಯು ಹವಾಮಾನ ವೈಪರೀತ್ಯದಂತಹ ನೈಸರ್ಗಿಕ ವಿನಾಶಗಳ ಕೆಲವು ಪ್ರವೃತ್ತಿಗಳಿಗೆ ಕಾರಣವಾಗಿರಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.